• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

''ಅನುಭವ ಪರಿಗಣಿಸಿ, ನನಗೆ ಸಚಿವ ಸ್ಥಾನ ಕೊಟ್ರೆ ಸಂತೋಷ''

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 18: ಕೇಂದ್ರದಲ್ಲಿ ಸಚಿವ ಸಂಪುಟ ವಿಸ್ತರಣೆ ಬಳಿಕ ಕರ್ನಾಟಕದಲ್ಲಿ ಸಂಪುಟದ ವಿಸ್ತರಣೆ ಅಥವಾ ಪುನರ್ ರಚನೆಯಾಗುತ್ತದೆ ಎಂಬ ಸುದ್ದಿ ಕೆಲ ಕಾಲದಿಂದ ಹಬ್ಬಿದೆ. ಸಚಿವ ಸ್ಥಾನ ಆಕಾಂಕ್ಷಿಗಳ ಪೈಕಿ ಚಿತ್ರದುರ್ಗದ ಹಿರಿಯ ಶಾಸಕ ಜಿ. ಎಚ್. ತಿಪ್ಪಾರೆಡ್ಡಿ ಕೂಡಾ ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ತಿಪ್ಪಾರೆಡ್ಡಿ ಇಂದು ಪ್ರತಿಕ್ರಿಯಿಸಿದ್ದಾರೆ.

''ಸಿಎಂ ಯಡಿಯೂರಪ್ಪ‌ ಅವರ ರಾಜೀನಾಮೆ ವಿಚಾರವಾಗಿ ನಾನು ಮಾತನಾಡಲಾರೆ, ನಮ್ಮ ಪಕ್ಷದ ಶಿಸ್ತು ನಮಗೆ ಮುಖ್ಯ, ರಾಜ್ಯಾಧ್ಯಕ್ಷರು ಈ ಬಗ್ಗೆ ಯಾರೂ ಮಾತನಾಡಬಾರದೆಂದು ಆದೇಶಿಸಿದ್ದಾರೆ. ಇದರಿಂದ ನಾನು ಏನನ್ನು ಮಾತನಾಡಲಾರೆ'' ಎಂದು ತಿಪ್ಪಾರೆಡ್ಡಿ ಹೇಳಿದರು.

ಸಚಿವ ಸ್ಥಾನ ಕೊಡುವ ವಿಚಾರ:
ಕೇಂದ್ರದ ಮಾದರಿಯಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ''ನನಗೆ ಅದರ ಬಗ್ಗೆ ಗೊತ್ತಿಲ್ಲ, ನನಗೆ ಸಚಿವ ಸ್ಥಾನ ಸಿಕ್ಕರೆ ಸಂತೋಷದಿಂದ ಸ್ಚೀಕರಿಸುತ್ತೇನೆ, ಜಿಲ್ಲೆ ಹಾಗೂ ರಾಜ್ಯದ ಜನತೆಗೆ ಹೆಚ್ಚಿನ ಸೇವೆ ಮಾಡುತ್ತೇನೆ,'' ಎಂದರು.

''ನಾನು 51 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, 28 ವರ್ಷಗಳಿಂದ ಶಾಸಕನಾಗಿದ್ದೇನೆ ಕೊಟ್ಟರೆ ಸಂತೋಷ, ಕೊಡದೇ ಹೋದರೆ ಶಾಸಕನಾಗಿಯೇ ಮುಂದುವರೆದು ಕ್ಷೇತ್ರದ ಜನರ ಸೇವೆ ಮಾಡುತ್ತೇನೆ,'' ಎಂದು ಹೇಳಿದರು.

   ಮುಂಗಾರು ಅಧಿವೇಶನಕ್ಕೂ ಮುನ್ನ ಹೊಸಮುಖಗಳಿಗೆ ಮಣೆ ಹಾಕಿದ Sonia Gandhi | Oneindia Kannada

   ಶಾಸಕಾಂಗ ಪಕ್ಷದ ಸಭೆ ಎಂದು ಕೆಲವು ಮಾಧ್ಯಮಗಳಲ್ಲಿ ಬಂದಿದೆ.
   ನಮಗೆ ಬಂದಿರುವ ಪ್ರಕಾರ ಔತಣಕೂಟ ಎಂದಿದೆ. ಸಿಎಂ ಶಾಸಕಾಂಗ ಸಭೆಗೆ ಹೋಗಲೇಬೇಕು, ಸಿಎಂ ಹಾಗೂ ಪಕ್ಷದ ಅದೇಶ ಪಾಲಿಸಲೇಬೇಕು, ಸಿಎಂ ಕಚೇರಿಯಿಂದ ಎರಡು ವರ್ಷಗಳ ಸಿಎಂ ಅಧಿಕಾರವಧಿಗಾಗಿ ಔತಣಕೂಟಕ್ಕೆ ಎಂದು ಹೇಳಲಾಗಿದೆ. ಇನ್ನೂ ಒಂದು ವಾರ ಸಮಯವಿದೆ ನೋಡೋಣ, ಹೋಗುತ್ತೇನೆ ಎಂದರು ಹೇಳಿದರು.

   English summary
   Karnataka Cabinet Expansion: Chitradurga MLA Thippareddy eager to get into BS Yediyurappa Cabinet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X