ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒನ್ಇಂಡಿಯಾ ವರದಿ: ಅಂಬಲಗೆರೆ ಶಿಕ್ಷಕನ ಕಾರ್ಯಕ್ಕೆ ಮನಸೋತ ಅಧಿಕಾರಿಗಳು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 10: ಒನ್ಇಂಡಿಯಾ ಕನ್ನಡ ನ್ಯೂಸ್ ವರದಿ ನೋಡಿ ಹಿರಿಯೂರು ತಾಲೂಕು ಅಧಿಕಾರಿಗಳು ಅಂಬಲಗೆರೆ ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Recommended Video

ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿ ಮಾದರಿಯಾದ ಶಿಕ್ಷಕ | Oneindia Kannada

ಗುರುವಾರ ಒನ್ಇಂಡಿಯಾ ಕನ್ನಡ ವರದಿಯಲ್ಲಿ "ಶಾಲಾ ಕೊಠಡಿಯನ್ನು ದತ್ತು ಪಡೆದು ಮಾದರಿಯಾದ ಶಿಕ್ಷಕ' ಎಂಬ ಶೀರ್ಷಿಕೆ ಅಡಿಯಲ್ಲಿ ಸರ್ಕಾರಿ ಶಿಕ್ಷಕ ನಾಗಭೂಷಣ್ ಎನ್ನುವರು ತಾನು ಬೋಧಿಸುವ ಶಾಲಾ ಕೊಠಡಿಯನ್ನು ದತ್ತು ಪಡೆದು ಹೈ-ಟೆಕ್ ಕ್ಲಾಸ್ ರೂಂ ಮಾಡಿರುವುದನ್ನು ವರದಿ ಮಾಡಲಾಗಿತ್ತು.

ಚಿತ್ರದುರ್ಗ; ಶಾಲಾ ಕೊಠಡಿ ದತ್ತು ಪಡೆದು ಮಾದರಿಯಾದ ಶಿಕ್ಷಕಚಿತ್ರದುರ್ಗ; ಶಾಲಾ ಕೊಠಡಿ ದತ್ತು ಪಡೆದು ಮಾದರಿಯಾದ ಶಿಕ್ಷಕ

ಸಹ ಶಿಕ್ಷಕ ನಾಗಭೂಷಣ್ ಅವರು ಮಕ್ಕಳ ಸೃಜನಾತ್ಮಕವಾಗಿ ಕಲಿಕೆಯುವ ನಿಟ್ಟಿನಲ್ಲಿ ಬೋಧಿಸುವ ಕೊಠಡಿಯನ್ನೇ ದತ್ತು ಪಡೆದು ಸ್ವಂತ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಕೊಠಡಿಗೆ ವಿನೂತನವಾಗಿ ಸ್ಪರ್ಶ ನೀಡಿರುವುದು ವಿಶೇಷ ಸುದ್ದಿಯಾಗಿತ್ತು.

Hiriyuru Taluk Officials Praised Ambalagere Teacher Work after Oneindia Kannada Report

ಈ ವರದಿಯನ್ನು ಗಮನಿಸಿದ ಹಿರಿಯೂರು ತಹಶೀಲ್ದಾರ ಜಿ.ಎಚ್ ಸತ್ಯನಾರಾಯಣ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿ.ಕೃಷ್ಣಮೂರ್ತಿ ಇಬ್ಬರು ಅಧಿಕಾರಿಗಳು ಶುಕ್ರವಾರ ಅಂಬಲಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಿಕ್ಷಕನ ಕೊಠಡಿಯನ್ನು ವೀಕ್ಷಿಸಿ, ಬೆಂಚ್ ಮೇಲೆ ಕುಳಿತು, ಚಾರ್ಟ್ ಗಳು, ಅಕ್ಷರಗಳು, ಪುಸ್ತಕಗಳು, ಇತರೆ ವಸ್ತುಗಳನ್ನು ನೋಡಿ ಸಹ ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

ಒನ್ಇಂಡಿಯಾ ನ್ಯೂಸ್ ಜೊತೆ ದೂರವಾಣಿ ಮೂಲಕ ಮಾತನಾಡಿದ ತಹಶೀಲ್ದಾರ ಅವರು "ನಾಗಭೂಷಣ್ ಎಂಬ ಸಹ ಶಿಕ್ಷಕ ತುಂಬಾ ಚೆನ್ನಾಗಿ ಕೊಠಡಿಯನ್ನು ಅಭಿವೃದ್ಧಿ ಮಾಡಿದ್ದಾರೆ. ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡಿಕೊಂಡಿರುವ ಒಳ್ಳೆಯ ಬೆಳವಣಿಗೆ. ಇಂಗ್ಲೀಷ್ ಕಲಿಯಲು ವಿದ್ಯಾರ್ಥಿಗಳಿಗೆ ಬಹಳ ಪ್ರೋತ್ಸಾಹ ರೀತಿಯಲ್ಲಿ ಮಾಡಿದ್ದಾರೆ.

Hiriyuru Taluk Officials Praised Ambalagere Teacher Work after Oneindia Kannada Report

ಈ ಶಿಕ್ಷಕನ ನೋಡಿ ಕಣ್ತುಂಬಾ ಸಂತೋಷವಾಯಿತು. ಇಂತಹ ಶಿಕ್ಷಕರು ತಾಲ್ಲೂಕಿನಲ್ಲಿ ಬಹಳಷ್ಟು ಶಿಕ್ಷಕರು ಮುಂದೆ ಬಂದರೆ ಶಿಕ್ಷಣಕ್ಕೆ ಒಂದೊಳ್ಳೆ ಬೆಲೆ ಸಿಗುತ್ತದೆ. ವಿಶೇಷ ಗುರುವನ್ನು ಪಡೆದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಧನ್ಯವಂತರು ಎಂದರು.

ಇನ್ನೊಂದು ಕೊಠಡಿಯನ್ನು ಸಹ ಇದೇ ರೀತಿ ಮಾಡಬೇಕು ಎಂದುಕೊಂಡಿದ್ದು, ನಮಗೆ ಮುಂದಿನ ದಿನಗಳಲ್ಲಿ ದೇವರು ಸಹಕಾರ ಕೊಟ್ಟರೆ ನಾನು ಕೂಡ ಅನುಕೂಲವಾದಷ್ಟು ಶಾಲೆಗೆ ಸಹಾಯ ಮಾಡುತ್ತೇನೆ ಎಂದು ದಂಡಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು.

Hiriyuru Taluk Officials Praised Ambalagere Teacher Work after Oneindia Kannada Report


ಇನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿ.ಕೃಷ್ಣಮೂರ್ತಿ ಮಾತನಾಡಿ, ""ನಾನು ಮತ್ತು ತಹಶೀಲ್ದಾರ ಸರ್ ಶಾಲೆಗೆ ಹೋಗಿದ್ವಿ, ಕೊಠಡಿ ತುಂಬಾ ಚೆನ್ನಾಗಿ ಮಾಡಿದ್ದಾರೆ. ಶಿಕ್ಷಕನ ವೈಯಕ್ತಿಕ ಕಾಳಜಿ ವಹಿಸಿ ಕಲಿಕೆಗೆ ಅಭಿವೃದ್ಧಿ ಪಡಿಸಿಕೊಂಡಿರುವುದು ನೋಡಿ ತುಂಬಾ ಖುಷಿಯಾಯಿತು. ಸ್ವಂತ ಹಣದಲ್ಲಿ ಅಭಿವೃದ್ಧಿ ಮಾಡಿರುವುದು ಜಿಲ್ಲೆಯ ಇತರೆ ಶಾಲಾ ಶಿಕ್ಷಕರುಗಳಿಗೆ ಮಾದರಿಯಾಗಿರುವು ವಿಷಯವಾಗಿದೆ.''

ವಿದ್ಯಾರ್ಥಿಗಳು ಇಂಗ್ಲೀಷ್ ಕಲಿಕೆಯಲ್ಲಿ ತುಂಬಾ ಫಾಸ್ಟ್ ಇರುವುದು ಕೇಳಿ ಆನಂದವಾಯಿತು. ಅದರಲ್ಲೂ ಮಾರೇನಹಳ್ಳಿ ಮಂಜುಶ್ರೀ ತುಂಬಾ ಚುರುಕು ಇದ್ದಾಳೆ, ಎಷ್ಟು ಚೆಂದವಾಗಿ, ನಿರರ್ಗಳವಾಗಿ ಇಂಗ್ಲೀಷ್ ಮಾತನಾಡುವುದನ್ನು ನೋಡಿ, ಮನಸ್ಸಿಗೆ ತುಂಬಾ ಆನಂದವಾಯಿತು.

ಗ್ರಾಮಿಣ ಪ್ರದೇಶದಲ್ಲಿ ಇಂತಹ ಪ್ರತಿಭೆಗಳು ಮುಂದೊಂದು ದಿನ ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ. ಇಂತಹ ಶಿಕ್ಷಕರಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಿ ಖಾಸಗಿ ಶಾಲೆಗೆ ಪೈಪೋಟಿ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಶಾಲೆ ಹಾಗೂ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಆಸಕ್ತಿ ಮತ್ತು ಕಾಳಜಿ ಹೊಂದಿರುವ ಈ ಶಿಕ್ಷಕನನ್ನು ಗುರುತಿಸಿ ಅಭಿನಂದಿಸಬೇಕಿದೆ ಎಂದು ತಿಳಿಸಿದರು.

English summary
After Seeing the Oneindia Kannada News Report, Hiriyuru Taluk officials visited Ambalagere government school and praised teacher work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X