ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯಲ್ಲಿ ಒತ್ತಡಕ್ಕೆ ಮಣಿದು ಯಾರಿಗೂ ಟಿಕೆಟ್ ನೀಡಲ್ಲ: ಸಚಿವ ಈಶ್ವರಪ್ಪ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜೂನ್ 12: ಬಿಜೆಪಿ ಪಕ್ಷದಲ್ಲಿ ಯಾವುದೇ ಚುನಾವಣೆ ವೇಳೆ ಯಾರ ಒತ್ತಡಕ್ಕೂ ಮಣಿಯದೇ, ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

Recommended Video

ಅವರಿಗೇನು ಎರಡು ಕೊಂಬಿಲ್ಲ ಅವರು ಸಹ ಕಾರ್ಯಕರ್ತರೇ. | K S Eshwarappa | BJP

ಶುಕ್ರವಾರ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರ ಅಪೇಕ್ಷೆ ಮೇರೆಗೆ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಕೇಂದ್ರದ ನಾಯಕರು ಪ್ರಮುಖ ಕಾರ್ಯಕರ್ತರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದಾರೆ. ಜೂನ್ 15 ರಂದು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ ಎಂದರು.

ಸಚಿವ ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ: ಕಾಂಗ್ರೆಸ್ ಒತ್ತಾಯಸಚಿವ ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ: ಕಾಂಗ್ರೆಸ್ ಒತ್ತಾಯ

ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವ ನಾಯಕರ ಸೋಲು ಗೆಲುವಿನ ಪ್ರಶ್ನೆಯೇ ಇರುವುದಿಲ್ಲ ಎಂದ ಅವರು, ಟಿಕೆಟ್ ವಿಚಾರದಲ್ಲಿ ಕೇಂದ್ರದ ಹಿರಿಯ ನಾಯಕರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.

In BJP Will Not Give Ticket To Those Who Put Pressure: K S Eshwarappa

ಬಿಜೆಪಿ ಪಕ್ಷಕ್ಕೆ ಬಂದವರೆಲ್ಲಾ ಬಿಜೆಪಿ ಕಾರ್ಯಕರ್ತರು. ಅವರೆಲ್ಲಾ ಈಗ ಕಾಂಗ್ರೆಸ್, ಜೆಡಿಎಸ್ ನವರಲ್ಲ. ಪ್ರತಾಪ್ ಗೌಡ ಪಾಟೀಲ್, ಮುನಿರತ್ನ ಬಿಜೆಪಿಯವರಾಗಿ ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಕಾಂಗ್ರೆಸ್ ನಲ್ಲಿದ್ದೆ, ಜೆಡಿಎಸ್ ನಲ್ಲಿದ್ದೆ ಟಿಕೆಟ್ ಕೊಡಿ ಎನ್ನೋದು ತಪ್ಪು ಎಂದು ತಿಳಿಸಿದರು.

ಸರ್ಕಾರದ ಬಗ್ಗೆ ಅಸಮಾಧಾನ ಹೊರಹಾಕಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿಸರ್ಕಾರದ ಬಗ್ಗೆ ಅಸಮಾಧಾನ ಹೊರಹಾಕಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಬಿಜೆಪಿಯಲ್ಲಿರುವ ಎಲ್ಲಾ ಕಾರ್ಯಕರ್ತರಿಗೂ ಎಂಎಲ್ಸಿ ಟಿಕೆಟ್ ಕೇಳುವ ಅರ್ಹತೆ ಇದೆ. ಜಾತಿವಾರು ಟಿಕೆಟ್ ‌ಕೊಡುವ ಪ್ರಶ್ನೆಯೇ ಇಲ್ಲ. ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವರ್ಚಸ್ಸು ಕುಂದುತ್ತದೆ ಎನ್ನುವುದು ಮಾಧ್ಯಮಗಳ ಭ್ರಮೆಯಷ್ಟೇ ಎಂದು ಹೇಳಿದರು.

English summary
In BJP Will Not Give Ticket To Those Who Put Pressure, Rural Development Minister KS Eshwarappa said that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X