• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಸೇರಿದಂತೆ ನಾಲ್ಕು ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್ 11: ಸುಮಾರು ಎರಡು ವರ್ಷಗಳ ಹಿಂದೆ ಆಸೆ, ಆಮಿಷಗಳಿಗೆ ಒಳಗಾಗಿ ಹೊಸದುರ್ಗ ಶಾಸಕ ತಾಯಿ ಹಾಗೂ ನಾಲ್ಕು ಕುಟುಂಬಗಳು ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಮಾತುಗಳು ಕೇಳಿಬಂದಿದ್ದವು.

ಇದೀಗ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ರವರ ತಾಯಿ ಹಾಗೂ ನಾಲ್ಕು ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿ ಬಂದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹಾಲು ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೇಸರಿ ಶಾಲು ಹಾಕಿ, ತೀರ್ಥ- ಪ್ರಸಾದ, ಮಂಜುನಾಥ ಸ್ವಾಮಿಯ ಫೋಟೋ ನೀಡಿ ಸ್ವಾಗತಿಸುವ ಮೂಲಕ ಹಿಂದೂ ಧರ್ಮಕ್ಕೆ ವಾಪಸ್ ಬರಮಾಡಿಕೊಳ್ಳಲಾಗಿದೆ.

ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ಗ್ರಾಮದ ನಾಲ್ಕು ಕುಟುಂಬಗಳು ಅನ್ಯ ಧರ್ಮಕ್ಕೆ ಮತಾಂತರಗೊಂಡಿದ್ದವು. ಭಾನುವಾರ ಹಿಂದೂ ಧರ್ಮಕ್ಕೆ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ವಾಪಸ್ ಬಂದಿದ್ದಾರೆ.

ಇತ್ತೀಚೆಗೆ ಹೊಸದುರ್ಗ ತಾಲ್ಲೂಕಿನಲ್ಲಿ ಅತಿಹೆಚ್ಚು ಹಿಂದೂ ಧರ್ಮದ ಕುಟುಂಬಗಳು ಅನ್ಯ ಧರ್ಮಕ್ಕೆ ಮತಾಂತರಗೊಂಡಿವೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಇದರ ಬಗ್ಗೆ ಕಳೆದ ತಿಂಗಳು ನಡೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್, "ನನ್ನ ಮತ ಕ್ಷೇತ್ರದಲ್ಲಿ ಹೆಚ್ಚು ಮತಾಂತರ ನಡೆಯುತ್ತಿದೆ. ಅದರಲ್ಲೂ ನನಗೆ ಜನ್ಮ ನೀಡಿದ ತಾಯಿಯೇ ಮತಾಂತರವಾಗಿದ್ದಾರೆ," ಎಂದು ಕ್ರೈಸ್ತ ಮಿಷನರಿಗಳ ವಿರುದ್ಧ ಸಿಡಿದೆದ್ದಿದ್ದರು.

ಅಧಿವೇಶನ ಮುಗಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಹೋರಾಟ ಮುಂದುವರಿಸಿದ್ದರು. ಶಾಸಕರ ಹೋರಾಟಕ್ಕೆ ಹಲವು ಸ್ಥಳೀಯರು ಸಾಥ್ ನೀಡಿದ್ದರು. ಹೀಗಾಗಿ ಭಾನುವಾರ ಹೊಸದುರ್ಗ ತಾಲ್ಲೂಕಿನ ನಾಲ್ಕು ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತರುವಲ್ಲಿ ಗೂಳಿಹಟ್ಟಿ ಶೇಖರ್ ಯಶಸ್ವಿಯಾಗಿದ್ದಾರೆ.

Chitradurga: Four Families Including MLA Goolihatti Shekhars Mother Have Returned To Hindu Religion

ನಾಲ್ಕು ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿ ಬಂದಿರುವುದು ಗಮನಿಸಿದರೆ ಹೊಸದುರ್ಗ ತಾಲ್ಲೂಕಿನಲ್ಲಿ ಮತ್ತಷ್ಟು ಕುಟುಂಬಗಳು ಅನ್ಯ ಧರ್ಮದ ಆಸೆ, ಆಮಿಷಗಳಿಗೆ ಬಲಿಯಾಗಿ ಮತಾಂತರಕ್ಕೆ ಸಿಲುಕಿದ್ದಾರೆ ಎನ್ನಬಹುದು.

ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಗೂಳಿಹಟ್ಟಿ ಶೇಖರ್, "ಹೊಸದುರ್ಗ ತಾಲೂಕಿನಾದ್ಯಂತ ಅನ್ಯ ಧರ್ಮಕ್ಕೆ ಮತಾಂತರಗೊಂಡಿರುವ ಜನರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆ ತರಲು ಘರ್ ವಾಪಸಿ ಕಾರ್ಯಕ್ರಮ ನಡೆಸುತ್ತಿದ್ದೇನೆ ಎಂದು ತಿಳಿಸಿದರು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತಗೊಂಡಿದ್ದ ನನ್ನ ತಾಯಿ ಇದೀಗ ಮರಳಿ ನಮ್ಮ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಈಗ ನಮ್ಮ ಮನೆಯಲ್ಲಿ ನನ್ನಮ್ಮ ಆರಾಮವಾಗಿದ್ದಾರೆ," ಎಂದು ಹೇಳಿದರು.

"ನನ್ನ ಕ್ಷೇತ್ರದಲ್ಲಿ ಸಾಕಷ್ಟು ಕುಟುಂಬಗಳನ್ನು ಅನ್ಯ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಮಿಷನರಿಗಳ ವಿರುದ್ಧ ನಾನು ಸಿಡಿದೇಳಬೇಕಾಯಿತು. ಆದರೆ ಹುಟ್ಟಿನಿಂದಲೇ ಯಾರು ಕ್ರೈಸ್ತ ಧರ್ಮದಲ್ಲಿರುವವರ ವಿಚಾರದಲ್ಲಿ ನನಗೆ ಸೋದರತೆಯ ಭಾವವಿದೆ," ಎಂದು ಹೇಳಿದರು.

"ಈ ನನ್ನ ಹೋರಾಟದಿಂದ ಅವರಿಗೆ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ. ಇನ್ನು ಮತಾಂತರ ವಿಚಾರ ಇಟ್ಟುಕೊಂಡು ನಾನು ಹೊಸದುರ್ಗದಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ," ಎಂದರು.

ಒಟ್ಟಾರೆಯಾಗಿ ವಿಧಾನಸಭಾ ಅಧಿವೇಶನದಲ್ಲಿ ಮತಾಂತರ ಚರ್ಚೆಯಲ್ಲಿ ಸರ್ಕಾರದ ಗಮನ ಸೆಳೆದಿದ್ದ ಗೂಳಿಹಟ್ಟಿ ಶೇಖರ್ ಮೊದಲ ಪ್ರಯತ್ನದಲ್ಲೇ ತನ್ನ ತಾಯಿ ಸೇರಿದಂತೆ ನಾಲ್ಕು ಕುಟುಂಬಗಳನ್ನು ಅನ್ಯ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದ್ದು, ನನ್ನ ಹೋರಾಟ ನಿರಂತರವಾಗಿ ಇರುತ್ತದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟ ನಡೆಸುತ್ತಾರಾ ಕಾದು ನೋಡಬೇಕಿದೆ.

ಇನ್ನು ಹಲವು ಬಿಜೆಪಿ ಶಾಸಕರ ಒತ್ತಾಯದ ಮೇರೆಗೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ಯೋಚಿಸುತ್ತಿದೆ. ಮುಂದಿನ ದಿನಗಳಲ್ಲಿ ಕಾಯ್ದೆ ಜಾರಿಗೆ ಬಂದರೂ ಬರಬಹುದು.

English summary
Hosadurga MLA Goolihatti Shekhar's mother and four families have returned to Hindu Religion from Christianity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X