• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಣೇಶ ಹಬ್ಬದ ವಿಶೇಷ: ನಂಬಿ ಬಂದವರಿಗೆ ವರವನ್ನು ಕರುಣಿಸುವ ಹೊಳಲ್ಕೆರೆ ಪ್ರಸನ್ನ ಗಣಪ

By ಚಿದಾನಂದ್ ಮಸ್ಕಲ್
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 10: ಅದು 1475ರ ಚಿತ್ರದುರ್ಗ ಪಾಳೇಗಾರರ ಆಳ್ವಿಕೆಯ ಕಾಲ. ಅಂದಿನ ಪಾಳೇಗಾರರ ಕಾಲದಲ್ಲಿ ನರಸಿಂಹ ಅವತಾರದಲ್ಲಿ ನಿರ್ಮಾಣವಾದ ಗಣೇಶ ದೇವಸ್ಥಾನ. ಆ ವಿನಾಯಕ ನಂಬಿ ಬಂದವರಿಗೆ ಇಲ್ಲ ಎನ್ನದೆ ಇದುವರೆಗೂ ಯಾರನ್ನೂ ಕೈಬಿಟ್ಟಿಲ್ಲ. ಹಾಗಾದರೆ ಆ ದೇವಸ್ಥಾನ ಯಾವುದು, ಎಲ್ಲಿದೆ ಅಂತೀರಾ ಈ ಸ್ಟೋರಿ ಓದಿ...

ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಅರೆ ಮಲೆನಾಡಿನ ಹೊಳಲ್ಕೆರೆ ಪಟ್ಟಣದಲ್ಲಿರುವ ಪ್ರಸನ್ನ ಮಹಾಗಣಪತಿ, ಇದು ಪಾಳೇಗಾರರ ಕಾಲದ ಗಣಪತಿಯಾಗಿದೆ. ಇದನ್ನು ಮೊದಲು ಬಯಲಿನಲ್ಲಿ ಸ್ಥಾಪಿಸಲಾಗಿದ್ದರಿಂದ ಇದನ್ನು ಬಯಲು ಗಣಪ ಎಂದು ಸಹ ಕರೆಯಲಾಗುತ್ತಿತ್ತು. ಇದೀಗ ಪ್ರಸನ್ನ ಮಹಾಗಣಪತಿ ಎಂದು ಪ್ರಸಿದ್ಧಿಯಾಗಿದೆ. ವಿಘ್ನ ವಿನಾಯಕನ ದರ್ಶನ ಪಡೆಯಲು ಹೊರ ಜಿಲ್ಲೆ ಮತ್ತು ರಾಜ್ಯಗಳಿಂದಲೂ ಬರುವವರ ಸಂಖ್ಯೆ ಹೆಚ್ಚಾಗಿದೆ.

ಈ ಗಣಪತಿಗೆ ಆಲಯ ನಿರ್ಮಿಸುವುದಾದರೆ ಕಾಶಿ ವಿಶ್ವನಾಥ ಮಂದಿರಕ್ಕಿಂತ ಎತ್ತರವಿರಬೇಕು!ಈ ಗಣಪತಿಗೆ ಆಲಯ ನಿರ್ಮಿಸುವುದಾದರೆ ಕಾಶಿ ವಿಶ್ವನಾಥ ಮಂದಿರಕ್ಕಿಂತ ಎತ್ತರವಿರಬೇಕು!

ಚಿತ್ರದುರ್ಗದಲ್ಲಿ ಪಾಳೆಗಾರರ ಆಳ್ವಿಕೆಯ ಕಾಲದಲ್ಲಿ ಅನೇಕ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. 1475ರಲ್ಲಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿ ಪಾಳೇಗಾರರಿಂದ ಸುಮಾರು 20 ಅಡಿ ಎತ್ತರದಲ್ಲಿ ನಿರ್ಮಿತವಾದ ಬಯಲು ಗಣಪತಿಯೂ ಒಂದಾಗಿದೆ. ಇದನ್ನು ದೊಡ್ಡ ತಿಮ್ಮನಾಯಕ ಎಂಬುವನು ಪ್ರತಿಷ್ಠಾಪಿಸಿದ್ದಾನೆ ಎಂದು ಹೇಳಲಾಗುತ್ತದೆ. ಬಯಲಿನಲ್ಲಿಯೇ ಪ್ರತಿಷ್ಠಾಪಿತಗೊಂಡು ಅಪಾರ ಭಕ್ತ ಸಮೂಹವನ್ನು ಹೊಂದುವ ಮೂಲಕ ವಿನಾಯಕ ಇಂದು ದೇವಸ್ಥಾನವನ್ನು ನಿರ್ಮಿಸಿಕೊಂಡಿದ್ದಾನೆ. ಈ ವಿಘ್ನೇಶ್ವರನು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾ ಪ್ರಸಿದ್ಧಿಯನ್ನು ಪಡೆದಿದ್ದಾನೆ.

 ಗಣಪತಿಗೆ ಕೂದಲುಗಳಿರುವುದರಿಂದ ಜಡೆ ಗಣಪ

ಗಣಪತಿಗೆ ಕೂದಲುಗಳಿರುವುದರಿಂದ ಜಡೆ ಗಣಪ

ಅತ್ಯಂತ ಶಕ್ತಿಶಾಲಿ ಗಣಪತಿ ಎಂದೇ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರಸನ್ನ ಗಣಪನನ್ನು ನೋಡಲು, ದರ್ಶನ ಪಡೆದು ಧನ್ಯರಾಗಲು ಹೊರ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರು ಹಾಗೂ ಪ್ರವಾಸಿಗರು ಬರುತ್ತಾರೆ. ಭಕ್ತರು ತನ್ನ ಬಳಿ ಏನೇ ಕಷ್ಟಗಳನ್ನು ತಂದು ಬಗೆಹರಿಸುವಂತೆ ಪ್ರಾರ್ಥಿಸಿಕೊಂಡರೆ ಅವುಗಳನ್ನು ಸುಲಭವಾಗಿ ಪರಿಹರಿಸುತ್ತಾನೆ. ಇಂತಹ ಗಣಪತಿಗೆ ಕೂದಲುಗಳಿರುವುದರಿಂದ ಜಡೆ ಗಣಪತಿ ಎಂದು ಕರೆಯುತ್ತಾರೆ. ಈ ಜಡೆಯನ್ನು ಪಾರ್ವತಿಯ ಜಡೆ ಎಂದು ಹೇಳಲಾಗುತ್ತದೆ. ಈ ಜಡೆಗೆ ಹಬ್ಬ ಹರಿದಿನಗಳಲ್ಲಿ ಮಹಿಳೆಯರು, ಯುವತಿಯರು ಹರಕೆ ಹೊತ್ತು ಬೆಣ್ಣೆಯನ್ನು ಹಚ್ಚಿ ಪೂಜಿಸುತ್ತಾರೆ. ಇದರಿಂದ ಕೂದಲು ದಟ್ಟವಾಗಿ ಆರೋಗ್ಯವಾಗಿ ಬೆಳೆಯುತ್ತೆವೆ ಎಂಬ ನಂಬಿಕೆಯೂ ಇದೆ. ಇದರ ಜೊತೆಗೆ ಊರಿಗೆ ಬರಗಾಲ ಬಂತೆಂದರೆ ಇಲ್ಲಿನ ಗಣಪನಿಗೆ ನೀರಿನ ಅಭಿಷೇಕ ಮಾಡಿದರೆ ಮಳೆ ಬರುತ್ತದೆ ಎಂಬ ವಾಡಿಕೆ ಈ ಭಾಗದ ಜನರಲ್ಲಿದೆ.

 ಭಕ್ತರ ಕೋರಿಕೆಯನ್ನು ಈಡೇರಿಸುವ ಈ ಗಣಪತಿ

ಭಕ್ತರ ಕೋರಿಕೆಯನ್ನು ಈಡೇರಿಸುವ ಈ ಗಣಪತಿ

ಭಕ್ತರು ವಿನಾಯಕನ ಮುಂದೆ ಅನೇಕ ಹರಕೆಗಳನ್ನು ಹೊತ್ತು ತಂದು ಮಕ್ಕಳ ಭಾಗ್ಯ, ಕಂಕಣ ಭಾಗ್ಯ, ಸರ್ಕಾರಿ ಕೆಲಸ, ಇತರೆ ಕಷ್ಟ ಸುಖವನ್ನು ಹರಕೆಗಳ ಮೂಲಕ ಬೇಡಿಕೊಳ್ಳುತ್ತಾರೆ. ಭಕ್ತರ ಕೋರಿಕೆಯನ್ನು ಈಡೇರಿಸುವ ಈ ಗಣಪತಿ ಇಂದು ಪ್ರಸನ್ನ ಮಹಾಗಣಪತಿ ಎಂದು ಕರೆಯಿಸಿಕೊಳ್ಳುತ್ತಿದ್ದಾನೆ. ಸಂಕಷ್ಟಿಯ ದಿನದಂದು ವಿವಿಧ ಅಲಂಕಾರಗಳೊಂದಿಗೆ ವಿಶಿಷ್ಟವಾಗಿ ಪೂಜೆಯನ್ನು ನೇರವೇರಿಸಲಾಗುತ್ತದೆ. ಹೊಳಲ್ಕೆರೆಯಷ್ಟೆ ಅಲ್ಲ ಹೊರ ರಾಜ್ಯಗಳಿಂದಲೂ ಇಲ್ಲಿಗೆ ಬಂದು ಪೂಜೆ ಮಾಡಿ ಹೋಗುವುದು ವಿಶೇಷವಾಗಿದೆ. ಹರಕೆ ಹೊತ್ತವರು ಯನ್ನು ಮಾಡಿ ಹರಕೆ ತೀರಿಸುತ್ತಾರೆ.

 ನನಗೆ ಮಕ್ಕಳ ಭಾಗ್ಯ ಕರುಣಿಸುವಂತೆ ಬೇಡಿಕೊಂಡೆ

ನನಗೆ ಮಕ್ಕಳ ಭಾಗ್ಯ ಕರುಣಿಸುವಂತೆ ಬೇಡಿಕೊಂಡೆ

"ನನಗೆ ಮದುವೆಯಾಗಿ ಐದು ವರ್ಷಗಳು ಕಳೆದರೂ ಮಕ್ಕಳ ಫಲ ಇರಲಿಲ್ಲ. ನಾನು ವಿನಾಯಕನಿಗೆ ನನಗೆ ಮಕ್ಕಳ ಭಾಗ್ಯ ಕರುಣಿಸುವಂತೆ ಬೇಡಿಕೊಂಡೆ, ಆಗಾಗ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದೆ. ನನಗೆ ಮಗುವಿನ ಫಲ ದೊರೆತರೆ ತನ್ನ ಕೈಯಲ್ಲಾಗುವ ಹರಕೆಯನ್ನು ತೀರಿಸುತ್ತೆನೆಂದು ಬೇಡಿಕೊಂಡೆ. ಅದರಂತೆ ನನಗೆ ಗಂಡು ಮಗುವನ್ನು ನೀಡಿದ್ದಾನೆ. ಪ್ರತಿವರ್ಷ ದೇವರಿಗೆ ಬಂದು ಹರಕೆ ತೀರಿಸಲಾಗುತ್ತಿದೆ,'' ಎನ್ನುತ್ತಾರೆ ಮಗು ಫಲ ಪಡೆದ ದಾವಣಗೆರೆ ಮಹಿಳೆ ಅನುಪಮ.

 ಪ್ರೀತಿಸಿದ ಜೋಡಿಗಳು ಈತನ ಸನ್ನಿಧಿಯಲ್ಲಿ ವಿವಾಹ

ಪ್ರೀತಿಸಿದ ಜೋಡಿಗಳು ಈತನ ಸನ್ನಿಧಿಯಲ್ಲಿ ವಿವಾಹ

ಚಿತ್ರದುರ್ಗ ಜಿಲ್ಲೆಯಷ್ಟೆಲ್ಲದೆ ಹೊರ ರಾಜ್ಯಗಳಿಂದಲೂ ವರ್ಷಕ್ಕೊಮ್ಮೆ ಬಂದು ತಮ್ಮ ಕೈಯಲ್ಲಾದ ಸೇವೆಯನ್ನು ಮಾಡುತ್ತಾರೆ. ಇನ್ನು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತಮಗೆ ಉತ್ತಮ ಫಲಿತಾಂಶ ನೀಡುವಂತೆ ಬೇಡಿಕೊಂಡು ಅದೂ ಕೂಡ ಈಡೇರಿರುವ ಸಂಗತಿಗಳಿವೆ ಎನ್ನಬಹುದು. ಈ ವಿನಾಯಕನ ಮಂದಿರದಲ್ಲಿ ಅನೇಕ ಜೋಡಿಗಳು ಸಪ್ತಪದಿ ತುಳಿದಿದ್ದಾರೆ. ಅದರಲ್ಲೂ ವಿಶೇಷವಾಗಿ ಅದೆಷ್ಟೋ ಪ್ರೀತಿಸಿದ ಜೋಡಿಗಳು ಈತನ ಸನ್ನಿಧಿಯಲ್ಲಿ ವಿವಾಹ ಆಗಿದ್ದಾರೆ. ಹೊಳಲ್ಕೆರೆ ತಾಲೂಕು ನೋಂದಣಿ ಕಚೇರಿಯಲ್ಲಿ ಮದುವೆಯ ನೋಂದಣಿ (ರಿಜಿಸ್ಟರ್ ಮ್ಯಾರೇಜ್) ಮಾಡಿಸಿಕೊಂಡಿರುವ ಉದಾಹರಣೆಗಳಿವೆ. ಈ ದೇವಸ್ಥಾನ ಪುಣ್ಯ ಕ್ಷೇತ್ರವಾಗಿ ಹೆಸರು ಪಡೆದುಕೊಂಡಿದೆ.
ಒಟ್ಟಿನಲ್ಲಿ ಭಕ್ತರು ಬೇಡಿಕೊಳ್ಳುವ ವರವನ್ನು ಇಲ್ಲ ಎನ್ನದೆ ಈಡೇರಿಸುತ್ತಾ ಎಲ್ಲರನ್ನು ಸಂರಕ್ಷಿಸುತ್ತಾ ಇರುವ ಗಣಪ ಇಂದು ಶಕ್ತಿಶಾಲಿ ಹಾಗೂ ಪ್ರಸನ್ನ ಮಹಾಗಣಪ ಎಂದು ಖ್ಯಾತಿಯನ್ನು ಪಡೆದಿದ್ದಾನೆ. ಈ ಗಣಪನನ್ನು ನೋಡಬೇಕು, ತಮ್ಮ ಕಷ್ಟಗಳನ್ನು ನಿವಾಸರಿಸಿಕೊಳ್ಳಬೇಕು ಎನಿಸಿದರೆ ಕೂಡಲೇ ನೀವು ಈ ಗಣಪನ ಬಳಿ ಬನ್ನಿ. ಬೇಡಿಕೊಂಡು ಹರಕೆ ಹೊತ್ತು ತೀರಿಸಬಹುದು. ಚಿತ್ರದುರ್ಗದಿಂದ ಶಿವಮೊಗ್ಗ ಹೋಗುವ ದಾರಿಯಲ್ಲಿ ಹೊಳಲ್ಕೆರೆ ಸಿಗಲಿದೆ. ಹೊಸದುರ್ಗದ ಮೂಲಕವೂ ಹೊಳಲ್ಕೆರೆ ಪ್ರವೇಶಿಸಬಹುದು.

   Yash ಪೂಜೆ ಮಾಡುವಾಗ ಮಗ ಹಾಗು ಮಗಳು ಏನು ಮಾಡ್ತಾರೆ ನೋಡಿ | Oneindia Kannada
   English summary
   In the year 1475 the Holalkere Prasanna Ganapati Temple was built by the Chitradurga Palegaras.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X