ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ.27 ನನ್ನ ಅಂತಿಮ ದಿನ; ಚಿತ್ರದುರ್ಗದ ಸ್ಪೈಡರ್ ಮ್ಯಾನ್ ಮಾತಲ್ಲೇನಿದೆ?

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

Recommended Video

ಚಿತ್ರದುರ್ಗದ ಸ್ಪೈಡರ್ ಮ್ಯಾನ್ ಏರುತ್ತಾರಂತೆ ಅಮೆರಿಕಾದ ಏಂಜಲ್ ಫಾಲ್ಸ್ | Oneindia kannada

ಚಿತ್ರದುರ್ಗ, ನವೆಂಬರ್ 21: ಜ್ಯೋತಿರಾಜ್ ಅಥವಾ ಮಂಕಿಮ್ಯಾನ್ ಎಂದರೆ ಯಾರಿಗೆ ಗೊತ್ತಿಲ್ಲ? ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆಯನ್ನು ಪಟಪಟನೆ ಹತ್ತಿ ಸಾಹಸ ಮೆರೆಯುವ ಜ್ಯೋತಿರಾಜ್ "ಚಿತ್ರದುರ್ಗದ ಸ್ಪೈಡರ್ ಮ್ಯಾನ್" ಎಂದೇ ಕನ್ನಡಿಗರಿಗೆ ಚಿರಪರಿಚಿತ. ಈ ಸಾಹಸಿ ಜ್ಯೋತಿರಾಜ್ ಈಗ ಹೊಸ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.

ಅಪಾಯಕಾರಿ ಬಂಡೆಗಳನ್ನು ಸುಲಭವಾಗಿ ಏರಿ ರಾಜ್ಯದ ಜನರ ಮನೆಮಾತಾಗಿರುವ ಕೋತಿರಾಜ್, 2020 ಫೆ.27 ನನ್ನ ಕೊನೆಯ ದಿನವಾಗಲಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಹಿಂದಿನ ಅರ್ಥವೇನು? ಇಲ್ಲಿದೆ ಅದರ ವಿವರ...

 ಫೆಬ್ರುವರಿ 27 ಕೊನೆಯ ದಿನ ಎಂದಿದ್ದೇಕೆ?

ಫೆಬ್ರುವರಿ 27 ಕೊನೆಯ ದಿನ ಎಂದಿದ್ದೇಕೆ?

ಇತ್ತಿಚೀಗಷ್ಟೇ ಬೆಂಗಳೂರು ಹೊರವಲಯದ ನೆಲಮಂಗಲದ ಖಾಸಗಿ ಶಾಲೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜ್ಯೋತಿರಾಜ್, ಮುಂದಿನ ವರ್ಷ ಫೆಬ್ರುವರಿ 26-27 ನನ್ನ ಕೊನೆಯ ದಿನ ಎಂದು ಹೇಳುವ ಮೂಲಕ ಭಾವುಕರಾಗಿದ್ದಾರೆ. ನನ್ನ ಮುಂದಿನ ಸಾಹಸಕ್ಕೆ ಈ ದಿನವನ್ನು ಮೀಸಲಿಟ್ಟಿದ್ದು, ಅದು ಬಹುಶಃ ನನ್ನ ಕೊನೆಯ ದಿನವೂ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಮೃತದೇಹ ಹುಡುಕಲು ಜೋಗ ಜಲಪಾತಕ್ಕಿಳಿದ 'ಕೋತಿರಾಮ' ನಾಪತ್ತೆಮೃತದೇಹ ಹುಡುಕಲು ಜೋಗ ಜಲಪಾತಕ್ಕಿಳಿದ 'ಕೋತಿರಾಮ' ನಾಪತ್ತೆ

 ಚಿತ್ರದುರ್ಗದ ಅಭಿವೃದ್ಧಿಗೆ ಈ ಸಾಹಸ

ಚಿತ್ರದುರ್ಗದ ಅಭಿವೃದ್ಧಿಗೆ ಈ ಸಾಹಸ

ಚಿತ್ರದುರ್ಗದ ಕೋಟೆ ಐತಿಹಾಸಿಕ ಸ್ಥಳ. ವಿಶ್ವ ಪರಂಪರಿಕ ಪಟ್ಟಿಗೆ ಸೇರುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ಆದರೆ ಚಿತ್ರದುರ್ಗದ ಕೋಟೆ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಾನು ಈ ದುಸ್ಸಾಹಸಕ್ಕೆ ಕೈ ಹಾಕಿದ್ದೇನೆ.ಇದು ನನ್ನ ಪ್ರಾಣಕ್ಕೆ ಕುತ್ತು ತರುವಂತಹ ಸಾಹಸ. ಆದರೆ ಇದನ್ನು ಮಾಡುತ್ತಿರುವುದು ಚಿತ್ರದುರ್ಗ ಕೋಟೆಯ ಅಭಿವೃದ್ಧಿಗೆ ಹಣ ಸಂಗ್ರಹಿಸಲು" ಎಂದು ಹೇಳಿಕೊಂಡಿದ್ದಾರೆ.

 ಫೆಬ್ರುವರಿ 27ರಂದು ಏನು ಮಾಡಲಿದ್ದಾರೆ?

ಫೆಬ್ರುವರಿ 27ರಂದು ಏನು ಮಾಡಲಿದ್ದಾರೆ?

"ನಾನು 2020ರ ಫೆಬ್ರವರಿ 26 ಮತ್ತು 27 ರಂದು 3,221 ಅಡಿ, ವಿಶ್ವದ ಅತಿ ಎತ್ತರದಲ್ಲಿರುವ ಅಮೆರಿಕದ ಏಂಜಲ್ ಫಾಲ್ಸ್ ಏರುತ್ತಿದ್ದು, ಅದರಲ್ಲಿ ಬರುವ ಹಣವನ್ನು ಕೋಟೆಯ ಅಭಿವೃದ್ಧಿಗೆ ಹಾಗೂ ನನ್ನ ಶಿಷ್ಯರ ಜೀವನಕ್ಕಾಗಿ ಬಳಕೆ ಮಾಡುತ್ತೇನೆ" ಎಂದು ಹೇಳಿದ್ದಾರೆ. ಅಂದೇ ನನ್ನ ಬದುಕಿನ ಕೊನೆಯ ದಿನವಾಗಬಹುದು ಎಂದೂ ಸಹ ಹೇಳಿದ್ದಾರೆ. ಒಂದು ವೇಳೆ ನಾನು ಸತ್ತರೆ, ಕನ್ನಡಿಗರೆಲ್ಲ ಒಂದು ಹಿಡಿ ಮಣ್ಣು ಹಾಕಿ, ನಾನು ಕನ್ನಡಿಗರ ಪ್ರೀತಿ ಬಿಟ್ಟರೆ ಬೇರೆ ಏನನ್ನೂ ಸಂಪಾದಿಸಿಲ್ಲ. ಹಾಗಾಗಿ ಕನ್ನಡ ನಾಡಿಗಾಗಿ ನನ್ನ ಸಾಧನೆ ಮಾಡಲು ಸಿದ್ಧನಾಗಿದ್ದೇನೆ" ಎಂದಿದ್ದಾರೆ.

ಜೋಗದ ಗುಂಡಿಯಲ್ಲಿ ಜಾರಿಬಿದ್ದ ಚಿತ್ರದುರ್ಗ ಕೋತಿರಾಜಜೋಗದ ಗುಂಡಿಯಲ್ಲಿ ಜಾರಿಬಿದ್ದ ಚಿತ್ರದುರ್ಗ ಕೋತಿರಾಜ

 ಇನ್ನಾದರೂ ಅಭಿವೃದ್ಧಿಗೆ ಮುಂದಾಗುತ್ತದಾ ಸರ್ಕಾರ?

ಇನ್ನಾದರೂ ಅಭಿವೃದ್ಧಿಗೆ ಮುಂದಾಗುತ್ತದಾ ಸರ್ಕಾರ?

ಈ ಸಾಹಸಕ್ಕೆ ಪ್ರತಿಯೊಬ್ಬರೂ ಆಶೀರ್ವದಿಸಿ ಎಂದು ಭಾವುಕರಾಗಿ ಕೋತಿರಾಜ್ ತಮ್ಮ ಮನದಾಳ ಮಾತನ್ನು ಹಂಚಿಕೊಂಡಿದ್ದಾರೆ. ನೆಲಮಂಗಲದ ಖಾಸಗಿ ಶಾಲೆಯ ಪುಟಾಣಿ ಮಕ್ಕಳೊಂದಿಗೆ ಭಾವುಕರಾಗಿ ತಮ್ಮ ಅನುಭವವನ್ನು ಜ್ಯೋತಿರಾಜ್ ಹಂಚಿಕೊಂಡಿದ್ದಾರೆ. ಇನ್ನಾದರೂ ಜ್ಯೋತಿರಾಜ್ ನ ಈ ಮಾತುಗಳನ್ನು ಕೇಳಿ ಕೋಟೆಯ ಅಭಿವೃದ್ಧಿಗೆ ಸರ್ಕಾರ ಮುಂದಾಗುತ್ತದಾ ಕಾದು ನೋಡಬೇಕಿದೆ.

English summary
Jyothiraj is known as the "Spider-Man of Chitradurga". This adventurer Jyotiraj is now decided to climb very dangerous angel falls in america,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X