ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದ್ಯ ಮಾರಾಟದ ಬಗ್ಗೆ ಸಚಿವ ಶ್ರೀರಾಮುಲು ಏನಂದ್ರು?

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 29: ಗ್ರೀನ್ ಝೋನ್, ರೆಡ್ ಝೋನ್, ಆರೆಂಜ್ ಝೋನ್ ಸೇರಿದಂತೆ ಎಲ್ಲಿಯೂ ಸಹ ಮದ್ಯ ಮಾರಾಟಕ್ಕೆ ಅವಕಾಶ ನೀಡಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು. ಗ್ರೀನ್ ಜೋನ್ ಜಿಲ್ಲೆಗಳಲ್ಲಿ ಮದ್ಯದಂಗಡಿ ತೆರೆಯುವಂತೆ ಸಿದ್ದರಾಮಯ್ಯ ಸಲಹೆಗೆ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಗ್ರಾಮದಲ್ಲಿ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದರು.

ಬಹಳ ಒತ್ತಡ ಬಂದ ಸಮಯದಲ್ಲಿ ಕೂಡಾ ಅವಕಾಶ ನೀಡಿಲ್ಲ, ಆರಂಭದಿಂದ ಇಲ್ಲಿಯವರೆಗೂ ಅವಕಾಶ ನೀಡಿಲ್ಲ. ಈ ವಿಚಾರದಲ್ಲಿ ಯಾರಿಂದಲೂ ಹೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದರು. ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲ್ಲ ಎಂದು ಹೇಳಿದರು.

ಹಸಿರು ವಲಯದಲ್ಲಿ ಮದ್ಯ ಮಾರಾಟ? ನಾಳೆ ಸಂಪುಟ ಸಭೆಯಲ್ಲಿ ತೀರ್ಮಾನ!ಹಸಿರು ವಲಯದಲ್ಲಿ ಮದ್ಯ ಮಾರಾಟ? ನಾಳೆ ಸಂಪುಟ ಸಭೆಯಲ್ಲಿ ತೀರ್ಮಾನ!

ಇನ್ನು ರಾಮನಗರಕ್ಕೆ ಪಾದರಾಯಪುರ ಆರೋಪಿಗಳ ಶಿಫ್ಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಶ್ರೀರಾಮುಲು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದ ಬಳಿಕ ಆರೋಪಿಗಳನ್ನು ತಕ್ಷಣ ವಾಪಸ್ ಕರೆಸಿದ್ದೇವೆ, ಅವರು ಮಾಜಿ ಸಿಎಂ ಅವರ ಬಗ್ಗೆ ಗೌರವ ಇದೆ ಎಂದರು ಹೇಳಿದರು.

Health Minister Sriramulu React On Liquor Sales

ಹಸಿವಿನಿಂದ ಯಾರು ಇರಬಾರದು ಎಂದು ಸಿಎಂ ನಿರ್ಧಾರ ಮಾಡಿದ್ದಾರೆ. ಹಾಗಾಗಿ BPL, APL ಹಾಗೂ ಕಾರ್ಡ್ ಇಲ್ಲದವರಿಗೂ ಆಹಾರ ನೀಡಲು ತೀರ್ಮಾನ ಮಾಡಲಾಗಿದೆ. ಭಿಕ್ಷೆ ಬೇಡುವವರು, ಅನಾಥರು ಆಹಾರ ಇಲ್ಲದಂತೆ ಇರಬಾರದು ಎಂಬುದು ಮುಖ್ಯಮಂತ್ರಿಗಳ ಸ್ಪಷ್ಟ ನಿಲುವು.

ನಮ್ಮ ಆದ್ಯತೆ ಜನರನ್ನು ಕಾಪಾಡುವುದು, ಆರ್ಥಿಕ ಪರಿಸ್ಥಿತಿ ಬಿಕಟ್ಟು ಆದರೂ ಜೀವ ಉಳಿಸುವುದು ನಮ್ಮ ಆದ್ಯತೆಯಾಗಿದೆ. ನಾವು ಯಾವುದೇ ಜಾತಿ, ಧರ್ಮವನ್ನು ನಿಂದನೆ ಮಾಡಲ್ಲ, ನಮ್ಮ ಫ್ರಂಟ್ ಲೈನ್ ವಾರಿಯರ್ಸ್ ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆರು, ಪೊಲೀಸರು, ಪತ್ರಕರ್ತರು ಅವರೆಲ್ಲಾ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ತಬ್ಲಿಘಿ ಜಮಾತ್ ಅವರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಒಪ್ಪುವುದಿಲ್ಲವೆಂದರು.

English summary
Health Minister B. Sriramulu said liquor sales were not allowed anywhere, including the Green Zone, Red Zone and Orange Zone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X