ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮಿತ್ ಶಾಗೆ ಧರ್ಮ ಸಂಕಟ ತಂದಿತ್ತ ಮುರುಘಾಶ್ರೀಗಳ ಮನವಿ

By Mahesh
|
Google Oneindia Kannada News

Recommended Video

Karnataka Elections 2018 : ಮುರುಘಾ ಮಠದ ಸ್ವಾಮೀಜಿ ಅಮಿತ್ ಶಾಗೆ ತಂದಿಟ್ಟ ಧರ್ಮಸಂಕಟ | Oneindia Kannada

ಚಿತ್ರದುರ್ಗ, ಮಾರ್ಚ್ 28: ತುಮಕೂರಿನ ಸಿದ್ಧಗಂಗಾ, ಶಿವಮೊಗ್ಗದ ಬೆಕ್ಕಿನ ಕಲ್ಮಠ, ಸಿರಿಗೆರೆಯ ಬೃಹನ್ಮಠ, ಚಿತ್ರದುರ್ಗದ ಮುರುಘಾಮಠ, ಮಾದಾರ ಚೆನ್ನಯ್ಯ ಗುರುಪೀಠ ಸೇರಿದಂತೆ 40ಕ್ಕೂ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಧರ್ಮ ಸಂಕಟಕ್ಕೆ ದೂಡುವ ಮನವಿಯನ್ನು ಮುರುಘಾಶ್ರೀಗಳು ಸಲ್ಲಿಸಿದ್ದಾರೆ.

'ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರ್ಕಾರದ ಸಹಕಾರ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ನಮಗೆ ಸಹಕಾರ ನೀಡಬೇಕು' ಎಂದು ಮುರುಘಾಮಠದ ಶಿವಮೂರ್ತಿ ಶರಣರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

'ಅಲ್ಪಸಂಖ್ಯಾತ' ಟ್ಯಾಗ್ ಬೇಡ ಎನ್ನುವ ಲಿಂಗಾಯತರಿವರು!'ಅಲ್ಪಸಂಖ್ಯಾತ' ಟ್ಯಾಗ್ ಬೇಡ ಎನ್ನುವ ಲಿಂಗಾಯತರಿವರು!

ಮನವಿ ಸ್ವೀಕರಿಸಿದ ಶಾ ಅವರು, 'ಈ ವಿಷಯವನ್ನು ಪರಿಶೀಲಿಸಿದ ನಂತರ ತೀರ್ಮಾನ ಕೈಗೊಳ್ಳುತ್ತೇವೆ' ಎಂದು ಹೇಳಿದರು. ಮಂಗಳವಾರದಂದು ಮಠಕ್ಕೆ ಅಮಿತ್ ಶಾ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಪತ್ರ ನೀಡಲಾಯಿತು ಎಂದು ನಂತರ ಸುದ್ದಿಗೋಷ್ಠಿಯಲ್ಲಿ ಮುರುಘಾಶ್ರೀಗಳು ತಿಳಿಸಿದರು.

Lingayat religion : Murugha mutt pontiff backs Karnataka CM and submits request Amit Shah

'ಸಿದ್ದಗಂಗಾ ಮಠ, ಮುರುಘಾಮಠ, ಸಿರಿಗೆರೆ ಮಠ ಸೇರಿದಂತೆ ರಾಜ್ಯದಲ್ಲಿ ಸಾವಿರಾರು ಬಸವ ಪರಂಪರೆಯ ಮಠಗಳಿವೆ. ಎಲ್ಲವೂ ಬಸವಾದಿ ಶರಣರ ತತ್ವ ಪಾಲಿಸುತ್ತಿವೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಸಿಗಬೇಕು ಎಂಬುದು ಬಸವ ಧರ್ಮದ ಅನುಯಾಯಿಗಳ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಬಸವ ಪರಂಪರೆಯ ಮಠಾಧೀಶರ ಪರವಾಗಿ ಅಮಿತ್ ಶಾ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ.

 ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಅಧಿಸೂಚನೆ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಅಧಿಸೂಚನೆ

ಯಾವ ಪಕ್ಷಕ್ಕೆ ಬೆಂಬಲಿಸಬೇಕು ಎಂಬುದನ್ನು ಇನ್ನೂ ಮಠ ನಿರ್ಧರಿಸಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡಿದ ಮಠಾಧೀಶರೊಂದಿಗೆ ಚರ್ಚಿಸಿ ನಂತರ ತಿಳಿಸುವೆ ಎಂದರು. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾತಾ ಮಹಾದೇವಿ ಅವರು ಈಗಾಗಲೇ ಕಾಂಗ್ರೆಸ್ಸಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಚರ್ಚೆ : ಲಿಂಗಾಯತರ ಮತ ಯಾವ ಪಕ್ಷಕ್ಕೆ ಬೀಳಲಿವೆ?ಚರ್ಚೆ : ಲಿಂಗಾಯತರ ಮತ ಯಾವ ಪಕ್ಷಕ್ಕೆ ಬೀಳಲಿವೆ?

English summary
Lingayat separate religion : Murugha Math pontiff has welcomed CM of Karnataka Siddaramaiah's decision and submitted a letter to BJP president Amith shah to support and step to unite the community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X