ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್‌ಆರ್‌ಟಿಸಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ; ಆರೋಪಿಗಳ ಬಂಧನ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್ 27: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ ಜನವರಿ 2019ನೇ ಸಾಲಿನಲ್ಲಿ ಕರೆಯಲಾಗಿದ್ದ ಸಂಚಾರಿ ನಿರೀಕ್ಷಕರು ಹಾಗೂ ಸಹಾಯಕ ಸಂಚಾರಿ ನಿರೀಕ್ಷಕರ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 70 ಲಕ್ಷ ರೂಪಾಯಿ ಹಣವನ್ನು ವಂಚನೆ ಮಾಡಿರುವ ಐವರು ಆರೋಪಿಗಳನ್ನು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

ವಂಚನೆಗೆ ಒಳಗಾಗಿದ್ದ ಅಭಿಷೇಕ್ ಎಂಬುವವರು ಅ. 9 ರಂದು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು.

ವಂಚನೆ ಆರೋಪಿಗಳನ್ನು ಪತ್ತೆ ಹಚ್ಚಲು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹಾನಿಂಗ. ಬಿ. ನಂದಗಾವಿ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ರೋಷನ್ ಜಮೀರ್ ಉಸ್ತುವಾರಿಯಲ್ಲಿ, ಹೊಸದುರ್ಗ ಸಿಪಿಐ ಎಂ.ಡಿ. ಫೈಜುಲ್ಲಾ ನೇತೃತ್ವದಲ್ಲಿ ಹೊಸದುರ್ಗ ಠಾಣೆಯ ಪಿಎಸ್ಐ ಶಿವಕುಮಾರ್ ಮತ್ತು ಶ್ರೀರಾಂಪುರ ಠಾಣೆಯ ಪಿಎಸ್ಐ ನಾಗರಾಜ್ ಹಾಗೂ ಸಿಬ್ಬಂದಿಗಳ ಸೇರಿದಂತೆ ತಂಡವೊಂದನ್ನು ರಚನೆ ಮಾಡಲಾಗಿತ್ತು.

Chitradurga: Lakhs Of Rupees Fraud In Believed To be Given Government Jobs; Arrested Of Accused

ಬಂಧಿತ ಆರೋಪಿಗಳು:

ಬಾದಾಮಿ ತಾಲ್ಲೂಕಿನ ಮಹಮ್ಮದ್‌ಸಾಬ್ ಅಲ್ಲಾಸಾಬ್ ಭಾಗವಾನ್, ವಿಜಯಪುರ ನಗರದ ಬಸವರಾಜ, ಬಾಗಲಕೋಟೆಯ ವೀರಭದ್ರಪ್ಪ ಸೋಮಲಿಂಗಪ್ಪ ಅರಗಿನಶೆಟ್ಟಿ ಅವರನ್ನು ಬಂಧಿಸಲಾಗಿದೆ. ಅಲ್ಲದೆ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಬಿ.ಮಂಜುನಾಥ ಅಲಿಯಾಸ್ ಮಂಜುನಾಥ ಬಿಲ್ಯ ನಾಯ್ಕ ಹಾಗೂ ಅನಿಲ್ ಕುಮಾರ್ ಎಂಬ ಇಬ್ಬರನ್ನು ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 16.40 ಲಕ್ಷ ನಗದು ಹಣ, ಕೃತ್ಯಕ್ಕೆ ಉಪಯೋಗಿಸಿದ್ದ 5 ಲಕ್ಷ ರೂ. ಬೆಲೆಬಾಳುವ ಸ್ಕೋಡ ಕಾರು ಹಾಗೂ ಆರೋಪಿತರು ಸೃಷ್ಟಿಸಿದ್ದ ನಕಲಿ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಂಚಕ ಆರೋಪಿಗಳ ಬಂಧನ ಕಾರ್ಯವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ಆರೋಪಿಗಳು ವಂಚನೆ ಮಾಡಿದ ವಿಧಾನ
ಆರೋಪಿತರು ನಮಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಪರಿಚಯವಿದ್ದು, ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ ಪರಿಚಯವಿರುತ್ತದೆ. ಸರ್ಕಾರಿ ಕೆಲಸಗಳನ್ನು ಮಾಡಿಸಿ ಕೊಡುತ್ತೇವೆ ಎಂದು ಸರ್ಕಾರಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದವರನ್ನು ನಂಬಿಸಿ 2019ರ ಜನವರಿಯಲ್ಲಿ ಕೆಎಸ್‌ಆರ್‌ಟಿಸಿ ಇಲಾಖೆಯಲ್ಲಿ ಕರೆಯಲಾಗಿರುವ ಸಂಚಾರಿ ನಿರೀಕ್ಷಕರು ಹಾಗೂ ಸಹಾಯಕ ಸಂಚಾರಿ ನಿರೀಕ್ಷಕರ ಹುದ್ದೆಗಳನ್ನು ಕೊಡಿಸುವುದಾಗಿ ಆಸೆ ಹುಟ್ಟಿಸಿ, ಅಭ್ಯರ್ಥಿಗಳಿಂದ ದಾಖಲಾತಿಗಳನ್ನು ಪಡೆದು ಹಗರಿಬೊಮ್ಮನಹಳ್ಳಿ ತಾಲ್ಲೂಕು, ಮಾನ್ವಿ ಡ್ಯಾಂ ಹತ್ತಿರ ಇರುವ ಕೆಎಸ್‌ಆರ್‌ಟಿಸಿ ತರಬೇತಿ ಕೇಂದ್ರದ ಮುಂಭಾಗದಲ್ಲಿ ಹಾಗೂ ಹಗರಿಬೊಮ್ಮನಹಳ್ಳಿ ಪ್ರವಾಸಿ ಮಂದಿರದಲ್ಲಿ ಸಂದರ್ಶನ ನಡೆಸಿದ್ದಾರೆ.

Chitradurga: Lakhs Of Rupees Fraud In Believed To be Given Government Jobs; Arrested Of Accused

ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಮಾಡಿಸಿ, ನಕಲಿ ಆದೇಶಗಳನ್ನು ನೀಡಿರುತ್ತಾರೆ. ಇದಾದ ಬಳಿಕ ಅಭ್ಯರ್ಥಿಗಳು ಕೆಲಸಕ್ಕಾಗಿ ಸೇರಲು ಸಂಬಂಧಪಟ್ಟ ಕೆಎಸ್‌ಆರ್‌ಟಿಸಿ ಡಿಪೋಗಳಿಗೆ ಹೋದಾಗ ಆರೋಪಿತರು ನಕಲಿ ಆದೇಶಗಳನ್ನು ಕೊಟ್ಟು ಮೋಸ ಮಾಡಿರುವುದು ಗೊತ್ತಾಗಿದೆ. ಆರೋಪಿತರು ಇದೇ ರೀತಿ ಸುಮಾರು 500 ಜನ ಅಭ್ಯರ್ಥಿಗಳಿಗೆ ಮೋಸ ಮಾಡಿರುವುದಾಗಿ ತಿಳಿದು ಬಂದಿದೆ.

Recommended Video

ಚೆನ್ನಾಗಾಡ್ತಿಲ್ಲ,ಫಿಟ್ನೆಸ್ ಸಮಸ್ಯೆ,ಇಷ್ಟಾದ್ರೂ ಯಾಕ್ ಗುರೂ ಇವ್ನುನ್ ಬಿಡ್ತಾಯಿಲ್ಲ | Oneindia

English summary
Chitradurga Police Arrested of Accuses due to lakhs of rupees Fraud in believed to be given KSRTC government Jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X