ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದಲ್ಲಿ ಮಳೆರಾಯನ ಆಗಮನಕ್ಕೆ ಜನಜೀವನ ತತ್ತರ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ 18: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 2-3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ತಡರಾತ್ರಿ ವರುಣನ ಆರ್ಭಟಕ್ಕೆ ಅಲ್ಲಲ್ಲಿ ಸಣ್ಣ ಪುಟ್ಟ ಕೆರೆ ಕಟ್ಟೆಗಳು, ಕೃಷಿ ಹೊಂಡ, ಚೆಕ್ ಡ್ಯಾಂ ಗಳು ತುಂಬಿ ಹರಿಯುತ್ತಿವೆ.

ವಿವಿ ಸಾಗರಕ್ಕೆ 0.20 ನೀರು:
ಮಧ್ಯೆ ಕರ್ನಾಟಕ ಬಯಲು ಸೀಮೆ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ 0.20 ಟಿಎಂಸಿ ನೀರು ಹರಿದು ಬಂದಿದೆ. ಜಲಾಶಯಕ್ಕೆ 1646 ಕ್ಯೂಸೆಕ್ ಒಳಹರಿವು ಹೆಚ್ಚಿದೆ. ಪ್ರಸ್ತುತ ಜಲಾಶಯ ನೀರಿನ ಮಟ್ಟ 120 ಅಡಿ ಇದೆ. ಒಟ್ಟು ಡ್ಯಾಂ ನೀರಿನ ಸಾಮರ್ಥ್ಯ 130 ಅಡಿ ಇದ್ದು, 30 ಟಿಎಂಸಿ ನೀರು ಸಂಗ್ರಹಿಸಬಹುದಾಗಿದೆ. ಇನ್ನು ಈ ವರ್ಷದಲ್ಲಿ 10 ಅಡಿ ನೀರು ಜಲಾಶಯಕ್ಕೆ ಬಂದರೆ ಜಲಾಶಯ ಕೊಡಿ ಬೀಳುವ ಸಾಧ್ಯತೆ ಇರುತ್ತದೆ.

ಇಕ್ಕನೂರು 67.4 ಮಿ.ಮೀ ಮಳೆ:
ಜಿಲ್ಲೆಯಲ್ಲಿ ಮೇ 17ರಂದು ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಇಕ್ಕನೂರಿನಲ್ಲಿ 67.4 ಮಿ.ಮೀ, ಮಳೆಯಾಗಿದೆ. ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

Heavy Rains Lash Across Chitradurga

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 34.2 ಮಿ.ಮೀ, ಬಬ್ಬೂರು 24 ಮಿ.ಮೀ, ಈಶ್ವರಗೆರೆ 50.8 ಮಿ.ಮೀ, ಸುಗೂರು 32.4 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆ ನಗರದಲ್ಲಿ 1.6 ಮಿ.ಮೀ, ತಳುಕು 7 ಮಿ.ಮೀ, ಡಿ.ಮರಿಕುಂಟೆ 11.4 ಮಿ.ಮೀ. ನಾಯಕನಹಟ್ಟಿ 9.4 ಮಿ.ಮೀ, ಪರಶುರಾಮಪುರ 9.2ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 24.8 ಮಿಮೀ, ಚಿತ್ರದುರ್ಗ-2ರಲ್ಲಿ 23.4 ಮಿ.ಮೀ, ಭರಮಸಾಗರದಲ್ಲಿ 26.4 ಮಿ.ಮೀ, ಸಿರಿಗೆರೆ 35.4 ಮಿ.ಮೀ, ತುರುವನೂರು 9.4 ಮಿ.ಮೀ, ಹಿರೇಗುಂಟನೂರು 7.4 ಮಿ.ಮೀ, ಐನಹಳ್ಳಿ 16.4ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗ ನಗರದಲ್ಲಿ 52.4 ಮಿ.ಮೀ, ಬಾಗೂರು 8.3 ಮಿ.ಮೀ, ಮತ್ತೋಡು 15.4 ಮಿ.ಮೀ, ಶ್ರೀರಾಂಪುರ 50.2ಮಿ.ಮೀ, ಮಾಡದಕೆರೆ 40 ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆ ನಗರದಲ್ಲಿ 36.4 ಮಿ.ಮೀ, ಬಿ.ದುರ್ಗ 29.2 ಮಿ.ಮೀ, ಹೆಚ್.ಡಿ.ಪುರ 64 ಮಿ.ಮೀ, ತಾಳ್ಯ 6.4 ಮಿ.ಮೀ, ರಾಮಗಿರಿ 27.4 ಮಿ.ಮೀ, ಚಿಕ್ಕಜಾಜೂರು 14.6 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರು ಪಟ್ಟಣದಲ್ಲಿ 1.3 ಮಿ.ಮೀ, ರಾಯಾಪುರದಲ್ಲಿ 5.6 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Heavy Rains Lash Across Chitradurga

33 ಮನೆಗಳಿಗೆ ಭಾಗಶಃ ಹಾನಿ:
ಮೇ 17ರಂದು ಬಿದ್ದ ಮಳೆಯವಿವರದನ್ವಯ ಜಿಲ್ಲೆಯಾದ್ಯಂತ ಒಟ್ಟು 33 ಮನೆಗಳು ಭಾಗಶಃ ಹಾನಿಯಾಗಿವೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 08 ಮನೆಗಳು, ಚಳ್ಳಕೆರೆ-4, ಮೊಳಕಾಲ್ಮುರು-2, ಹೊಸದುರ್ಗ-4, ಹಿರಿಯೂರು-11 ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ 4 ಮನೆಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 33 ಮನೆಗಳು ಭಾಗಶಃ ಹಾನಿಯಾಗಿವೆ. ಜಾನುವಾರು ಹಾನಿಗೆ ಸಂಬಂಧಿಸಿದಂತೆ ಮೂರು ಹಸು ಹಾಗೂ 154 ಕುರಿಗಳು ಮೃತಪಟ್ಟಿವೆ. 16 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Heavy Rains Lash Across Chitradurga

ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬುಧವಾರದ ಇಂದು ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣ ಸೃಷ್ಟಿಯಾಗಿದ್ದು, ಜಿಟಿ ಜಿಟಿ ಮಳೆ ಆರಂಭವಾಗಿದೆ. ಇನ್ನು ಇಂದು ರಾತ್ರಿ ಸಹ ಹೆಚ್ಚು ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.

(ಒನ್ಇಂಡಿಯಾ ಸುದ್ದಿ)

English summary
The rains that have been pouring in continuously for the past 2-3 days have completely disrupted life. Varuns, small ponds, farm pits and check dams are scattered throughout the district late into the night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X