ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯಗೆ ಮೊಟ್ಟೆ ಎಸೆದು ಮಡಿಕೇರಿಗೆ ಗೌರವ ತಂದಿದ್ದೀರಾ?, ಹಿರಿಯೂರಿನಲ್ಲಿ ಎಚ್‌ಡಿಕೆ ಕಿಡಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಆಗಸ್ಟ್‌, 19: ರಾಜ್ಯದಲ್ಲಿ ಈಗಾಗಲೇ ಧರ್ಮ ದಂಗಲ್‌ಗಳು ಶುರುವಾಗಿದ್ದು, ಸಂಘರ್ಷಗಳು ತಾರಕ್ಕೇರುತ್ತಲೇ ಇವೆ. ಈ ಬಗ್ಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಸರ್ವ ಜನಾಂಗದ ಶಾಂತಿ‌ಯ ತೋಟದಲ್ಲಿ‌ ಶಾಂತಿಯುತವಾಗಿ‌ ಬದುಕಲು‌ ಬಿಡಿ. ಕ್ಷುಲ್ಲಕ‌ ವಿಚಾರಗಳನ್ನು ದೂರವಿಟ್ಟು ರಾಜ್ಯದಲ್ಲಿರುವ ಸಮಸ್ಯೆಗಳ‌ ಬಗ್ಗೆ ಚರ್ಚಿಸಿ ಎಂದು‌ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮನವಿ‌ ಮಾಡಿದ್ದೇನೆ ಎಂದರು. ಹಾಗೂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ವಿಚಾರವಾಗಿ ಮಾತನಾಡಿದ ಅವರು, ಇದರಿಂದ ಮಡಿಕೇರಿ ಗೌರವ ತಂದಿದ್ದೀರಾ? ಎಂದು ಅಲ್ಲಿನ ಯುವಕರಿಗೆ ಪ್ರಶ್ನಿಸಿದರು.

"ಮೊಟ್ಟೆ ಎಸೆದು ಮಡಿಕೇರಿಗೆ ಗೌರವ ತಂದಿದ್ದೀರಾ?"

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಮಾತನಾಡಿದ ಅವರು, ಯಾವುದೇ ಸಂಘಟನೆಗಳಿರಲಿ ಅವರು ಸಮಾಜದ ಶಾಂತಿ ಕಾಪಾಡುವ ಕೆಲಸವನ್ನು ಮಾಡಬೇಕು. ಹಿಂದೂಪರ ಅಥವಾ ಸಮಾಜದ ಪರವಾದ ಸಂಘಟನೆಗಳು ಸಮಾಜದಲ್ಲಿ ಶಾಂತಿಯುತವಾಗಿ‌ ವರ್ತಿಸಬೇಕು. "ಸಿದ್ದರಾಮಯ್ಯ ಅವರ ಮೇಲೆ ಕೋಳಿ ಮೊಟ್ಟೆ ಎಸೆದಿರುವುದಕ್ಕೆ ನಾನು‌ ಖುಷಿ‌ ಪಡುವುದಿಲ್ಲ." ಇಂತಹ ದುರ್ಘನೆಗಳು ‌ನಡೆಯಬಾರದು. "ಜನರ ಸಮಸ್ಯೆಗಳನ್ನು ಆಲಿಸಲು ಬಂದವರ ಮೇಲೆ‌ ಮೊಟ್ಟೆ ಎಸೆಯುವುದು ಸರಿಯಲ್ಲ. "ಮೊಟ್ಟೆ ಎಸೆದು ಮಡಿಕೇರಿಗೆ ಗೌರವ ತಂದಿದ್ದೀರಾ?" ಸರ್ಕಾರ ಇದನ್ನೆಲ್ಲ ನೋಡಿಕೊಂಡು ಸುಮ್ಮನಿದ್ದರೆ ಏನರ್ಥ? ರಾಜ್ಯಕ್ಕೆ ಬಿಜೆಪಿ ಅವರು ಮೂರು ವರ್ಷದಲ್ಲಿ ಏನು ಕೊಡುಗೆ ಕೊಟ್ಟಿದ್ದಾರೆ?" ಎಂದು ಪ್ರಶ್ನಿಸುವುದರ ಮೂಲಕ ಕಿಡಿಕಾರಿದರು.

ಚಿತ್ರದುರ್ಗ: ಭಾರೀ ಮಳೆ, ತುಂಬಿ ಹರಿಯುತ್ತಿರುವ ಕೆರೆಕಟ್ಟೆಗಳು ಚಿತ್ರದುರ್ಗ: ಭಾರೀ ಮಳೆ, ತುಂಬಿ ಹರಿಯುತ್ತಿರುವ ಕೆರೆಕಟ್ಟೆಗಳು

"ಮುತಾಲಿಕ್‌ಗೆ ದೇಶದ ಸಮಸ್ಯೆಗಳ ಬಗ್ಗೆ ಗೊತ್ತಿಲ್ಲ"

"ಮತ್ತೊಂದೆಡೆ ಪ್ರಮೋದ್ ಮುತಾಲಿಕ್‌ ಅವರು ಬರೀ ಸಂಘರ್ಷದ ಹಾಗೂ ಪ್ರಚೋದನೆ ಹುಟ್ಟುಹಾಕುವಂತಹ ಮಾತುಗಳನ್ನೇ ಆಡುತ್ತರೆ, ಈ‌‌ ದೇಶದ ಬಡತನ ಹಾಗೂ ಸಮಸ್ಯೆಗಳ ಬಗ್ಗೆ ಅವರಿಗೆ ಏನೂ‌ ಗೊತ್ತಿಲ್ಲ." ಅವರ ಬಗ್ಗೆ ಚರ್ಚೆ ಮಾಡುವುದು ಸೂಕ್ತ ಅಲ್ಲ. ಅಂಥವರಿಗೆ‌ ಜನರು ಪ್ರೋತ್ಸಾಹಿಸಬಾರದು ಎಂದು ಗುಡುಗಿದರು.

HD Kumarasswamy reaction on BJP Protesters throwing egg on Siddaramaiahs car

ಈಗಾಗಲೇ‌ ಕಾಂಗ್ರೆಸ್‌ ಹಾಗೂ ಡಿ.ಕೆ.ಶಿವಕುಮಾರ್‌ ಪೂರ್ಣ ಬಹುಮತ ಬಂದಿದೆ ಎಂದು ತಿಳಿದಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಕುರ್ಚಿಗೆ ಮೊದಲು‌ ಟವಲ್ ಹಾಕಿದ್ದಾರೆ. ಅದನ್ನು ಡಿ.ಕೆ.ಶಿವಕುಮಾರ್‌ ಅವರು ಓವರ್ ಟೇಕ್ ಮಾಡಿ‌ ಬರುತ್ತಾರಾ ಎಂದು‌ ಪ್ರಶ್ನಿಸಿದರು. ಡಿ.ಕೆ.ಶಿವಕುಮಾರ್‌ಗೆ ಅವರೆಲ್ಲಾ ಸುಮ್ಮನೆ ಬಿಡುತ್ತಾರೆಯೇ? ಅವೆಲ್ಲಾ ಭಗವಂತನ‌ ಇಚ್ಛೆ. ನಾನು ಜನರ ‌ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನಮ್ಮ ಪಕ್ಷದ ಸಾಕಷ್ಟು ಶ್ರಮ‌ ಹಾಕುತ್ತೇನೆ.‌ ಆದ್ದರಿಂದ ನಿಮ್ಮ ಪಕ್ಷದ ನೀವು ಶ್ರಮವನ್ನು ಹಾಕಿ ಎಂದು ಡಿ.ಕೆ.ಶಿವಕುಮಾರ್‌ಗೆ ಸಲಹೆ ನೀಡಿದರು.

HD Kumarasswamy reaction on BJP Protesters throwing egg on Siddaramaiahs car

"ದೇವರು ಯಾರಿಗೆ ಅಧಿಕಾರ ಕೊಡುತ್ತಾನೆ ಎಂದು‌ ಗೊತ್ತಿಲ್ಲ, ಮುಂದಿ‌ನ ಚುನಾವಣೆ ಫಲಿತಾಂಶದ ಬಗ್ಗೆಯೂ ನನಗೆ ಗೊತ್ತಿಲ್ಲ." ಫಲಿತಾಂಶದ ನಂತರ ಯಾವ ಬೆಳವಣಿಗೆ ಆಗಲಿದೆ ಗೊತ್ತಿಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಿಜೆಪಿ ಬೀ ಟೀಮ್ ಎಂದಿದ್ದರು. ಚುನಾವಣೆ ಮುಗಿದ ಬಳಿಕ‌ ನಮ್ಮೊಟ್ಟಿಗೆ ಬಂದು‌ ಸರ್ಕಾರ ರಚನೆ ಮಾಡಿದರು ಎಂದು ಆಕ್ರೋಶ ಹೊರಹಾಕಿದರು.

English summary
Former Chief minister HD Kumaraswamy expressed anger on Madikeri Egg throwing incident where Siddaramaiah Gheraoed and pelted with eggs by BJP activitst. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X