ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ: ಮುಂದುವರೆದ ಜಿಟಿ ಜಿಟಿ ಮಳೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ18: ಚಿತ್ರದುರ್ಗ ಜಿಲ್ಲೆಯಲ್ಲಿ ಮೇ 18ರಂದು ಸುರಿದ ಮಳೆಯ ವಿವರದನ್ವಯ ಹಿರಿಯೂರು ತಾಲ್ಲೂಕಿನ ಇಕ್ಕನೂರಿನಲ್ಲಿ 88.2 ಮಿ.ಮೀ, ಮಳೆಯಾಗಿದೆ. ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 21.6 ಮಿ.ಮೀ. ಬಬ್ಬೂರು 28.6 ಮಿ.ಮೀ, ಈಶ್ವರಗೆರೆ 68.8 ಮಿ.ಮೀ, ಸುಗೂರು 39.3 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 4.2 ಮಿ.ಮೀ, ತಳುಕು 18 ಮಿ.ಮೀ, ಡಿ.ಮರಿಕುಂಟೆ 23.4 ಮಿ.ಮೀ. ನಾಯಕನಹಟ್ಟಿ 16.4 ಮಿ.ಮೀ, ಪರಶುರಾಮಪುರ 21.0 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 33.6 ಮಿಮೀ, ಚಿತ್ರದುರ್ಗ-2ರಲ್ಲಿ 17.1 ಮಿ.ಮೀ, ಭರಮಸಾಗರದಲ್ಲಿ 19.6 ಮಿ.ಮೀ, ಸಿರಿಗೆರೆ 12.4 ಮಿ.ಮೀ, ತುರುವನೂರು 14.2 ಮಿ.ಮೀ, ಹಿರೇಗುಂಟನೂರು 3.1 ಮಿ.ಮೀ, ಐನಹಳ್ಳಿ 13.2 ಮಿ.ಮೀ ಮಳೆಯಾಗಿದೆ ಎಂಬ ಮಾಹಿತಿ ಬಂದಿದೆ.

Heavy Rain In Hiriyur Ikkanur Reports 88.2 MM Rain

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 23.4 ಮಿ.ಮೀ, ಬಾಗೂರು 7.5 ಮಿ.ಮೀ, ಮತ್ತೋಡು 25 ಮಿ.ಮೀ, ಶ್ರೀರಾಂಪುರ 55.2 ಮಿ.ಮೀ, ಮಾಡದಕೆರೆ 18.2 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 17.4 ಮಿ.ಮೀ, ಬಿ.ದುರ್ಗ 11.2 ಮಿ.ಮೀ, ಹೆಚ್.ಡಿ.ಪುರ 36.4 ಮಿ.ಮೀ, ತಾಳ್ಯ 3.2 ಮಿ.ಮೀ, ರಾಮಗಿರಿ 17.2 ಚಿಕ್ಕಜಾಜೂರು 9.5 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 34 ಮಿ.ಮೀ, ಬಿ.ಜಿ ಕೆರೆ 19ಮಿ.ಮೀ, ರಾಂಪುರ 19 ಮಿ.ಮೀ, ದೇವಸಮುದ್ರ 78.2 ಮಿ.ಮೀ, ರಾಯಾಪುರ 14.3 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Heavy Rain In Hiriyur Ikkanur Reports 88.2 MM Rain

ಸಂಜೆಯಿಂದಲೂ ಮಳೆ; ಜಿಲ್ಲೆಯಲ್ಲಿ ಬುಧವಾರ ಸಂಜೆಯಿಂದಲೂ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಇದರಿಂದ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಎರಡ್ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ತರಕಾರಿ ಮಾರಾಟ, ಹೋಟೆಲ್ ಉದ್ಯಮ ಸೇರಿದಂತೆ ಇನ್ನಿತರ ವ್ಯಾಪಾರ ವಹಿವಾಟಿಗೆ ಮಳೆ ತೊಂದರೆ ಉಂಟುಮಾಡಿದೆ. ಈ ಮಳೆಯಿಂದ ಜನರು ಪರದಾಡುವ ಸ್ಥಿತಿ ಎದುರಾಗಿದೆ.

ರೈತರ ಮೊಗದಲ್ಲಿ ಮಂದಹಾಸ; ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮಳೆ ಕೃಷಿ ಚಟುವಟಿಕೆಗಳಿಗೆ ತುಂಬಾ ಅನುಕೂಲಕರವಾಗಲಿದೆ. ಈರುಳ್ಳಿ, ರಾಗಿ, ಜೋಳ, ತೊಗರಿ, ಶೇಂಗಾ ಸೇರಿದಂತೆ ಮತ್ತಿತರರ ಬೆಳೆಗಳನ್ನು ಬೆಳೆಯಲು ತುಂಬಾ ಅನುಕೂಲವಾಗುತ್ತದೆ.

Recommended Video

LSG vs KKR ಪಂದ್ಯ ಮುಗಿದ ನಂತರ Gambhir ಸಂಭ್ರಮ ಹೀಗಿತ್ತು | Oneindia Kannada

English summary
Chitradurga district rain update on May 18. Hiriyur taluk Ikkanur reported 88.2 Mm rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X