ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಟೆ ನಾಡು ಚಿತ್ರದುರ್ಗದಲ್ಲಿ ಕೊರೊನಾ ವೈರಸ್ ಗೆ ಮೊದಲ ಸಾವು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 12: ಕೋಟೆನಾಡು ಚಿತ್ರದುರ್ಗದಲ್ಲಿ ಕೊರೊನಾ ವೈರಸ್ ಗೆ ಮೊದಲ ಸಾವಾಗಿದ್ದು, ಹಿರಿಯೂರು ನಗರದ 75 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಹಿರಿಯೂರು ನಗರದ ಬ್ಯಾಂಗಲ್ ಸ್ಟೋರ್ ಮಾಲೀಕನ ಪ್ರಾಥಮಿಕ ಸಂಪರ್ಕದಲ್ಲಿದ್ದ 75 ವರ್ಷದ ತಾಯಿ ಮತ್ತು ಮಗನಿಗೆ ಇಂದು ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು.

75 ವರ್ಷದ ವೃದ್ಧೆ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶನಿವಾರ ವೃದ್ಧೆಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು, ವೃದ್ಧೆಯನ್ನು ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಸಂಜೆ ವೃದ್ಧೆ ಮೃತಪಟ್ಟಿರುವುದು ತಿಳಿದು ಬಂದಿದೆ.

ಚಿತ್ರದುರ್ಗದಲ್ಲಿ ಶತಕ ದಾಟಿದ ಕೊರೊನಾ ಪ್ರಕರಣ; ಇಲ್ಲಿನ ಸ್ಥಿತಿಗತಿ ಹೇಗಿದೆ?ಚಿತ್ರದುರ್ಗದಲ್ಲಿ ಶತಕ ದಾಟಿದ ಕೊರೊನಾ ಪ್ರಕರಣ; ಇಲ್ಲಿನ ಸ್ಥಿತಿಗತಿ ಹೇಗಿದೆ?

ಕೋಟೆನಾಡು ಚಿತ್ರದುರ್ಗದಲ್ಲಿ ಶನಿವಾರ 5 ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿದ್ದು, ಕೊರೊನೊ ವೈರಸ್ ಸೋಂಕಿತರ ಸಂಖ್ಯೆ 103 ಕ್ಕೆ ಏರಿಕೆಯಾಗಿದೆ. ಹಿರಿಯೂರಿನಲ್ಲಿ 4, ಚಿತ್ರದುರ್ಗದಲ್ಲಿ 1 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

First Death Reported For Coronavirus In Chitradurga District

ಹಿರಿಯೂರಿನ 56 ವರ್ಷದ ಪುರುಷ, 44 ವರ್ಷದ ಮಹಿಳೆ, 54 ವರ್ಷದ ಮಹಿಳೆ, 22 ವರ್ಷದ ಯುವಕ ಹಾಗೂ ಚಿತ್ರದುರ್ಗದ 39 ವರ್ಷದ ಪುರುಷನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದುವರೆಗೂ ಜಿಲ್ಲೆಯ ಒಟ್ಟು 103 ದೃಢಪಟ್ಟ ಪ್ರಕರಣಗಳಲ್ಲಿ 82 ಸೋಂಕಿತರು ಗುಣಮುಖರಾಗಿದ್ದಾರೆ.

ಸ್ವಯಂ ಕ್ವಾರಂಟೈನ್ ಗೆ ಒಳಗಾದ ಚಿತ್ರದುರ್ಗದ ಯೋಧಸ್ವಯಂ ಕ್ವಾರಂಟೈನ್ ಗೆ ಒಳಗಾದ ಚಿತ್ರದುರ್ಗದ ಯೋಧ

ಇನ್ನು ಜಿಲ್ಲೆಯಲ್ಲಿ ಉಳಿದ 21 ಸಕ್ರಿಯ ಪ್ರಕರಣಗಳು ಬಾಕಿ ಇದ್ದು, ಇದೀಗ ಹೊಸದಾಗಿ ಕೊರೊನಾ ಪಾಸಿಟಿವ್ ಪತ್ತೆಯಾದ 75 ವರ್ಷದ ವೃದ್ಧೆ ಸಾವನ್ನಾಪ್ಪಿದ್ದಾರೆ ಎನ್ನಲಾಗಿದೆ.

English summary
75-year-old woman died For Coronavirus Infection in Hiriyur city, Chitradurga District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X