ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯೂರಿನ ಶಾಲಾ ಮಕ್ಕಳಿಗಾಗಿ ಮಿಡಿದ ಇನ್ಫೋಸಿಸ್

By Mahesh
|
Google Oneindia Kannada News

ಹಿರಿಯೂರು, ಜು.31: ಇನ್ಫೋಸಿಸ್ ನ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ಒಂದಾದ 'ಗ್ರಾಮೀಣ ಸ್ಪಂದನ' ಇತ್ತೀಚೆಗೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನಡೆಯಿತು,

ಇನ್ಫೋಸಿಸ್ ಸಂಸ್ಥೆಯಿಂದ ಬಂದಿದ್ದ ಸುಮಾರು 75 ಜನರ ಸ್ವಯಂ ಸೇವಕರ ತಂಡ ತಾಲ್ಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣದ ಮಹತ್ವ ಮತ್ತು ಅದರ ಅರಿವನ್ನು ಮೂಡಿಸಿದರು,

ಆರು ವರ್ಷಗಳ ಹಿಂದೆ ಇದೇ ಹಿರಿಯೂರು ತಾಲ್ಲೂಕಿನಲ್ಲಿ ಗ್ರಾಮೀಣ ಸ್ಪಂದನ ಕಾರ್ಯಕ್ರಮ ಮೊದಲು ಪ್ರಾರಂಭವಾಯಿತು. ಇಂದು ರಾಜ್ಯದ 18 ಜಿಲ್ಲೆಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದೆ. ಮತ್ತೊಮ್ಮೆ ಹಿರಿಯೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಇನ್ಫೋಸಿಸ್ ಪ್ರತಿನಿಧಿ ಸಾಫ್ಟ್ ವೇರ್ ಇಂಜಿನಿಯರ್ ಮಹೇಶ್ ಕುಮಾರ್ ಹೇಳಿದರು.

ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಇನ್ಫೋಸಿಸ್ ನಿಂದ ಉಚಿತ ಕಂಪ್ಯೂಟರ್ ನೀಡುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಈ ಕಾರ್ಯಕ್ಕೆ ಹಿರಿಯೂರು ತಾಲೂಕಿನ ಹರ್ತಿಕೋಟೆಯ ರಾಧಿಕ ವಸಂತ್ ಮತ್ತು ಹೂವಿನಹೊಳೆ ಪ್ರತಿಷ್ಠಾನದ ನಂದಿ ಜೆ. ಹೂವಿನಹೊಳೆ ಶ್ರಮವಹಿಸಿ ಯಶಸ್ವಿಗೊಳಿಸಿದರು ಮತ್ತು ಕ್ಷೇತ್ರದ ಶಾಸಕರಾದ ಡಿ. ಸುಧಾಕರ್ ರವರ ಬೆಂಬಲದ ಜೊತೆಗೆ ಕ್ಷೇತ್ರ ಶಿಕ್ಷಣ ಇಲಾಖೆ ಹಾಗೂ ರೋಟರಿ ಕ್ಲಬ್ ಸಹಕಾರ ಪ್ರತಿಫಲಿಸಿದೆ, ಹಿರಿಯೂರು ತಾಲ್ಲೂಕಿನಲ್ಲಿ ಇನ್ಫೋಸಿಸ್ ಗ್ರಾಮೀಣ ಸ್ಪಂದನ ಕೆಲ ಚಿತ್ರಗಳು ಇಲ್ಲಿವೆ

ಗ್ರಾಮೀಣ ಸ್ಪಂದನ ಕಾರ್ಯಕ್ರಮ

ಗ್ರಾಮೀಣ ಸ್ಪಂದನ ಕಾರ್ಯಕ್ರಮ

ಇನ್ಫೋಸಿಸ್ ಸಂಸ್ಥೆಯಿಂದ ಬಂದಿದ್ದ ಸುಮಾರು 75 ಜನರ ಸ್ವಯಂ ಸೇವಕರ ತಂಡ ಹಿರಿಯೂರು ತಾಲ್ಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣದ ಮಹತ್ವ ಮತ್ತು ಅದರ ಅರಿವನ್ನು ಮೂಡಿಸಿದರು,

ಮತ್ತೊಮ್ಮೆ ಹಿರಿಯೂರಿನಲ್ಲಿ ಈ ಕಾರ್ಯಕ್ರಮ

ಮತ್ತೊಮ್ಮೆ ಹಿರಿಯೂರಿನಲ್ಲಿ ಈ ಕಾರ್ಯಕ್ರಮ

ಆರು ವರ್ಷಗಳ ಹಿಂದೆ ಇದೇ ಹಿರಿಯೂರು ತಾಲ್ಲೂಕಿನಲ್ಲಿ ಗ್ರಾಮೀಣ ಸ್ಪಂದನ ಕಾರ್ಯಕ್ರಮ ಮೊದಲು ಪ್ರಾರಂಭವಾಯಿತು. ಇಂದು ರಾಜ್ಯದ 18 ಜಿಲ್ಲೆಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದೆ. ಮತ್ತೊಮ್ಮೆ ಹಿರಿಯೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಇನ್ಫೋಸಿಸ್ ಪ್ರತಿನಿಧಿ ಸಾಫ್ಟ್ ವೇರ್ ಇಂಜಿನಿಯರ್ ಮಹೇಶ್ ಕುಮಾರ್ ಹೇಳಿದರು.

ಉಚಿತ ಕಂಪ್ಯೂಟರ್ ನೀಡುವ ಪ್ರಯತ್ನ

ಉಚಿತ ಕಂಪ್ಯೂಟರ್ ನೀಡುವ ಪ್ರಯತ್ನ

ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಇನ್ಫೋಸಿಸ್ ನಿಂದ ಉಚಿತ ಕಂಪ್ಯೂಟರ್ ನೀಡುವ ಪ್ರಯತ್ನ ಮಾಡುವ ಭರವಸೆ ನೀಡಿದ ಇನ್ಫೋಸಿಸ್ ಟೆಕ್ಕಿಗಳ ತಂಡ.

ನಂದಿ ಜೆ ಹೂವಿನಹೊಳೆ ಪ್ರತಿಷ್ಠಾನ

ನಂದಿ ಜೆ ಹೂವಿನಹೊಳೆ ಪ್ರತಿಷ್ಠಾನ

ನಂದಿ ಜೆ ಹೂವಿನಹೊಳೆ ಪ್ರತಿಷ್ಠಾನ: ಗ್ರಾಮೀಣ ಹಾಗು ನಗರ ಪ್ರದೇಶದಲ್ಲಿ ಯುವ ಸಮುದಾಯದೊಂದಿಗೆ ಯುವ ಚೈತನ್ಯದ ಕನಸು ಹೊತ್ತು ಸಾಗುತ್ತಿರುವ ದತ್ತಿ (ಟ್ರಸ್ಟ್ ) ಸಂಸ್ಥೆ, ಯುವ ಚಿಂತನೆ, ಯುವ ಜಾಗೃತಿ, ಯುವಕರ ಸಂಘಟನೆ, ಯುವ ಸಂವರ್ಧನೆ, ಮಹಿಳಾ ಸಬಲೀಕರಣ, ಮಹಿಳಾ ಜಾಗೃತಿ, ಸ್ವಾಸ್ಥ - ಸದೃಢ - ಸಾಕ್ಷರತಾ ಸಮಾಜ, ಹಿಗೇ ಹತ್ತು ಹಲವು ಕನಸುಗಳನ್ನು ಹೊತ್ತು ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ನಡೆಯುತ್ತಿರುವ ಯುವ ಪಡೆ.

ಹೂವಿನಹೊಳೆ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷನಾಗಿರುವ ನಂದಿ ಜೆ ಹೂವಿನಹೊಳೆ ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಇಚ್ಛಿಸುವ ಎಲ್ಲಾ ಸ್ತರದ ಯುವಕರಿಗೆ ನೆರವು ನೀಡಲು ಸಿದ್ಧರಿದ್ದಾರೆ. ಆಸಕ್ತರು ಸಂಪರ್ಕಿಸಿ: 80880 81008

English summary
Had a great weekend with Once again complete successful rural reach program to chitradurga kudos to all my Infosys colleagues to make dis happen and proud to be a part of this program(Grameena Spandana) said Infosys Techie after visting Hiriyur taluk Government Schools narrated Nandi Hoovinahole
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X