ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಮದ್ಯ ಮಾರಾಟ; ಪೊಲೀಸರಿಂದ ದಾಳಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜನವರಿ 09: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಪೊಲೀಸರು ದಾಳಿ ಮಾಡಿ, 83 ಸಾವಿರ ರುಪಾಯಿ ಮೌಲ್ಯದ ಮದ್ಯ ವಶಪಡಿಸಿಕಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕಾವಲ್ ಗ್ರಾಮದಲ್ಲಿ ವ್ಯಕ್ತಿಯೊರ್ವನು ಪರವಾನಿಗೆ ಇಲ್ಲದೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದನು. ರುದ್ರಪ್ಪ ಎಂಬುವವನೇ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ, ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಮೊಳಕಾಲ್ಮೂರಿನ ಶಾಲೆಗೆ ಭೇಟಿಯಿತ್ತು ಭರವಸೆ ನೀಡಿದ ಶ್ರೀರಾಮುಲುಮೊಳಕಾಲ್ಮೂರಿನ ಶಾಲೆಗೆ ಭೇಟಿಯಿತ್ತು ಭರವಸೆ ನೀಡಿದ ಶ್ರೀರಾಮುಲು

ಇತ್ತೀಚಿಗೆ ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟಗಾರರ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ತ್ರೀ ಶಕ್ತಿ ಸಂಘಟನೆಯವರು ಆಗಾಗ ಪೊಲೀಸರಿಗೆ ದೂರು ಕೊಡುತ್ತಲೇ ಬಂದಿದ್ದರು.

Illegal Liquor Sales; Attack By Police In Chitradurga

ಗ್ರಾಮಗಳಲ್ಲಿ ಮದ್ಯ ಮಾರಾಟದಿಂದ ಯುವಕರು ಕುಡಿತದ ದಾಸ್ಯರಾಗುತ್ತಿದ್ದಾರೆ ಮತ್ತು ಅನೇಕ ಗಂಡಸರು ದುಡಿಮೆಯ ದುಡ್ಡನ್ನು ಕುಡಿತಕ್ಕೆ ಖರ್ಚು ಮಾಡುತ್ತಿದ್ದಾರೆ ಎಂದು ಮಹಿಳೆ ಆತಂಕಗೊಂಡಿದ್ದರು.

ಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದು, ಮತ ಹಾಕದೆ ದ್ರೋಹ: ಮಾಜಿ ಸಂಸದ ಚಂದ್ರಪ್ಪಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದು, ಮತ ಹಾಕದೆ ದ್ರೋಹ: ಮಾಜಿ ಸಂಸದ ಚಂದ್ರಪ್ಪ

R D ಕಾವಲ್ ಗ್ರಾಮದಲ್ಲಿನ ಅಂಗಡಿಯ ಮೇಲೆ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಸ್ವಾತಿ ಮತ್ತು ಸಿಬ್ಬಂದಿಗಳಿಂದ ದಾಳಿ ಮಾಡಿದ್ದಾರೆ. ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ರುದ್ರಪ್ಪನಿಂದ 83,514 ರುಪಾಯಿ ಮೌಲ್ಯದ 239 ಲೀಟರ್ ಮದ್ಯ ವಶಪಡಿಸಿಕೊಂಡ ಪೊಲೀಸರು, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

English summary
Police raided a shop selling Illegal liquor and seized 83,000 rupees worth of liquor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X