ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಗಾಲದಲ್ಲಿ ಹಲಸಿನ ಹಣ್ಣು ಸೇವಿಸುವುದರಿಂದ ಉಪಯೋಗವಿದೆಯಾ?

By ಚಿದಾನಂದ್ ಮಸ್ಕಲ್
|
Google Oneindia Kannada News

ಚಿತ್ರದುರ್ಗ: ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾದ ನಂತರದಲ್ಲಿ ಹೆಚ್ಚಾಗಿ ಸಿಗುವ ಹಣ್ಣು ಎಂದರೆ ಹಲಸಿನ ಹಣ್ಣು. ಮೇ, ಜೂನ್, ಜುಲೈ ತಿಂಗಳಲ್ಲಿ ಮಾರುಕಟ್ಟೆಗಳಲ್ಲಿ ಹಣ್ಣು ಮಾರಾಟವಾಗುತ್ತದೆ. ಮಾರುಕಟ್ಟೆ ಮತ್ತು ರಸ್ತೆಯ ಬದಿಯಲ್ಲಿ ಗಮ ಗಮಿಸುವ ಮೂಲಕ ತನ್ನ ಸುವಾಸನೆಯಿಂದ ಗ್ರಾಹಕರನ್ನು ಕೈ ಬಿಸಿ ಕರೆಯುತ್ತದೆ.

ಒಂದು ಹಲಸಿನ ಮೂಡೆಗೆ 30, 50, 80,100, 150 ರೂನಂತೆ ಮಾರಾಟ ಮಾಡಲಾಗುತ್ತಿದೆ. ಇನ್ನು ಚಿಲ್ಲರೆ ವ್ಯಾಪಾರಿಗಳು ಹಲಸಿನ ಹಣ್ಣನ್ನು ಕೊಯ್ದು, 3 ರೂಪಾಯಿಗೆ ಒಂದು ತೊಳೆಯಂತೆ, 10 ರೂಪಾಯಿ 3/4 ತೊಳೆ ಮಾರಾಟ ಮಾಡುತ್ತಿದ್ದಾರೆ. ಚಿತ್ರದುರ್ಗ ನಗರ, ಹಿರಿಯೂರು, ಚಳ್ಳಕೆರೆ ಮತ್ತಿತರರ ಕಡೆಗಳಲ್ಲಿ ಹಲಸಿನ ಹಣ್ಣಿನ ಭರ್ಜರಿ ವ್ಯಾಪಾರ ನಡೆಯುತ್ತಿದೆ ಎನ್ನಲಾಗಿದೆ.

ಹಲಸಿನ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ. ಮನುಷ್ಯನ ಹಲವು ಕಾಯಿಲೆಗಳಿಗೆ ಬೇಕಾಗಿರುವ ಮದ್ದಿನ ಗುಣವನ್ನು ಹಲಸಿನ ಹಣ್ಣು ನಾಟಿ ಔಷಧಿ ಎಂದರೆ ತಪ್ಪಾಗಲಾರದು. ಈ ಹಣ್ಣಿನಲ್ಲಿ ಹೇರಳವಾಗಿರುವ ಜೀವಸತ್ವಗಳು ದೇಹಕ್ಕೆ ತುಂಬಾ ಒಳ್ಳೆಯದು.

ರೋಗಗಳಿಗೆ ಮದ್ದು

ರೋಗಗಳಿಗೆ ಮದ್ದು

ರೋಗಗಳಿಗೆ ಮದ್ದು: ಹಲಸಿನ ಹಣ್ಣಿನಲ್ಲಿ ವಿಟಮಿನ್ 'ಎ' ಸಮೃದ್ಧವಾಗಿದೆ. ಈ ಹಣ್ಣು ತಿನ್ನುವುದರಿಂದ ಕಣ್ಣಿನ ಪೊರೆಯಂತಹ ಸಮಸ್ಯೆಗಳಿಗೆ ಉತ್ತಮವಾದುದಾಗಿದೆ.

ಮನುಷ್ಯನ ದೇಹದಲ್ಲಿ ಕಡಿಮೆ ಕೊಬ್ಬು, ಹೆಚ್ಚಿನ ಕ್ಯಾಲೋರಿ ಹೊಂದಿರುವ ಆಹಾರಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಲಸಿನ ಹಣ್ಣಿನಲ್ಲಿ ಫೈಬರ್ ಅಧಿಕವಾಗಿರುತ್ತದೆ. ಹೀಗಾಗಿ, ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಈ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ.

ಮೂಳೆಗಳನ್ನು ಬಲಪಡಿಸಲು ಸಹಕಾರಿ

ಮೂಳೆಗಳನ್ನು ಬಲಪಡಿಸಲು ಸಹಕಾರಿ

ಈ ಹಣ್ಣಿನಲ್ಲಿ ಅಧಿಕ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಈ ವಿಟಮಿನ್ ಆಹಾರ ತಿಂದರೆ ಮೂಳೆಗಳು ಗಟ್ಟಿಯಾಗುತ್ತದೆ.

ಹಲಸಿನ ಹಣ್ಣು ಅಲ್ಸರೇಟಿವ್, ಆಂಟಿ-ಸೆಪ್ಟಿಕ್, ಉರಿಯೂತ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಡಯಾಬಿಟೀಸ್ ಕಾಯಿಲೆಯನ್ನು ಹಲಸಿನಹಣ್ಣು ಕಡಿಮೆ

ಡಯಾಬಿಟೀಸ್ ಕಾಯಿಲೆಯನ್ನು ಹಲಸಿನಹಣ್ಣು ಕಡಿಮೆ

ಇದಲ್ಲದೆ ಡಯಾಬಿಟೀಸ್ ಕಾಯಿಲೆಯನ್ನು ಹಲಸಿನಹಣ್ಣು ಕಡಿಮೆಮಾಡುತ್ತದೆ. ಇದರ ಜೊತೆಗೆ ಹೃದಯ ಸಮಸ್ಯೆ, ರಕ್ತದೊತ್ತಡ ಇರುವವರು ಈ ಹಣ್ಣನ್ನು ಸೇವಿಸಿದರೆ ಉತ್ತಮ.

ಮೂಳೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಚರ್ಮದ ಮೇಳೆ ಆಗುವ ಕಪ್ಪು ಕಲೆಗಳನ್ನು ಹೊಡೆದೋಡಿಸುತ್ತದೆ.

Recommended Video

Yeddyurappa ರಾಜಿನಾಮೆ ಕೊಡುವುದರ ಬಗ್ಗೆ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ | Oneindia Kannada
ಹಣ್ಣಿನ ಬೀಜದಿಂದ ಸಾಂಬಾರಿಗೆ ಉಪಯುಕ್ತ

ಹಣ್ಣಿನ ಬೀಜದಿಂದ ಸಾಂಬಾರಿಗೆ ಉಪಯುಕ್ತ

ಬೀಜದಿಂದ ಸಾಂಬಾರು : ಹಲಸಿನ ಹಣ್ಣಿನ ಬೀಜದಿಂದ ಸಾಂಬಾರಿಗೆ ಉಪಯೋಗಿಸುತ್ತಾರೆ. ಬೀಜವನ್ನು ಕುಟ್ಟಿ ಹೋಳು ಮಾಡಿ, ಕಡ್ಲೆ ಬೇಳೆ ಹಾಕಿ ಸಾಂಬಾರ್ ಮಾಡಿ ಮುದ್ದೆಯೊಂದಿಗೆ ಸವಿದರೇ ಪದೇ ಪದೇ ಸವಿಯಬೇಕು ಅನ್ನಿಸುತ್ತದೆ. ಜೊತೆಗೆ ಹಲಸಿನ ದೋಸೆ, ಚಿಪ್ಸ್, ಹಲಸಿನ ಕಡುಬು ತಯಾರಿಸಬಹುದು. ಇದಲ್ಲದೆ ರಸಾಯನ ಮಾಡಿ ಚಪಾತಿಯೊಂದಿಗೆ ಸವಿಯಬಹುದು.

ಮನುಷ್ಯನಲ್ಲದೆ ಕರಡಿಗೆ ಬಹಳ ಇಷ್ಟವಾದ ಹಲಸಿನ ಹಣ್ಣಾಗಿದೆ. ಕಾಡಿನಲ್ಲಿ ಕರಡಿ ಕೈಗೆ ಹಲಸಿನ ಹಣ್ಣು ಸಿಕ್ಕರೆ ಅದನ್ನು ಸುಲಿದು, ಜೇನು ತುಪ್ಪ ತಂದು ಎರಡನ್ನು ಮಿಕ್ಸ್ ಮಾಡಿ, ತಾನು ಮತ್ತು ಮರಿಗಳಿಗೆ ತಿನ್ನಲು ಬಿಡುತ್ತದೆ. ಇದು ಮನುಷ್ಯರ ಕೈಗೆ ಸಿಕ್ಕರೆ ಚಪ್ಪರಿಸಿಕೊಂಡು ತಿನ್ನುತ್ತಾರೆ ಎಂದು ಹಿರಿಯ ವ್ಯಕ್ತಿಗಳು ತಿಳಿಸುತ್ತಾರೆ.

English summary
Health Benefits of consuming Jackfruit in Winter and Jackfruit has multiple nutrients like Vitamin B and Potassium here is report from Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X