ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಸಮಾವೇಶದಲ್ಲಿ ಅವಮಾನ:ಸ್ಪಷ್ಟನೆ ಕೊಟ್ಟ ಎಚ್ ಆಂಜನೇಯ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 14: ಕೋಟೆ ನಾಡಿನ ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಸಚಿವ ಎಚ್​​​. ಆಂಜನೇಯರನ್ನು ವರಿಷ್ಠರು ಕಡೆಗಣಿಸಿದಂತಹ ದೃಶ್ಯ ಕಂಡು ಬಂದಿದೆ.

ನಗರದಲ್ಲಿ ಶನಿವಾರ(ಏ.13) ನಡೆದ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣದ ನಂತರ ದೋಸ್ತಿಗಳೆಲ್ಲ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದರು.ಈ ವೇಳೆ ಆಂಜನೇಯರನ್ನ ಮಾಜಿ ಸಿಎಂ ಸಿದ್ದರಾಮಯ್ಯ ದೂರ ತಳ್ಳಿದರು. ಬಳಿಕ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೈ ಹಿಡಿಯಲು ಆಂಜನೇಯ ಮುಂದಾದರು.

Is Congress ignored Former Minister H. Anjaneya?

ನಿಖಿಲ್‌ ಗಾಗಿ ರಾಹುಲ್, ಬೆಂಗಳೂರು ಅಭ್ಯರ್ಥಿಗಳಿಗಾಗಿ ಮೋದಿ ಪ್ರಚಾರನಿಖಿಲ್‌ ಗಾಗಿ ರಾಹುಲ್, ಬೆಂಗಳೂರು ಅಭ್ಯರ್ಥಿಗಳಿಗಾಗಿ ಮೋದಿ ಪ್ರಚಾರ

ಆದರೆ ಅವರು ಕೂಡಾ ಕೈ ಹಿಡಿಯದೇ ಮತ್ತೆ ದೂರ ತಳ್ಳಿದರು. ಆಗ ಮುಂದೆ ಬಂದ ಡಿಕೆಶಿ ಕೈಹಿಡಿಯಲು ಹೋದ ಆಂಜನೇಯಗೆ ಅಲ್ಲಿಯೂ ನಿರಾಸೆ ಕಾದಿತ್ತು. ಡಿಕೆ ಶಿವಕುಮಾರ್ ಅವರೂ ಕೂಡ ಆಂಜನೇಯ ಕಡೆ ತಿರುಗಿ ನೋಡಲಿಲ್ಲ. ಸಾಲು ಸಾಲು ನಾಯಕರು ಆಂಜನೇಯರನ್ನು ತಮ್ಮ ಸಾಲಿನಿಂದ ದೂರವಿಟ್ಟಿದ್ದು ಸ್ಪಷ್ಟವಾಗಿ ಕಂಡುಬಂತು.

ಸ್ಪಷ್ಟನೆ ಕೊಟ್ಟ ಎಚ್ ಆಂಜನೇಯ
ಈ ಕುರಿತು ಸ್ಪಷ್ಟನೆ ಕೊಟ್ಟಿರುವ ಎಚ್ ಆಂಜನೇಯ, ನಾನು ದಲಿತ ನಾಯಕನೂ ಹೌದು, ಕಾಂಗ್ರೆಸ್ ಮುಖಂಡನೂ ಹೌದು. ವೇದಿಕೆಯಲ್ಲಿದ್ದ ನಾಯಕರನ್ನು ಕರೆಯುವಂತೆ ಸಿದ್ದರಾಮಯ್ಯ ನನಗೆ ಸೂಚಿಸಿದರು ಅಷ್ಟೇ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ತಪ್ಪಾಗಿ ಬಿಂಬಿತವಾಗಿದೆ ಎಂದು ತಿಳಿಸಿದ್ದಾರೆ.

English summary
Lok Sabha Elections 2019:Is Congress ignored Former Minister H. Anjaneya.According to sources Anjaneya ignored by congress leaders in Chitradurga Congress convention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X