• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸದುರ್ಗದಲ್ಲಿ ಗೆದ್ದು ಹೊಸ ದಾಖಲೆ ಬರೆದ ಗೂಳಿಹಟ್ಟಿ ಶೇಖರ್!

By Gururaj
|
Google Oneindia Kannada News

ಚಿತ್ರದುರ್ಗ, ಮೇ 22 : ಮಾಜಿ ಸಚಿವ ಗೂಳಿಹಟ್ಟಿ ಶೇಖರ್ 2018ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಹೊಸದುರ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಗೂಳಿಹಟ್ಟಿ ಶೇಖರ್ ಈ ಬಾರಿಯ ಚುನಾವಣೆಯಲ್ಲಿ 90,562 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್‌ನ ಬಿ.ಜಿ.ಗೋವಿಂದಪ್ಪ ಅವರನ್ನು ಸೋಲಿಸಿದ್ದಾರೆ. 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗೂಳಿಹಟ್ಟಿ ಶೇಖರ್‌ ಅವರನ್ನು ಬಿ.ಜಿ.ಗೋವಿಂದಪ್ಪ ಸೋಲಿಸಿದ್ದರು.

ಕೋಟೆಗಳ ನಾಡು ಚಿತ್ರದುರ್ಗ ಇನ್ಮುಂದೆ ಬಿಜೆಪಿ ಭದ್ರಕೋಟೆ.!ಕೋಟೆಗಳ ನಾಡು ಚಿತ್ರದುರ್ಗ ಇನ್ಮುಂದೆ ಬಿಜೆಪಿ ಭದ್ರಕೋಟೆ.!

1952ರಿಂದ 2013ರ ತನಕ ಕ್ಷೇತ್ರದಲ್ಲಿ 15 ಚುನಾವಣೆ ನಡೆದಿದೆ. ಆದರೆ, ಎಂದೂ ಬಿಜೆಪಿ ಅಭ್ಯರ್ಥಿ ಗೆದ್ದಿಲ್ಲ. 2018ರಲ್ಲಿ ಗೂಳಿಹಟ್ಟಿ ಶೇಖರ್ ಅವರು ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಹೊಸ ದಾಖಲೆ ಮಾಡಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್ 8 ಬಾರಿ, ಪಕ್ಷೇತರರು 5 ಬಾರಿ, ಪಿಎಸ್‌ಪಿ ಮತ್ತು ಜೆಎನ್‌ಪಿ ಅಭ್ಯರ್ಥಿಗಳು ತಲಾ 1 ಬಾರಿ ಗೆಲುವು ಸಾಧಿಸಿದ್ದಾರೆ. 1981ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆರ್.ನಾಗರಾಜಗುಪ್ತಾ ಅವರು ಸ್ಪರ್ಧಿಸಿ 5 ಸಾವಿರ ಮತಗಳ ಅಂತರದಿಂದ ಸೋತಿದ್ದರು.

ಕ್ಷೇತ್ರ ಪರಿಚಯ : ಹೊಸದುರ್ಗ, ಹೊಸ ಫಲಿತಾಂಶದ ನಿರೀಕ್ಷೆಕ್ಷೇತ್ರ ಪರಿಚಯ : ಹೊಸದುರ್ಗ, ಹೊಸ ಫಲಿತಾಂಶದ ನಿರೀಕ್ಷೆ

2004ರಲ್ಲಿ ಡಿ.ಗುರುಸ್ವಾಮಿ, 2008ರಲ್ಲಿ ಎಸ್.ಲಿಂಗಮೂರ್ತಿ, 2013ರ ಚುನಾವಣೆಯಲ್ಲಿ ಎಂ.ಲಕ್ಷ್ಮಣ್ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳಿದೆ.

2008ರ ಚುನಾವಣೆಯಲ್ಲಿ ಗೂಳಿಹಟ್ಟಿ ಶೇಖರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಜಯಗಳಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಸಹಕಾರ ನೀಡಿ, ಯಡಿಯೂರಪ್ಪ ಸಂಪುಟದಲ್ಲಿ ಯುವಜನ ಸೇವೆ, ಕ್ರೀಡೆ ಹಾಗೂ ಜವಳಿ ಸಚಿವರಾಗಿ ಕೆಲಸ ಮಾಡಿದ್ದರು.

English summary
Former minister Goolihatti Shekar made a record after won in Hosadurga assembly constituency, Chitradurga in Karnataka assembly elections 2018. For the 1st time BJP candidate won Hosadurga constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X