• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನೂ ಬಳ್ಳಾರಿ ದುರ್ಗಮ್ಮನ ಗುಡಿಗೆ ಬರ್ತಿನಿ, ನೀನು ಬಾ: ಸಚಿವ ಶ್ರೀರಾಮುಲುಗೆ ಸವಾಲು

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಆಗಸ್ಟ್ 02: ನಾನು ಒಬ್ಬನೇ ಬಳ್ಳಾರಿಯ ದುರ್ಗಮ್ಮನ ಗುಡಿಗೆ ಬರ್ತಿನಿ, ನೀನು ಬಂದು ದೇವಸ್ಥಾನದಲ್ಲಿ ಪ್ರಮಾಣ ಮಾಡು ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ತಿಪ್ಪೇಸ್ವಾಮಿ ಸವಾಲು ಹಾಕಿದ್ದಾರೆ.

ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರಕ್ಕೆ ಭದ್ರಾ ಮೇಲ್ದಂಡೆ ಯೋಜನೆ ತರಲು ನಾನು ಹೋರಾಟ ಮಾಡಿದ್ದೇನೆ ಹಾಗೂ ವಿವಿಧ ಸಂಘಟನೆಗಳು, ರೈತಪರ ಹೋರಾಟಗಾರರ ಶ್ರಮದಿಂದ ಯೋಜನೆ ಕ್ಷೇತ್ರಕ್ಕೆ ಬಂದಿದೆ. ಮೊಳಕಾಲ್ಮೂರು ಕ್ಷೇತ್ರಕ್ಕೆ ತುಂಗಭದ್ರಾ ಹಿನ್ನೀರು ತರಲು ನನ್ನ ಹೋರಾಟದ ಶ್ರಮವಿದೆ ಎಂದರು.

ಚಿತ್ರದುರ್ಗದ ಹೊಸಯಳನಾಡು ಸರ್ಕಾರಿ ಶಾಲೆಗೆ ಭೇಷ್ ಎಂದ ಸಚಿವ ಈಶ್ವರಪ್ಪ

ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿದ್ದಾಗ ಬಂದ ಯೋಜನೆಗಳನ್ನು ನಾನು ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತೀಯಾ ಅಂತ ಸಚಿವ ಶ್ರೀರಾಮುಲು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಚೇರಿಗೆ ಒಬ್ಬನಂತೆ ಪಿಎಗಳನ್ನು ಇಟ್ಟು ವಸೂಲಿ ಮಾಡಿಸುತ್ತಿದ್ದೀಯ? ನನ್ನ ಅವಧಿಯಲ್ಲಾದ ಅಭಿವೃದ್ಧಿ ಯೋಜನೆಗಳಿಗೆ ನಿನ್ನ ಹೆಸರು ಹೇಳಿಕೊಳ್ಳುತ್ತೀಯ, ಬಳ್ಳಾರಿ ಹಾಳು ಮಾಡಿ ಬಂದು ಈಗ ಚಿತ್ರದುರ್ಗ ಜಿಲ್ಲೆಯನ್ನು ಹಾಳು ಮಾಡುತ್ತಿದ್ದೀಯ ಎಂದು ಸಚಿವರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

ನಾನು ಮಂಜೂರು ಮಾಡಿಸಿದ್ದ ಅದೆಷ್ಟೋ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಯಾಕೆ ಮಾಡಿಸುತ್ತಿಲ್ಲ? ಹೇಳಪ್ಪಾ ಬೋಯಾ ಶ್ರೀರಾಮುಲು, ವಾಮ ಮಾರ್ಗದಿಂದ‌ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಛೇಡಿಸಿದರು.

ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ವರ್ಗಾವಣೆ

ಇದುವರೆಗೂ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಸರಿಯಾದ ಪರಿಹಾರ ನೀಡಿಲ್ಲ, ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೈಯಲ್ಲಿ ಕೊರೊನಾ ಕಂಟ್ರೋಲ್ ಮಾಡಲು ಆಗುತ್ತಿಲ್ಲ, ಶ್ರೀರಾಮುಲು ಅವರೇ ನಿಮ್ಮ ಬುಡುಬುಡುಕೆ ಆಟ ನಡೆಯುವುದಿಲ್ಲ ಎಂದು ಕಿಡಿಕಾರಿದರು.

English summary
Molakalmuru Former MLA Thippeswamy has challenged Health Minister Sriramulu to do swear at the temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X