ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ನಿಯಂತ್ರಣ: ದೇವರೆ ನಮ್ಮನ್ನು‌ ಕಾಪಾಡಬೇಕು ಎಂದ ಆರೋಗ್ಯ ಸಚಿವ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 15: ಕೊರೊನಾ ವೈರಸ್ ನಿಯಂತ್ರಣ ಯಾರ ಕೈಯಲ್ಲಿ ಇದೆ ಹೇಳಿ? ಇವತ್ತು ದೇವರೇ ನಮ್ಮನ್ನು‌ ಕಾಪಾಡಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಕೋವಿಡ್ ನಿವಾರಣೆ ಜವಾಬ್ದಾರಿಯನ್ನು ದೇವರ ಹೆಗಲಿಗೆ ಹಾಕಿದರು.

ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು, ಸರ್ಕಾರದ ಸಚಿವರ ನಡುವೆ ಹೊಂದಾಣಿಕೆ ಇಲ್ಲ, ಸರ್ಕಾರ ವಿಫಲವಾಗಿದೆ ಎಂಬ ಕಾಂಗ್ರೆಸ್ ಪಕ್ಷದ ಹೇಳಿಕೆಗೆ ತಿರುಗೇಟು ನೀಡಿದರು.

ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಅರ್ಧ ಗಂಟೆಯಲ್ಲಿ ಕೋವಿಡ್-19 ವರದಿಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಅರ್ಧ ಗಂಟೆಯಲ್ಲಿ ಕೋವಿಡ್-19 ವರದಿ

ಸಚಿವರ ನಡುವೆ ಹೊಂದಾಣಿಕೆ ಇಲ್ಲ, ಸರ್ಕಾರ ವಿಫಲವಾಗಿದೆ ಎಂಬ ಏನೇ ಆರೋಪಗಳು ಇರಬಹುದು, ಆದರೆ ಬಡ ಜನರ ಬದುಕು ಮುಖ್ಯ. ಕಾಂಗ್ರೆಸ್ ನವರು ನೋಡಿಕೊಂಡು ಮಾತನಾಡಬೇಕು ಎಂದರು.

 Chitradurga: Health Minister B Sriramulu React About Congress Allegation

ಮುಂದಿನ‌ ಎರಡು ತಿಂಗಳಲ್ಲಿ ಕೊರೊನಾ ವೈರಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೋಂಕು ಹೆಚ್ಚಳದ ಬಗ್ಗೆ ಸುಳಿವು ನೀಡಿದರು. ಕೊರೊನಾ ಸೋಂಕಿಗೆ ಶ್ರೀಮಂತರು, ಬಡವರು ಎಂಬುದು ಗೊತ್ತಿಲ್ಲ, ಎಲ್ಲರಿಗೂ ಸೋಂಕು ಹರಡುವುದು ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಚಿತ್ರದುರ್ಗದಲ್ಲಿ ಮತ್ತೆ 10 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಚಿತ್ರದುರ್ಗದಲ್ಲಿ ಮತ್ತೆ 10 ಜನರಿಗೆ ಕೊರೊನಾ ವೈರಸ್ ಸೋಂಕು ದೃಢ

ವಿರೋಧ ಪಕ್ಷದವರು ಏನೇ ಆರೋಪಗಳನ್ನು ಮಾಡಿದರೂ ಕೊರೊನಾ ಸೋಂಕು ಹರಡುವ ತೀವ್ರತೆ ಹೆಚ್ಚಾಗುತ್ತದೆ. ಮುಂದಿನ ಎರಡು ತಿಂಗಳಲ್ಲಿ ಸೋಂಕು ಹೆಚ್ಚಾಗುವ ಲಕ್ಷಣಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.

English summary
Health Minister B. Sriramulu hinted that coronavirus is likely to increase in the next two months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X