ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾ.17ರಂದು ಹೊಳಲ್ಕೆರೆ ತಾಲ್ಲೂಕಿನ ಶ್ರೀಲಕ್ಷ್ಮಿ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

|
Google Oneindia Kannada News

ಚಿತ್ರದುರ್ಗ, ಮಾರ್ಚ್ 12: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೊರಕೇರಿದೇವರಪುರ ಪುಣ್ಯಕ್ಷೇತ್ರದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಮಾರ್ಚ್ 17ರಂದು ಮಧ್ಯಾಹ್ನ 3.30ರಿಂದ 4.30ರವರೆಗೆ ನಡೆಯಲಿದೆ.

ಶ್ರೀಲಕ್ಷ್ಮಿನರಸಿಂಹಸ್ವಾಮಿ ಜಾತ್ರೆಯು ಈಗಾಗಲೇ ಮಾರ್ಚ್ 10ರಿಂದ ಪ್ರಾರಂಭವಾಗಿದ್ದು, ಮಾರ್ಚ್ 20ರವರೆಗೆ ನಡೆಯಲಿದೆ. ಮಾರ್ಚ್ 10ರ ಬೆಳಿಗ್ಗೆ ಅಂಕುರಾರ್ಪಣೆ, ರಾತ್ರಿ ಹರಣಿ ಕೊಡುವ ಸೇವೆ ಮಾಡಲಾಗಿದೆ. ಮಾ.11ರಂದು ಬೆಳಿಗ್ಗೆ ಧ್ವಜಾರೋಹಣ, ಪೀಠೋತ್ಸವ, ರಾತ್ರಿ ಪೀಠೋತ್ಸವ ಬೇರಿ ತಾಂಡವ ನೆರವೇರಿಸಲಾಗಿದೆ.

ಚಿತ್ರದುರ್ಗ: ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗಾಗಿ ದೀಪ ಬೆಳಗಿಸುವ ಕಾರ್ಯಕ್ರಮಚಿತ್ರದುರ್ಗ: ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗಾಗಿ ದೀಪ ಬೆಳಗಿಸುವ ಕಾರ್ಯಕ್ರಮ

ಮಾ.12ರಂದು ಬೆಳಗ್ಗೆ ಪಲ್ಲಕ್ಕಿ ಉತ್ಸವ, ರಾತ್ರಿ ಸಿಂಹೋತ್ಸವ, ಮಾ.13ರಂದು ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ಚೌಕಿ ಉತ್ಸವ, ರಾತ್ರಿ ಹನುಮಮಂತೋತ್ಸವಕ್ಕೆ ಸ್ವಾಮಿ ಆಗಮನ, ಹನುಮಂತೋತ್ಸವ, ಮಾ.14ರಂದು ಬೆಳಗ್ಗೆ ಚೌಕಿ ಉತ್ಸವ, ರಾತ್ರಿ ಹನುಮಂತೋತ್ಸವ ನಡೆಯಲಿದೆ.

Lakshmi Narasimha Swamy Brahmarathotsava on March 17th in Holalkere Taluk

ಮಾ.15ರಂದು ಬೆಳಗ್ಗೆ ಶೇಷೋತ್ಸವ, ರಾತ್ರಿ ಮೊದಲ ಮೀಸಲು ಮತ್ತು ಶೇಷೋತ್ಸವ ಮತಿಘಟ್ಟ ಗ್ರಾಮಸ್ಥರಿಂದ, ಮಾ.16ರಂದು ಬೆಳಗ್ಗೆ ಗರುಡೋತ್ಸವ, ರಾತ್ರಿ ಗರುಡೋತ್ಸವ, ರಾತ್ರಿ 10.30ಕ್ಕೆ ಕಲ್ಯಾಣೋತ್ಸವ ನಡೆಯಲಿದೆ.

ಮಾರ್ಚ್ 17ರಂದು ಬೆಳಗ್ಗೆ ಆನೆ ಉತ್ಸವ, ಮಧ್ಯಾಹ್ನ 3.30 ರಿಂದ 4.30 ಗಂಟೆಯರೆಗೆ ಸಲ್ಲುವ ವೃಶ್ಚಿಕಾ ಲಗ್ನದ ಶುಭ ಪುಬ್ಬಾ ನಕ್ಷತ್ರದ ಶುಭಾಂಶದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಬಳಿಕ ಪಾನಕ ಪೂಜಾ ವಸಂತೋತ್ಸವ, ಅನ್ನ ಸಂತರ್ಪಣೆ ಇರಲಿದೆ. ಮಾರ್ಚ್ 18ರಂದು ಬೆಳಿಗ್ಗೆ ಭೂತಬಲಿ ಸೇವಾ, ಧೂಳೋತ್ಸವ, ಪೀಠೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಚೌಕಿ ಉತ್ಸವ, ಅನ್ನಸಂತರ್ಪಣೆ, ಉಯ್ಯಾಲೋತ್ಸವ, ಚೌಕಿ ಉತ್ಸವ, ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ ಅಶ್ವವಾಹನೋತ್ಸವ ಪಾರ್ವಟೋತ್ಸವ ಇರಲಿದೆ.

ಸಿರಿಗೆರೆ ಬೃಹನ್ಮಠದಲ್ಲಿ ಫೆ.28ರಿಂದ 'ಸದ್ಧರ್ಮ ನ್ಯಾಯ ಪೀಠ' ಪುನರಾರಂಭಸಿರಿಗೆರೆ ಬೃಹನ್ಮಠದಲ್ಲಿ ಫೆ.28ರಿಂದ 'ಸದ್ಧರ್ಮ ನ್ಯಾಯ ಪೀಠ' ಪುನರಾರಂಭ

ಮಾರ್ಚ್ 19ರಂದು ಅವಭೃಥ ಪಲ್ಲಕ್ಕಿ ಉತ್ಸವ, ಸಂತರ್ಪಣೆ, ಪೀಠೋತ್ಸವ ನಡೆಯಲಿದೆ. ಮಾರ್ಚ್ 19ರಂದು ನವಿಲೋತ್ಸವಕ್ಕೆ ಸ್ವಾಮಿಯು ಆಗಮಿಸಲಿದ್ದು, ರಾತ್ರಿ 9:30ಕ್ಕೆ ಹೂವಿನ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ಮಾರ್ಚ್ 20ರಂದು ಶಯನೋತ್ಸವ, ರಥಕ್ಕೆ ಅರಿಶಿನ, ಕುಂಕುಮ ಸೇವೆ ನೇರವೇರಲಿದೆ.

ಬ್ರಹ್ಮರಥೋತ್ಸವದಲ್ಲಿ ಹೊಳಲ್ಕೆರೆ ಶಾಸಕರು ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಈ. ಬಾಲಕೃಷ್ಣ, ಉಪ ವಿಭಾಗಾಧಿಕಾರಿ ಆರ್. ಚಂದ್ರಯ್ಯ, ತಹಶೀಲ್ದಾರ್ ಎಂ. ರಮೇಶ ಚಾರಿ, ಮುಜಾರಾಯಿ ತಹಶೀಲ್ದಾರ ಬಿ.ಎಸ್. ವೆಂಕಟೇಶ್, ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಉಪ ತಹಶೀಲ್ದಾರ ಅಶೋಕ, ತಾಳ್ಯದ ರಾಜಸ್ವ ನಿರೀಕ್ಷಕರು ಎಂ.ಜಿ. ವೆಂಕಟೇಶ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

English summary
Sri Lakshmi Narasimha Swamy Brahmarathotsava at Holalkere Taluk in Chitradurga district will be held on March 17 from 3.30 pm to 4.30 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X