ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದಲ್ಲಿ ಜನಾರ್ದನ ಸ್ವಾಮಿ ಬಿರುಸಿನ ಪ್ರಚಾರ

|
Google Oneindia Kannada News

ಚಿತ್ರದುರ್ಗ, ಏ. 2 : ಕೋಟೆನಾಡು ಚಿತ್ರದುರ್ಗದಲ್ಲಿ ಚುನಾವಣೆ ಕಣ ರಂಗೇರಿದೆ. ಎರಡನೇ ಬಾರಿ ಕ್ಷೇತ್ರದಿಂದ ಆಯ್ಕೆ ಬಯಸಿರುವ ಬಿಜೆಪಿ ಅಭ್ಯರ್ಥಿ ಜನಾರ್ದನ ಸ್ವಾಮಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿದ್ದ ಬಂಡಾಯ ಶಮನಗೊಂಡಿದ್ದು ಕಾಂಗ್ರೆಸಿಗರು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

2009ರಲ್ಲಿ ಚುನಾವಣೆಯಲ್ಲಿ 370,920 ಮತಗಳನ್ನು ಪಡೆದು ಜನಾರ್ದನ ಸ್ವಾಮಿ ಸಂಸತ್ ಪ್ರವೇಶಿಸಿದ್ದರು. ಈ ಬಾರಿ ಸಹ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಅವರು, ಮೋದಿ ಅಲೆ ಮತ್ತು ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರಲ್ಲಿನ ಒಡಕನ್ನು ಉಪಯೋಗಿಸಿಕೊಂಡು ಗೆಲ್ಲಬಹುದು ಎಂದು ತಂತ್ರಗಾರಿಕೆ ರೂಪಿಸಿದ್ದಾರೆ.[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]

ಕ್ಷೇತ್ರದಲ್ಲಿ ಪ್ರಮುಖ ಪಕ್ಷಗಳು ಸೇರಿ 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಡಾ.ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ ಉಮೇದುವಾರಿಕೆ ವಾಪಾಸು ಪಡೆದಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಕೊನೇ ದಿನ ಪಕ್ಷೇತರು ಸೇರಿ ಒಟ್ಟು ಐದು ಅಭ್ಯರ್ಥಿಗಳು ನಾಮಪತ್ರ ವಾಪಾಸು ಪಡೆದು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಚಿತ್ರಗಳಲ್ಲಿ ನೋಡಿ ಜನಾರ್ದನ ಸ್ವಾಮಿ [ಚಿತ್ರದುರ್ಗ ಕ್ಷೇತ್ರದ ಕಿರುಪರಿಚಯ]

ಜನಾರ್ದನ ಸ್ವಾಮಿ ಬಿರುಸಿನ ಪ್ರಚಾರ

ಜನಾರ್ದನ ಸ್ವಾಮಿ ಬಿರುಸಿನ ಪ್ರಚಾರ

ಚಿತ್ರದುರ್ಗ ಕ್ಷೇತ್ರದಿಂದ ಎರಡನೇ ಬಾರಿ ಜನಾರ್ದನ ಸ್ವಾಮಿ ಸ್ಪರ್ಧಿಸುತ್ತಿದ್ದು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಜನರ ಬಳಿ ಮತಯಾಚನೆ

ಜನರ ಬಳಿ ಮತಯಾಚನೆ

ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಜನರನ್ನು ಭೇಟಿ ಮಾಡುವ ಮೂಲಕ ಜನಾರ್ದನ ಸ್ವಾಮಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಹೊಳಲ್ಕೆರೆಯಲ್ಲಿ ಕಾರ್ಯಕರ್ತರ ಸಭೆ

ಹೊಳಲ್ಕೆರೆಯಲ್ಲಿ ಕಾರ್ಯಕರ್ತರ ಸಭೆ

ಹೊಳಲ್ಕೆರೆಯ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಜನಾರ್ದನ ಸ್ವಾಮಿ ಅವರು, ಗೆಲುವಿಗಾಗಿ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.

ಪಾವಗಡದಲ್ಲಿ ಕಾರ್ಯಕರ್ತರ ಸಭೆ

ಪಾವಗಡದಲ್ಲಿ ಕಾರ್ಯಕರ್ತರ ಸಭೆ

ಪಾವಗಡದ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಜನಾರ್ದನ ಸ್ವಾಮಿ ಅವರು, ಬಿಜೆಪಿಯ ಧ್ಯೇಯದ್ದೇಶಗಳನ್ನು ಜನರಿಗೆ ತಲುಪಿಸಿ ಮತ ಕೇಳುವಂತೆ ಮನವಿ ಮಾಡಿದರು.

ಕಣದಲ್ಲಿರುವ ಅಭ್ಯರ್ಥಿಗಳು

ಕಣದಲ್ಲಿರುವ ಅಭ್ಯರ್ಥಿಗಳು

ಬಿಜೆಪಿಯ ಜನಾರ್ದನ ಸ್ವಾಮಿ, ಕಾಂಗ್ರೆಸ್ ಪಕ್ಷದ ಬಿ.ಎನ್. ಚಂದ್ರಪ್ಪ, ಬಿಎಸ್ಪಿಯ ಟಿ.ಡಿ. ರಾಜಗಿರಿ, ಜೆಡಿಎಸ್ ನ ಗೂಳಿಹಟ್ಟಿ ಡಿ.ಶೇಖರ್, ಜೆಡಿಯುನ ಎಂ.ಕುಂಭಯ್ಯ, ಎಸ್ಪಿಯ ಎಸ್.ಮೀಠ್ಯಾನಾಯ್ಕ, ಎಎಪಿಯ ಮೋಹನ ದಾಸರಿ, ಅಂಬೇಡ್ಕರ್ ನ್ಯಾಷನಲ್ ಕಾಂಗ್ರೆಸ್ ನ ಎಚ್.ಸಿದ್ದಗಂಗಪ್ಪ, ಪಕ್ಷೇತರರಾದ ಟಿ. ಗಣೇಶ್, ದಯಾನಂದ, ಬಸವನಾಗಿದೇವ ಶರಣರು, ಟಿ.ಭಾವನ, ಎನ್.ಎಸ್. ಮಂಜುನಾಥ ನೆರೇನಹಾಳ್ ಮತ್ತು ಟಿ.ಸೋಮೇಶ್ ಶಿಲ್ಪಿ ಕಣದಲ್ಲಿರುವ ಅಭ್ಯರ್ಥಿಗಳು. [ಜನಾರ್ದನ ಸ್ವಾಮಿ ಪ್ರಚಾರದ ಚಿತ್ರಗಳು]

English summary
Elections 2014 : Chitradurga Lok Sabha constituency BJP candidate Janardhana Swamy election campaign in Chitradurga. Janardhana Swamy is a sitting MP of constituency. 14 candidates in fray for 2014 elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X