ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಳಲ್ಕೆರೆಯಲ್ಲಿ ಕಾಡಾನೆ ದಾಳಿಗೆ ರೈತ ಬಲಿ

|
Google Oneindia Kannada News

ಚಿತ್ರದುರ್ಗ, ಡಿಸೆಂಬರ್ 16: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಸಮೀಪ ಕಾಡಾನೆ ದಾಳಿಯಿಂದ ರೈತನೊಬ್ಬ ಮೃತ ಪಟ್ಟಿರುವ ಘಟನೆ ಒಂದು ದಿನ ತಡವಾಗಿ ಶನಿವಾರ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದೆ. ದಿನದಿಂದ ದಿನಕ್ಕೆ ಆನೆಗಳ ಹಾವಳಿ ಹೆಚ್ಚಾಗುತ್ತಿದೆ. ಗ್ರಾಮಸ್ಥರು ಮನೆಯಿಂದ ಹೊರಗೆ ಹೋಗಲು ಹಿಂಜರಿಯುವಂತಾಗಿದೆ.

ಹೊನ್ನಾಳಿಯಲ್ಲಿ ಕಾಡಾನೆ ದಾಳಿ, ಮೂವರಿಗೆ ಗಂಭೀರ ಗಾಯಹೊನ್ನಾಳಿಯಲ್ಲಿ ಕಾಡಾನೆ ದಾಳಿ, ಮೂವರಿಗೆ ಗಂಭೀರ ಗಾಯ

ಶುಕ್ರವಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟಿ ಗ್ರಾಮದ ಬಳಿ ಕಾಡಾನೆ ದಾಳಿ ನಡೆಸಿತ್ತು. ಆದರೆ ಈ ವ್ಯಕ್ತಿಯ ಮೇಲೆ ದಾಳಿ ನಡೆಸಿರುವುದು ಗೊತ್ತಾಗಿರಲಿಲ್ಲ. ಆದರೆ ಶನಿವಾರ ಗಾಳೆಪ್ಪನ ಎಂಬಾತನ ಶವ ಅತನ ಜಮೀನಿನಲ್ಲಿ ಪತ್ತೆಯಾಗಿದೆ.

Farmer dies in Elephant attack

ಹೊಳಲ್ಕೆರೆಯ ತಾಳಿಕಟ್ಟೆ ಗ್ರಾಮದಲ್ಲಿ ಶುಕ್ರವಾರ (ಡಿ.15)ರಂದು ರೈತ ಗಾಳೆಪ್ಪ(45) ಅವರು ಕಾಡಾನೆ ದಾಳಿಯಿಂದ ಮೃತಪಟ್ಟಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಕೆಲಸ ಮಾಡುವಾಗ ಗಾಳೆಪ್ಪ ಅವರನ್ನು ಕಾಡಾನೆಗಳು ತುಳಿದಿವೆ.

ಚಿತ್ರದುರ್ಗದಲ್ಲಿ ಆನೆ ದಾಳಿ : 6 ಮಂದಿಗೆ ಗಂಭೀರ ಗಾಯಚಿತ್ರದುರ್ಗದಲ್ಲಿ ಆನೆ ದಾಳಿ : 6 ಮಂದಿಗೆ ಗಂಭೀರ ಗಾಯ

ಶನಿವಾರ ಗಾಳೆಪ್ಪ ಅವರು ಶವವಾಗಿ ಪತ್ತೆಯಾಗಿದ್ದಾರೆ. ಶುಕ್ರವಾರ ಕಡಾನೆ ದಾಲಿಯಿಂದಾಗಿ ತಾಳಿಕಟ್ಟೆ,ದುಮ್ಮಿ, ಬೆಟ್ಟ ಕಡೂರರು ಗ್ರಾಮದಲ್ಲಿ ಏಳು ಜನ ಗಾಯಗೊಂಡಿದ್ದರು. ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೊಳಲ್ಕೆರೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

English summary
A day after incident came to light that a 45 years old farmer was died while wild elephant attacks on him yesterday in Thalikatti village of Holalkere taluk in Chitradurga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X