ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಾಥ ಮಕ್ಕಳಿಗಾಗಿ ಮಿಡಿದ ಭಗೀರಥ ಪೀಠದ ಪುರುಷೋತ್ತಮ ಶ್ರೀಗಳ ಹೃದಯ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜೂನ್ 7: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕಿಗೆ ಅದೆಷ್ಟೋ ಜನರು ಅಸುನೀಗಿದ್ದಾರೆ. ಇನ್ನು ಕೆಲವರು ಹೆತ್ತ ತಂದೆ- ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದು, ಮುಂದಿನ ಭವಿಷ್ಯ ಕಾಣುವ ಮಕ್ಕಳ ಕನಸಿಗೆ ಕೊರೊನಾ ಬರೆ ಎಳೆದು ಬದುಕನ್ನು ಕಿತ್ತುಕೊಂಡಿದೆ.

ಇಂತಹ ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಭಗೀರಥ ಪೀಠದ ಪುರುಷೋತ್ತಮ ಶ್ರೀಗಳ ಹೃದಯ ಕೋವಿಡ್ ಅನಾಥ ಮಕ್ಕಳಿಗೆ ಮಿಡಿದಿದೆ. ಕೊರೊನಾದಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಶ್ರೀಗಳು ಮುಂದಾಗಿದ್ದಾರೆ.

ಸೋಮವಾರ ಗುರುಪೀಠದಲ್ಲಿ ಮಾತಾಡಿದ, ಪುರುಷೋತ್ತಮ ಶ್ರೀ, ""ಕೋವಿಡ್‌ನಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆಯಿಂದ ನೂರಾರು ಮಕ್ಕಳು ಮಠದಲ್ಲಿ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್ ಶಿಕ್ಷಣ ವ್ಯವಸ್ಥೆ ಇದೆ ಎಂದರು. ಅನಾಥ ಮಕ್ಕಳ ನೆರವಿಗೆ ನಾವು ಬರಬೇಕು. ಅವರ ಬಾಳಿಗೆ ಬೆಳಕು ನೀಡಬೇಕೆನ್ನುವ ದೃಷ್ಟಿಯಿಂದ ಈ ಕಾರ್ಯ ಆಗಬೇಕು ಎಂದು ಹೇಳಿದರು.

 Chitradurga: Hosadurga Bhageerath Peetha To Take Care Children Of Covid victims

1ನೇ ತರಗತಿಯಿಂದ 12ನೇ ತರಗತಿವರೆಗೂ ಶಿಕ್ಷಣ, ಊಟ, ವಸತಿ ಸೌಲಭ್ಯ ಸೇರಿದಂತೆ ಎಲ್ಲ ವ್ಯವಸ್ಥೆ ಉಚಿತವಾಗಿ ಕಲ್ಪಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು. ಮೊದಲ ಹಂತದಲ್ಲಿ ಇವತ್ತು ಜನ ಮಕ್ಕಳಿಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಆರಂಭದಲ್ಲೇ ಪ್ರತಿ ಮಕ್ಕಳ ಹೆಸರಿನಲ್ಲಿ 10,000 ರೂ. ಭದ್ರತಾ ಠೇವಣಿ ಮಾಡಲಾಗುವುದು ಎಂದು ತಿಳಿಸಿದರು.

 Chitradurga: Hosadurga Bhageerath Peetha To Take Care Children Of Covid victims

Recommended Video

Indian Navyಗೆ ಈಗ 50 ಸಾವಿರ ಕೋಟಿ ವೆಚ್ಚದ Submarine | Oneindia Kannada

ಟ್ರಸ್ಟ್, ದಾನಿಗಳ ನೆರವಿನಿಂದ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡಬೇಕು ಎಂದು ಹೇಳಿದ ಸ್ವಾಮೀಜಿ, ಎಷ್ಟು ಜನ ಮಕ್ಕಳು ಬಂದರೂ ಅವರಿಗೆ ಉಚಿತ ಶಿಕ್ಷಣ ಕೊಡಲಾಗುವುದು. ಅವರ ಜೀವನ ರೂಪಿಸುವ ಕೆಲಸವನ್ನು ನಾವು ಮಾಡಬೇಕಿದೆ. ಯಾರಿಗೆ ಸಾಧ್ಯವಿದೆಯೋ ಅಂಥವರು ಇದನ್ನು ಸದುಪಯೋಗ ಪಡಿಸಿಕೊಂಡು ಜೀವನ ರೂಪಿಸಿಕೊಳ್ಳಲು ಶ್ರೀಗಳು ಮನವಿ ಮಾಡಿದರು.

English summary
Chitradurga: Hosadurga Bhageerath Peetha to take care Children's of people who died due to Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X