ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಡಕೋಟಾ ರಾಜಕಾರಣಿ: ಸಚಿವ ಈಶ್ವರಪ್ಪ ವಾಗ್ದಾಳಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಫೆಬ್ರವರಿ 12: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯ ಡಕೋಟಾ ರಾಜಕಾರಣಿ ಆಗಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜನಪರ ಅನ್ನುವುದಕ್ಕೆ ಲೋಕಸಭಾ ಚುನಾವಣೆಯಲ್ಲಿ ನಾವು 25 ಸ್ಥಾನ ಗೆದ್ದು ತೋರಿಸಿದ್ದೇವೆ. ನಮ್ಮ ಸರ್ಕಾರ ಡಕೋಟಾ ಎಕ್ಸಪ್ರೆಸ್ ಅಲ್ಲ, ಪಾಸ್ಟ್ ಎಕ್ಸಪ್ರೆಸ್ ಎಂದು ಸಿದ್ದರಾಮಯ್ಯಗೆ ಲೇವಡಿ ಮಾಡಿದರು.

"ಆ ಒಂದು ವಿಚಾರಕ್ಕೆ ಡಿಕೆಶಿ ಹಾಗೂ ಸಿದ್ದರಾಮಯ್ಯಗೆ ರಕ್ತಪಾತ ಆಗುತ್ತದೆ''

ನಾವು ಸಾಮಾನ್ಯರ ಪರವಾಗಿ ಕೆಲಸ, ಫಾಸ್ಟ್ ಆಗಿ ಮಾಡುವ ಫಾಸ್ಟ್ ಎಕ್ಸಪ್ರೆಸ್ ಸರ್ಕಾರ ನಮ್ಮದಾಗಿದೆ. ಸಿದ್ದರಾಮಯ್ಯ ಡಕೋಟ ರಾಜಕಾರಣಿ ಆಗಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ತೆಗೆದರು, ಸಿಎಂ ಸ್ಥಾನದಿಂದ ಕೆಳಗಿಳಿದರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಡಕೋಟಾ ರಾಜಕಾರಣಿಗೆ ಒಳ್ಳೆಯ ಕೆಲಸ ಕಾಣಲ್ಲ ಎಂದು ಮಾತಿನ ಉದ್ದಕ್ಕೂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

 Chitradurga: Former CM Siddaramaiah Dakota Politician: Minister KS Eshwarappa Outrage

ಬಿಜೆಪಿಗೆ ಜನಾಶೀರ್ವಾದ ಇದೆ, ಮುಂದೆ ಯಾವುದೇ ಚುನಾವಣೆ ನಡೆದರೂ ನಾವೇ ಗೆಲ್ಲುತ್ತೇವೆ ಎಂದು ಹೇಳಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರವನ್ನು ಡಕೋಟಾ ಎಂದು ಕರೆಯುತ್ತಾರೆ. ನಾನೇ ಸಿಎಂ ಎಂದು ಹೇಳುತ್ತಿದ್ದು, ಈಗ ಹೇಳಿಕೆ ವ್ಯತ್ಯಾಸವಾಗಿದೆ. ಅವರ ಹೇಳಿಕೆಯೇ ಡಕೋಟಾ ಹೇಳಿಕೆಯಾಗಿದೆ ಎಂದು ಕಿಡಿಕಾರಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಾಯಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿಸಲಿ ನೋಡೋಣ ಎಂದು ಸವಾಲು ಹಾಕಿದರು. ಡಕೋಟಾ ಸರ್ಕಾರ ಎಂದು ಇಷ್ಟು ಒಳ್ಳೆಯ ಸರ್ಕಾರವನ್ನು ಕರೆಯುತ್ತಿರುವುದು ರಾಜ್ಯದ ಜನರಿಗೆ ನೋವಾಗಿದೆ. ಯಾರ ಸರ್ಟಿಫಿಕೇಟ್ ಯಾರಿಗೂ ಕೂಡಾ ಬೇಕಿಲ್ಲ. ಹಿಂದುಳಿದ-ದಲಿತ ನಾಯಕ ನಾನೇ ಎಂಬ ಅಹಂಕಾರದಲ್ಲಿ ಇದ್ದಾರೆ ಎಂದರು.

Recommended Video

'ಟಗರು' ವಿರುದ್ಧ 'ಹಳ್ಳಿಹಕ್ಕಿ' ಗುಟುರು..! | Oneindia Kannada

ನಮ್ಮ ಸರ್ಕಾರ ಹಿಂದುಳಿದ ಹಾಗೂ ದಲಿತ ಮಠಗಳಿಗೆ ಕೋಟ್ಯಾಂತರ ಹಣ ನೀಡಿದೆ‌. ಸಿದ್ದರಾಮಯ್ಯ ಏನು ಮಾಡಿದ್ದಾರೆಂದು ಹೇಳಲಿ ಎಂದು ತಿಳಿಸಿದರು. ಜಾತಿಯ ವಿಷ ಬೀಜ ಬಿತ್ತಿ ಕುರುಬರ ಮತ ಪಡೆದು, ಏನು ಮಾಡಿದ್ದಾರೆ. ನೀವು ಮಾಡಿ ಬೆಂಬಲ ಇದೆ ಎಂದು ಸ್ವಾಮೀಜಿಗಳಿಗೆ ಹೇಳಿ ದಿನಾಲೂ ಒಂದು ಹೇಳಿಕೆ ಕೊಟ್ಟರು. ಕುರುಬ ಸಮಾವೇಶ ಆರ್.ಎಸ್.ಎಸ್ ದುಡ್ಡಿನಲ್ಲಿ ಆಯ್ತು ಎಂದಿದ್ದು ರಾಜ್ಯದ ಜನಕ್ಕೆ ತಿಳಿದಿದೆ ಎಂದು ಹೇಳಿದರು.

English summary
Former Chief Minister Siddaramaiah is a now unuseful politician, said Minister KS Eshwarappa said that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X