ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಡಿಸೆಂಬರ್ 31: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ 189 ಗ್ರಾಮ ಪಂಚಾಯಿತಿ ಸದಸ್ಯರ ಆಯ್ಕೆಗಾಗಿ ಎರಡು ಹಂತದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಜಿಲ್ಲೆಯ ಆರು ತಾಲೂಕು ಕೇಂದ್ರಗಳಲ್ಲಿ ಬುಧವಾರ ನಡೆಯಿತು. ತಡವಾಗಿ ಆರಂಭವಾದ ಮತ ಎಣಿಕೆ ಕಾರ್ಯ ಮಧ್ಯರಾತ್ರಿ ತನಕ ಯಾವುದೇ ಅಹಿತಕರ ಘಟನೆ ನಡೆಯಂದತೆ ಶಾಂತಿಯುತವಾಗಿ ನಡೆಯಿತು.

ಜಿಲ್ಲೆಯಲ್ಲಿ ಒಟ್ಟು 3,421 ಸದಸ್ಯ ಸ್ಥಾನಗಳಲ್ಲಿ 347 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. 10 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. 3063 ಸದಸ್ಯರ ಆಯ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ಮುಕ್ತಾಯಗೊಂಡಿದೆ.

Infographics:ಜಿಲ್ಲಾವಾರು ಗ್ರಾಮ ಪಂಚಾಯಿತಿ ಫಲಿತಾಂಶ ಅಪ್ಡೇಟ್ಸ್ Infographics:ಜಿಲ್ಲಾವಾರು ಗ್ರಾಮ ಪಂಚಾಯಿತಿ ಫಲಿತಾಂಶ ಅಪ್ಡೇಟ್ಸ್

ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು, ಹೊಳಲ್ಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸದುರ್ಗದ ಶ್ರೀಮತಿ ತಾಯಮ್ಮ ಸದ್ದಿವಾಲ್ ಲಿಂಗಯ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಮೊಳಕಾಲ್ಮೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಚಳ್ಳಕೆರೆಯ ಹೆಚ್.ಪಿ.ಪಿ.ಸಿ ಪ್ರಥಮ ದರ್ಜೆ ಕಾಲೇಜು ಹಾಗೂ ಹಿರಿಯೂರು ನಗರದ ಮುಖ್ಯ ರಸ್ತೆಯ ಗುರುಭವನದ ಪಕ್ಕದ ಗಿರೀಶ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು.

Karnataka Gram Panchayat Election Results 2020 Live : ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶKarnataka Gram Panchayat Election Results 2020 Live : ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ

ಮೊದಲ ಹಂತದ ಚುನಾವಣೆ

ಮೊದಲ ಹಂತದ ಚುನಾವಣೆ

ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಚಿತ್ರದುರ್ಗ ತಾಲ್ಲೂಕಿನ 38, ಹೊಸದುರ್ಗ ತಾಲ್ಲೂಕಿನ 33 ಹಾಗೂ ಹೊಳಲ್ಕೆರೆ ತಾಲ್ಲೂಕಿನ 29 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು 100 ಗ್ರಾಮ ಪಂಚಾಯಿತಿಗಳ 1,753 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. 158 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 6 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ.

1,588 ಸ್ಥಾನಗಳಿಗೆ ಮತದಾನ ನಡೆಸಲು ಮೊದಲ ಹಂತದ ಚುನಾವಣೆಗೆ ಚಿತ್ರದುರ್ಗ 323, ಹೊಸದುರ್ಗ 247 ಹಾಗೂ ಹೊಳಲ್ಕೆರೆಯಲ್ಲಿ 239 ಮತಗಟ್ಟೆಗಳು ಸೇರಿದಂತೆ ಒಟ್ಟು 809 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 1,588 ಸದಸ್ಯ ಸ್ಥಾನಗಳಿಗೆ ಚಿತ್ರದುರ್ಗ 1695, ಹೊಸದುರ್ಗ 1535 ಹಾಗೂ ಹೊಳಲ್ಕೆರೆ ತಾಲ್ಲೂಕಿನ 1292 ಅಭ್ಯರ್ಥಿಗಳು ಸೇರಿದಂತೆ ಒಟ್ಟು 4522 ಅಭ್ಯರ್ಥಿಗಳು ಕಣದಲ್ಲಿದ್ದರು.

ಎರಡನೇ ಹಂತದ ಚುನಾವಣೆ

ಎರಡನೇ ಹಂತದ ಚುನಾವಣೆ

ಎರಡನೇ ಹಂತದಲ್ಲಿ ಹಿರಿಯೂರು ತಾಲ್ಲೂಕಿನ 33, ಚಳ್ಳಕೆರೆ ತಾಲ್ಲೂಕಿನ 40 ಹಾಗೂ ಮೊಳಕಾಲ್ಮುರು ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು 89 ಗ್ರಾಮ ಪಂಚಾಯಿತಿಗಳ 1668 ಸ್ಥಾನಗಳಿಗೆ ಚುನಾವಣೆ ಷೋಷಣೆಯಾಗಿತ್ತು. ಇದರಲ್ಲಿ 189 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 4 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಹೀಗಾಗಿ 1475 ಸದಸ್ಯ ಸ್ಥಾನಗಳಿಗೆ ಮತದಾನ ನಡೆಯಿತು.

774 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 1475 ಸದಸ್ಯ ಸ್ಥಾನಗಳಿಗೆ ಮೊಳಕಾಲ್ಮುರು ತಾಲ್ಲೂಕಿನ 689, ಚಳ್ಳಕೆರೆ ತಾಲ್ಲೂಕಿನ 1756 ಹಾಗೂ ಹಿರಿಯೂರು ತಾಲ್ಲೂಕಿನ 1372 ಅಭ್ಯರ್ಥಿಗಳು ಸೇರಿದಂತೆ ಒಟ್ಟು 3817 ಅಭ್ಯರ್ಥಿಗಳು ಕಣದಲ್ಲಿದ್ದರು. ಮೊದಲ ಹಂತದ ಚುನಾವಣೆಯಲ್ಲಿ 4522 ಅಭ್ಯರ್ಥಿಗಳು ಹಾಗೂ ಎರಡನೇ ಹಂತದ ಚುನಾವಣೆಯಲ್ಲಿ 3817 ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು ಕಣದಲ್ಲಿದ್ದ 8339 ಅಭ್ಯರ್ಥಿಗಳ ಭವಿಷ್ಯ ಮತ ಎಣಿಕೆಯಿಂದ ನಿರ್ಧಾರವಾಗಿದೆ.

ಸಚಿವರ ಆಪ್ತ ಸಹಾಯಕ ಗೆಲುವು

ಸಚಿವರ ಆಪ್ತ ಸಹಾಯಕ ಗೆಲುವು

ಸಮಾಜ ಕಲ್ಯಾಣ ಸಚಿವ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು ಅವರ ಆಪ್ತ ಸಹಾಯಕ ಪಾಲಯ್ಯ ಅವರು ಕಾಲುವೇಹಳ್ಳಿ ಗ್ರಾಮ ಪಂಚಾಯಿತಿ ಕ್ಷೇತ್ರದಿಂದ 173 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಒಂದು ಮತದ ಅಂತರದಿಂದ ಗೆಲುವು : ಜಿಲ್ಲೆಯ ಕೆಲವು ಕಡೆ ಅಭ್ಯರ್ಥಿಗಳು ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹಿರಿಯೂರು ತಾಲ್ಲೂಕಿನ ಗಾಯಿತ್ರಿಪುರ ಕ್ಷೆತ್ರದಿಂದ ಪಿ. ವೆಂಕಟೇಶ್ ಮತ್ತು ಮುರುಳಿ ಕ್ರಮವಾಗಿ 184 ಮತ ಪಡೆದು ಸಮಬಲ ಸಾಧಿಸಿದ್ದರು. ಅಂತಿಮವಾಗಿ ಪಿ. ವೆಂಕಟೇಶ್ ಅಂಚೆಮತ ಮೂಲಕ ಬಂದ ಒಂದು ಮತ ಪಡೆದು ಗೆಲುವು ಸಾಧಿಸಿದರು.

ಕೂನಿಕೆರೆ ಭಾಗ -2 ಎರಡರಲ್ಲಿ ಈಶ್ವರಪ್ಪ 106 ಮತ ಪಡೆದರೆ ಪ್ರತಿಸ್ಪರ್ಧಿ ಈರಣ್ಣ 107 ಮತ ಪಡೆದು ಒಂದು ಮತ ಅಂತರದಿಂದ ಗೆಲುವು ಪಡೆದಿದ್ದಾರೆ.

ಯಲ್ಲದಕೆರೆ ಗ್ರಾಮ ಪಂಚಾಯಿತಿ ವಸಂತ್ ಕುಮಾರ್ 158 ಮತ ಪಡೆದಿದ್ದು ಪ್ರತಿಸ್ಪರ್ಧಿ ಚಂದ್ರಪ್ಪ 159 ಮತ ಪಡೆಯುವ ಮೂಲಕ ಒಂದು ಮತ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

ಜಯ ತಂದು ಕೊಟ್ಟ ಲಾಟರಿ

ಜಯ ತಂದು ಕೊಟ್ಟ ಲಾಟರಿ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮ ಪಂಚಾಯಿತಿಯ 241 ಮತಗಟ್ಟೆಯಲ್ಲಿ ಅಂಜು ಎಂ. ಮತ್ತು ಬಿ. ಎ. ಕ್ಷಿತಿಜಾ ತಲಾ 375 ಮತಗಳನ್ನು ಪಡೆದು ಸಮಬಲ ಸಾಧಿಸಿದರು. ಲಾಟರಿ ಮೂಲಕ ಆಯ್ಕೆ ಮಾಡಿದಾಗ ಅಂಜು ಎಂ. ಗೆಲುವಿನ ಖುಷಿ ಕಂಡಿದ್ದಾರೆ.

ಕಿಕ್ಕಿರಿದು ತುಂಬಿದ್ದ ಜನಸಮೂಹ : ಪಂಚಾಯಿತಿ ಫಲಿತಾಂಶ ನೋಡಲು ಮತ ಎಣಿಕೆ ಕಾರ್ಯ ನಡೆಯುತ್ತಿದ್ದ ಕೇಂದ್ರಗಳ ಸುತ್ತಮುತ್ತ ಜನರು ಕಿಕ್ಕಿರಿದು ಸೇರಿದ್ದರು. ಮರ, ಮನೆ, ಬಿಲ್ಡಿಂಗ್, ಕಟ್ಟಡ ಹತ್ತಿದ ಜನರು ಫಲಿತಾಂಶಕ್ಕಾಗಿ ಕಾದು ಕುಳಿತಿದ್ದರು. ಗೆದ್ದ ಅಭ್ಯರ್ಥಿಗಳ ಪರ ಸಂಭ್ರಮಿಸಲು ಸಿಹಿತಿಂಡಿ, ಹಾರ ತುರಾಯಿ ಹಿಡಿದು ಜನರು ಕಾಯುತ್ತಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಆಗಾಗ ಅರೆ ಸಹಾಸ ಪಡಬೇಕಾಯಿತು.

ಬಿಗಿ ಪೊಲೀಸ್ ಬಂದೋಬಸ್ತ್

ಬಿಗಿ ಪೊಲೀಸ್ ಬಂದೋಬಸ್ತ್

ಕೋವಿಡ್ ಹಿನ್ನಲೆಯಲ್ಲಿ ಮತ ಎಣಿಕೆ ಕೇಂದ್ರದ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಕೇಂದ್ರದಲ್ಲಿ ಜನಸಂದಣಿಯಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಪಂಚಾಯಿತಿವಾರು ಮತ ಎಣಿಕೆ ಮಾಡಲಾಗಿದ್ದು ಸರದಿಯಲ್ಲಿ ಆಯಾ ಗ್ರಾಮ ಪಂಚಾಯಿತಿ ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳು ಹಾಗೂ ಅವರ ಎಣಿಕೆ ಏಜೆಂಟರನ್ನು ಮಾತ್ರ ಒಳಗೆ ಬಿಡಲಾಗುತ್ತಿತ್ತು. ಕೇಂದ್ರಕ್ಕೆ ಆಗಮಿಸಿದ ಎಲ್ಲರ ವಿವರವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸಂಗ್ರಹಿಸಲಾಯಿತು. ಕೋವಿಡ್ ನಡುವೆಯು ಸುಗಮವಾಗಿ ಮತ ಎಣಿಕೆ ಕಾರ್ಯ ನಡೆಯಿತು.ಪೋಲಿಸ್ ಇಲಾಖೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು.

Recommended Video

ಮಕ್ಕಳನ್ನು ಶಾಲೆಗೆ ಕಳುಹಿಸೋದು ಎಷ್ಟರ ಮಟ್ಟಿಗೆ ಸುರಕ್ಷಿತ | Oneindia Kannada

English summary
People wait for gram panchayat election result till midnight in Chitradurga. Counting of votes began on 8 am on morning and it completed at midnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X