ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ ಜೆಡಿಎಸ್ ಜಿಲ್ಲಾಧ್ಯಕ್ಷರ ಜೊತೆ ಮಾಜಿ ಸಿಎಂ ಎಚ್ಡಿಕೆ ಚರ್ಚೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ 30: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಚಿತ್ರದುರ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಜಿಲ್ಲೆಯ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಿತ್ರದುರ್ಗ ಜಿಲ್ಲೆಯ ಈರುಳ್ಳಿ ಸಮಸ್ಯೆ, ಮೆಕ್ಕೆಜೋಳ, ಹೂವು, ತರಕಾರಿ ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಿದರು.

ಚಿತ್ರದುರ್ಗದಲ್ಲೂ ಕಂಡುಬಂದ ಮಿಡತೆಗಳು; ರೈತರಲ್ಲಿ ಆತಂಕಚಿತ್ರದುರ್ಗದಲ್ಲೂ ಕಂಡುಬಂದ ಮಿಡತೆಗಳು; ರೈತರಲ್ಲಿ ಆತಂಕ

ಲಾಕ್ ಡೌನ್ ಸಮಯಯಲ್ಲಿ ಸರ್ಕಾರದಿಂದ ರೈತರಿಗೆ ಪರಿಹಾರ ಸಿಕ್ಕಿದಿಯಾ ಹೇಗೆ ಎಂದು ಕೇಳಿದರು. ಇದಕ್ಕೆ ‌ಉತ್ತರಿಸಿದ ಡಿ. ಯಶೋಧರ ಅವರು, ""ಜಿಲ್ಲೆಯಲ್ಲಿ ಈರುಳ್ಳಿ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿದೆ. ಈರುಳ್ಳಿ ಬೆಳೆಗಾರರು ಸೂಕ್ತ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಶೇಂಗಾ ಬಿತ್ತನೆ ಬೀಜ ಸಮಸ್ಯೆ ಇದೆ. ಇದರ ಬಗ್ಗೆ ಗಮನ ಹರಿಸುವಂತೆ'' ಕೇಳಿದರು.

Former CM HD Kumaraswamy Talks With Chitradurga JDS District President

ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ""ಈಗಾಗಲೇ ತೋಟಗಾರಿಕೆ ಉಪನಿರ್ದೇಶಕಿ ಡಾ.ಸವಿತಾ ಅವರ ಜೊತೆ ಮಾತನಾಡಿದ್ದು, ಸಮಸ್ಯೆ ಬಗೆಹರಿಸುವಂತೆ ಹೇಳಿದ್ದೆನೆಂದು ಹೇಳಿದರು. ಹಿರಿಯೂರು ತಾಲ್ಲೂಕಿನ ಸಮುದ್ರದ ಹಳ್ಳಿಯಿಂದ ಒಬ್ಬರು ರೈತ ಮಹಿಳೆ ಪೋನ್ ಮಾಡಿ, 50 ಲಕ್ಷ ರುಪಾಯಿ ಈರುಳ್ಳಿ ಕೊಳೆತಿದೆ ಅಂತ ಕಾಲ್ ಮಾಡಿದ್ದರು. ಇದರ ಸಲುವಾಗಿ ತೋಟಗಾರಿಕೆ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೆ, ಇದು ಏನಾಯಿತು'' ಎಂದು ಮಾಹಿತಿ ಪಡೆದುಕೊಂಡರು.

ರಾಜ್ಯ ಮತ್ತು ಕೇಂದ್ರ ಸರ್ಕಾರ ಇದುವರಿಗೂ ಪರಿಹಾರ ನೀಡಿಲ್ಲ, ಎಲ್ಲ ಬೋಗಸ್ ಎಂದು ಡಿ. ಯಶೋಧರ ಹೇಳಿದರು. ಜಿಲ್ಲೆಯಲ್ಲಿ ಲಾಕ್ ಡೌನ್ ಆಗಿದ್ದರಿಂದ ನಮ್ಮ ಈರುಳ್ಳಿ, ಹೂ ಬೆಳೆಗಾರರು, ತರಕಾರಿ ಬೆಳೆಗಾರರು, ಇತರೆ ಬೆಳೆಗಾರರಿಗೆ ಪರಿಹಾರ ನೀಡಿಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹೇಳಿದರು.

ಸರ್ಕಾರದ ಬಗ್ಗೆ ಅಸಮಾಧಾನ ಹೊರಹಾಕಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿಸರ್ಕಾರದ ಬಗ್ಗೆ ಅಸಮಾಧಾನ ಹೊರಹಾಕಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಲಾಕ್ ಡೌನ್ ಸಮಸ್ಯೆ ಆಗಿರುವುದರಿಂದ ಹಳ್ಳಿಗಳ ಕಡೆ ಹೋಗಿ ರೈತರನ್ನು ಭೇಟಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುವಂತೆ ಜಿಲ್ಲಾಧ್ಯಕ್ಷರಿಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸೂಚನೆ ನೀಡಿದರು.

English summary
Former CM HD Kumaraswamy spoke to Chitradurga JDS district president D Yashodhar through a video conference and discussed the Problems of the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X