ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ ಜಿಲ್ಲೆಯ ಕಂಚಿಪುರದಲ್ಲಿ ದುಡ್ಡಿನ ಜಾತ್ರೆ; ಹಣ ಆಯ್ದುಕೊಳ್ಳಲು ನೆರೆದ ಜನಸಾಗರ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್‌, 20: ಸಾಮಾನ್ಯವಾಗಿ ರಾಜ್ಯದೆಲ್ಲೆಡೆ ಎಲ್ಲ ದೇವಾಲಯಗಳಲ್ಲೂ ವಿಜಯದಶಮಿಯ ದಿನದಂದು ಅಂಬು ಹೊಡೆಯುತ್ತಾರೆ. ಆದರೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚಿಪುರ ಗ್ರಾಮದ ಕಂಚಿವರದರಾಜ ಸ್ವಾಮಿಗೆ ಉತ್ತರೆ ಮಳೆಯ ಸಂದರ್ಭದಲ್ಲಿ ಅಂಬು ಹೊಡೆಯಲಾಗುತ್ತದೆ. ಅಲ್ಲದೆ ಇದೇ ಸಂದರ್ಭದಲ್ಲಿಯೇ ವರ್ಷಕ್ಕೆ ಒಮ್ಮೆ ಮಾತ್ರ ದೇವರಿಗೆ ಉತ್ತರೆ ಮಳೆ ನೀರಿನಲ್ಲಿ ನಾಮ ಧರಿಸುವ ಸಂಪ್ರದಾಯವೂ ರೂಡಿಯಲ್ಲಿದೆ.

ವಿಷ್ಣುವಿನ ಇನ್ನೊಂದು ಹೆಸರೇ ವರದರಾಜ. ಈ ಕಂಚಿವರದರಾಜ ಸ್ವಾಮಿಯ ದೇವಸ್ಥಾನ ಕಂಚಿಪುರದಲ್ಲಿದೆ. ಇಲ್ಲಿನ ದೇವರಿಗೆ ದುಡ್ಡಿನ ಹರಕೆ ಮಾಡಿಕೊಳ್ಳುವ ಸಾಂಪ್ರದಾಯಿಕ ಆಚರಣೆ ರೂಡಿಯಲ್ಲಿದೆ. ನಂತರ ಹರಕೆ ಕಟ್ಟಿಕೊಂಡವರು ದೇವರ ಮೇಲೆ ಚಿಲ್ಲರೆ ನಾಣ್ಯಗಳನ್ನು ಎಸೆಯುತ್ತಾರೆ. ಹಣವನ್ನು ಹುಂಡಿಗೆ ಹಾಕುವಂತಿಲ್ಲ. ಇಷ್ಟಾರ್ಥ ಸಿದ್ದಿಯಾದವರು ಸಹ ಹಣವನ್ನು ದೇವರ ಹುಂಡಿಗಾಗಲಿ ಅಥವಾ ಆಡಳಿತ ಮಂಡಳಿಗಾಗಲಿ ನೀಡುವಂತಿಲ್ಲ. ಬದಲಾಗಿ ದೇವರಿಗೆ ಎಸೆಯುವ ಮೂಲಕ ತಮ್ಮ ಹರಕೆ ಈಡೇರಿಸಿಕೊಳ್ಳುತ್ತಾರೆ. ಇನ್ನು ಈ ಹಣವನ್ನು ಆಯ್ದುಕೊಳ್ಳಲು ಸಾಕಷ್ಟು ಜನರು ಬರುತ್ತಾರೆ. ಹೀಗೆ ದೇವರ ಮೇಲೆ ತೂರಿದ ಹಣವನ್ನು ಆಯ್ದುಕೊಳ್ಳಲು ಭಕ್ತರು ದೇವರ ಹಿಂದೆಯೇ ಬಟ್ಟೆ ಹಿಡಿದುಕೊಂಡು ಹೋಗುತ್ತಾರೆ.

ವಾಣಿ ವಿಲಾಸ ಸಾಗರ ಕೋಡಿ ಬೀಳಲು ಅರ್ಧ ಅಡಿ ಬಾಕಿ, ಮುನ್ನೆಚ್ಚರಿಕೆ ಕ್ರಮಗಳೇನು?ವಾಣಿ ವಿಲಾಸ ಸಾಗರ ಕೋಡಿ ಬೀಳಲು ಅರ್ಧ ಅಡಿ ಬಾಕಿ, ಮುನ್ನೆಚ್ಚರಿಕೆ ಕ್ರಮಗಳೇನು?

ಹರಕೆ ತೀರಿಸುವ ವಿಧಾನಗಳು

ಭಕ್ತರು ಕಷ್ಟ ನಿವಾರಣೆಗೆ, ಉದ್ಯೋಗ, ಮದುವೆ, ಸಂತಾನ ಭಾಗ್ಯ ಸೇರಿದಂತೆ ಇನ್ನಿತರ ಬೇಡಿಕೆಯಿಟ್ಟು ಹರಕೆ ಹೊತ್ತುಕೊಳ್ಳುತ್ತಾರೆ. ತಾವು ಅಂದುಕೊಂಡಿದ್ದು ಈಡೇರಿದರೆ ಅದಕ್ಕೆ ಪ್ರತಿಯಾಗಿ ಹಣವನ್ನು ನೀಡುವುದಾಗಿ ಕೋರಿಕೊಳ್ಳುತ್ತಾರೆ. ಭಕ್ತರು ತಮ್ಮ ಬೇಡಿಕೆ ಈಡೇರಿದ ನಂತರ ಜಾತ್ರೆ ಸಂದರ್ಭದಲ್ಲಿ ಹರಕೆ ತೀರಿಸುತ್ತಾರೆ. ಜಾತ್ರೆ ಆರಂಭವಾದ ದಿನ ಅಂಬಿನೋತ್ಸವ ನಡೆಯುತ್ತದೆ. ಒಂದು ವಾರಗಳ ಕಾಲ ಜಾತ್ರೆ ನಡೆಯುತ್ತದೆ. ಅಂಬಿನ ಬೆಳಗಿನ ಜಾವ 16 ಸೇರಿನ ಅಕ್ಕಿಯ ಪ್ರಸಾದ ತಯಾರಿಸಿ ಭಕ್ತರಿಗೆ ನೀಡಲಾಗುತ್ತದೆ.

Kanchi Varadaraja Jatra at Kanchipuram in Chitradurga District; People flock to collect money

ತಿರುಪತಿಯಿಂದ ಬಂದ ವರದರಾಜ

ಇಲ್ಲಿ ಹರಕೆ ಹೊತ್ತುಕೊಂಡರೆ ದೆವ್ವ, ಪಿಶಾಚಿ ಕಾಟದಿಂದ ಮುಕ್ತಿ ಸಿಗುತ್ತದೆ. ಒಳ್ಳೆಯ ಉದ್ಯೋಗ ದೊರೆಯತ್ತದೆ, ಸಂತಾನ ಪ್ರಾಪ್ತಿ ಆಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರದ್ದಾಗಿದೆ. ವರದರಾಜ ಸ್ವಾಮಿ ತಿರುಪತಿಯಿಂದ ಬಂದು ಇಲ್ಲಿಯೇ ನಲೆಯೂರಿದ್ದಾನೆ ಎಂದು ಹೇಳಲಾಗುತ್ತಿದೆ. ವರದರಾಜನಿಗೆ ವರ್ಷಕ್ಕೊಮ್ಮೆ ಮಾತ್ರ, ಅಂದರೆ ಜಾತ್ರೆಯ ಸಂದರ್ಭದಲ್ಲಿ ಮಾತ್ರ ನಾಮ ಹಾಕಲಾಗುತ್ತದೆ. ಜಾತ್ರೆಗೆ ಬರುವವರು ತಮ್ಮ ಜೊತೆ ಚೀಲಗಳನ್ನೂ ಹಿಡಿದುಕೊಂಡು ಬರುತ್ತಾರೆ. ಹಣವನ್ನು ಆರಿಸಿಕೊಳ್ಳಲು ಸಾಕಷ್ಟು ಜನಸಾಗರವೆ ನೆರೆಯುತ್ತದೆ.

Kanchi Varadaraja Jatra at Kanchipuram in Chitradurga District; People flock to collect money

ಜಾತ್ರೆಯಲ್ಲಿ ಹಾಲಿ ಹಾಗೂ ಮಾಜಿ ಶಾಸಕರು ಭಾಗಿ

ಇನ್ನು ಈ ಜಾತ್ರೆಯಲ್ಲಿ ಹಾಲಿ ಶಾಸಕ ಗೂಳಿಹಟ್ಟಿ ಡಿ.ಶೇಖರ್, ಹಾಗೂ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಸೇರಿದಂತೆ ಮತ್ತಿತರರು ಜಾತ್ರೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಾಣಲು ದೇವರಲ್ಲಿ ಬೇಡಿಕೊಂಡಿದ್ದಾರೆ ಎನ್ನಲಾಗಿದೆ.

English summary
Kanchi Varadaraja Swami of Kancheepura village in Chitradurga district has a tradition of nama the Lord year, and devotees throw money to the deity. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X