ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ; ಮಳೆ ನೀರಿನಲ್ಲಿ ಕೊಚ್ಚಿ ಹೋದ ಈರುಳ್ಳಿ ಬೆಳೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 5: ಚಿತ್ರದುರ್ಗ ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ನಿನ್ನೆಯೂ ಸಾಕಷ್ಟು ಮಳೆಯಾಗಿದ್ದು, ಜಮೀನುಗಳಿಗೆ ನೀರು ನುಗ್ಗಿ ಹೆಚ್ಚಿನ ಮಟ್ಟದಲ್ಲಿ ಈರುಳ್ಳಿ ಬೆಳೆ ನಾಶವಾಗಿದೆ.

Recommended Video

ಇಡೀ ರಾತ್ರಿ ಪೊಲೀಸ್ ವಶದಲ್ಲಿದ್ದ Raginiಗೆ ಇಂದು ಎರಡನೇ ದಿನದ ವಿಚಾರಣೆ | Oneindia Kannada

ಚಿತ್ರದುರ್ಗದ ಹಿರಿಯೂರು ತಾಲೂಕಿನ ಕಳ್ಳಿರೊಪ್ಪ ಗ್ರಾಮದಲ್ಲಿ ಮಳೆಯಿಂದಾಗಿ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ. ಹೇಮಣ್ಣ ಎಂಬ ರೈತ ನಾಲ್ಕು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಇದೀಗ ಮಳೆಯಿಂದಾಗಿ ಈರುಳ್ಳಿ ನೀರಿನಲ್ಲಿ ಕೊಚ್ಚಿ ಹೋಗಿದೆ.

 ನಿರಂತರ ಮಳೆ; ಚಿತ್ರದುರ್ಗದಲ್ಲಿ ನೂರಾರು ಎಕರೆ ಈರುಳ್ಳಿಗೆ ತಗುಲಿದ ಕೊಳೆರೋಗ ನಿರಂತರ ಮಳೆ; ಚಿತ್ರದುರ್ಗದಲ್ಲಿ ನೂರಾರು ಎಕರೆ ಈರುಳ್ಳಿಗೆ ತಗುಲಿದ ಕೊಳೆರೋಗ

ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿದ್ದ ಈರುಳ್ಳಿ ನೀರು ಪಾಲಾಗಿದೆ. ಸರ್ಕಾರ ಬೆಳೆ ಪರಿಹಾರ ನೀಡಬೇಕು ಎಂದು ರೈತ ಹೇಮಣ್ಣ ಆಗ್ರಹಿಸಿದ್ದಾರೆ. ಕಳೆದ ತಿಂಗಳು ಜಿಲ್ಲೆಯಲ್ಲಿ ನಿರಂತರ ಮಳೆಯಾಗಿತ್ತು. ಆನಂತರ ಬಿಸಿಲು ಹೆಚ್ಚಾಗಿ ಬೆಳೆಗಳು ಒಣಗುತ್ತಿದ್ದವು. ಇದೀಗ ಮತ್ತೆ ಮಳೆಯಾಗುತ್ತಿದ್ದು, ಈರುಳ್ಳಿ ಬೆಳೆದ ರೈತರಿಗೆ ಸಮಸ್ಯೆಯಾಗಿದೆ.

Chitradurga: Four Acres Onion Crops Destroyed By Rain

ಮೊಳಕಾಲ್ಮೂರು ತಾಲೂಕಿನಾದ್ಯಂತ ವಿವಿಧೆಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ತಳವಾರ ಹಳ್ಳಿ ಬಳಿಯ ಸಿದ್ಲಹಳ್ಳ ತುಂಬಿ ಹರಿಯುತ್ತಿದೆ.

English summary
Four acres of onion crops destroyed by rain in hiriyuru of chitradurga district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X