ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರಿಗೆ ನೌಕರರ ಕ್ಷಮೆ ಕೋರಿದ ಡಿಸಿಎಂ ಲಕ್ಷ್ಮಣ ಸವದಿ

|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್ 08: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸಾರಿಗೆ ನೌಕರರ ಕ್ಷಮೆ ಕೋರಿದ್ದಾರೆ.

ಸರ್ಕಾರದಲ್ಲಿ ಹಣ ಕೊರತೆಯಿಂದಾಗಿ ಸಾರಿಗೆ ಇಲಾಖೆಯ ಕಲಬುರಗಿ, ಹುಬ್ಬಳ್ಳಿ ವಿಭಾಗದ ನೌಕರರಿಗೆ ಸಂಬಳ ನೀಡುವುದು ತಡವಾಗಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.

ಲಕ್ಷ್ಮಣ ಸವದಿಗೆ ಪರಿಹಾರ ಕೊಡಲು ಭಿಕ್ಷೆ ಎತ್ತಿದ ರೈತರು!ಲಕ್ಷ್ಮಣ ಸವದಿಗೆ ಪರಿಹಾರ ಕೊಡಲು ಭಿಕ್ಷೆ ಎತ್ತಿದ ರೈತರು!

ಸರ್ಕಾರದ ವತಿಯಿಂದ ನೌಕರರ ಕ್ಷಮೆ ಕೋರಿದ ಲಕ್ಷ್ಮಣ ಸವದಿ, 'ಅಕ್ಟೋಬರ್ 09 ರಂದು ಸಂಬಳ ಪಾವತಿ ಮಾಡುತ್ತೇವೆ' ಎಂದು ಅವರು ಹೇಳಿದರು.

Lakshman Savadhi Asked Sorry To KSRTC Employees

ನೆರೆ ಪರಿಹಾರದ ಬಗ್ಗೆ ಮಾತನಾಡಿದ ಲಕ್ಷ್ಮಣ ಸವದಿ, 'ಪರಿಹಾರಕ್ಕಾಗಿ ದೇವೇಗೌಡ ಅವರು ಹೋರಾಟ ಮಾಡುವ ಅಗತ್ಯತೆಯೇ ಇಲ್ಲ ಕೇಂದ್ರದಿಂದ ಇನ್ನೂ ಹೆಚ್ಚಿನ ಪರಿಹಾರ ಬರುತ್ತದೆ' ಎಂದು ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೆ ಕೇಂದ್ರದಿಂದ ಹೆಚ್ಚಿನ ಹಣ ಬಂದಿಲ್ಲ ಎನಿಸಿರಬಹುದು ಅದು ಅವರ ಅಭಿಪ್ರಾಯ, ಆದರೆ ಅವರು ಸುಳ್ಳು ಹೇಳಿ ಜನರ ದಾರಿ ತಪ್ಪಿಸಬಾರದು, ನಿಖರವಾದ ಅಂಕಿ-ಅಂಶಗಳನ್ನು ಜನರ ಮುಂದಿಡಲಿ ಎಂದು ಲಕ್ಷ್ಮಣ ಸವದಿ ಹೇಳಿದರು.

ರೈತರು ಕೇಳಿದಷ್ಟು ಪರಿಹಾರ ಕೊಡಲು ಆಗದು: ಡಿಸಿಎಂ ಲಕ್ಷ್ಮಣ ಸವದಿರೈತರು ಕೇಳಿದಷ್ಟು ಪರಿಹಾರ ಕೊಡಲು ಆಗದು: ಡಿಸಿಎಂ ಲಕ್ಷ್ಮಣ ಸವದಿ

ಯಡಿಯೂರಪ್ಪ ಅವರ ಕುರಿತು ಎದುರಾದ ಪ್ರಶ್ನೆಗೆ ಉತ್ತರಿಸಿದ ಸವದಿ, 'ಯಡಿಯೂರಪ್ಪ ಅವರು ನಮ್ಮ ನಾಯಕರು ಅವರನ್ನು ಸೈಡ್‌ಲೈನ್ ಮಾಡುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದರು.

English summary
DCM Lakshman Savadhi asked sorry to KSRTC employees of Kalburgi and Hubli Devission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X