• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೇರುಮಲ್ಲೇಶ್ವರ ರಥೋತ್ಸವದಲ್ಲಿ ಬಾಳೆ ಹಣ್ಣು ಹಾಗೂ ಹತ್ತು ರುಪಾಯಿ ನೋಟಿನ ಮೇಲೆ 'ಜೈ ಆರ್‌ಸಿಬಿ'

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಫೆಬ್ರವರಿ ೨೭: ಭಕ್ತನೊಬ್ಬನು ಬಾಳೆ ಹಣ್ಣು ಹಾಗೂ ಹತ್ತು ರೂಪಾಯಿ ನೋಟಿನ ಮೇಲೆ "ಜೈ ಆರ್‌ಸಿಬಿ' ಎಂದು ಬರೆದು ದೇವರಿಗೆ ಅರ್ಪಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಶುಕ್ರವಾರ ಬಹಳ ಅದ್ಧೂರಿಯಾಗಿ ಜರುಗಿತು. ಭಕ್ತರು ಬಾಳೆ ಹಣ್ಣುಗಳನ್ನು ರಥಕ್ಕೆ ಎಸೆಯುವ ಮೂಲಕ ತನ್ನ ಹರಕೆ ತೀರಿಸಿದರು.

ಚಿತ್ರದುರ್ಗ; ವಿಜೃಂಭಣೆಯಿಂದ ನಡೆದ ತೇರುಮಲ್ಲೇಶ್ವರ ರಥೋತ್ಸವ

ಆದರೆ ಇಲ್ಲೊಬ್ಬ ಭಕ್ತ ಈ ಬಾರಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಟಿ-20 ಮ್ಯಾಚ್ ನಲ್ಲಿ ಕಪ್ ಗೆಲ್ಲಲು ಆರ್‌ಸಿಬಿ ಅಭಿಮಾನಿ ವಿಶಿಷ್ಟವಾಗಿ ಹರಕೆ ಹೊತ್ತಿದ್ದಾನೆ. ಬಾಳೆ ಹಣ್ಣು ಹಾಗೂ ಹತ್ತು ರೂಪಾಯಿ ನೋಟಿನ ಮೇಲೆ "ಜೈ ಆರ್‌ಸಿಬಿ' ಎಂದು ಬರೆದು ದೇವರಿಗೆ ಅರ್ಪಿಸಿರುವ ಘಟನೆ ನಡೆದಿದೆ.

ಶ್ರೀ ತೇರುಮಲ್ಲೇಶ್ವರ ರಥೋತ್ಸವದ ವೇಳೆ ಅಟ್ಟಿಕಾ ಗೋಲ್ಡ್ ಪ್ಯಾಲೇಸ್ ಬೊಮ್ಮನಹಳ್ಳಿ ಬಾಬು ಅವರು ಹರಕೆ ತೀರಿಸಲು ಹೆಲಿಕ್ಯಾಪ್ಟರ್ ಮೂಲಕ ಹೂ ಸುರಿಮಳೆ ಸುರಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಸರ್ಕಾರ ಅನುಮತಿ ನೀಡಿರಲಿಲ್ಲ. ಹೆಲಿಕಾಪ್ಟರ್ ಮೂಲಕ ಬಂದ ಬೊಮ್ಮನಹಳ್ಳಿ ಬಾಬು ಎರಡು ಬಾರಿ ಹಿರಿಯೂರು ನಗರವನ್ನು ಸುತ್ತುವರಿದು ನಂತರ ಹೊರವಲಯದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಯಿತು.

   ಅಂಬಾನಿ ನಿವಾಸದ ಎದುರು ಪತ್ತೆಯಾದ ವಾಹನದಲ್ಲಿ ಸ್ಫೋಟಕದ ಜೊತೆ ಇತ್ತು 'ಎಚ್ಚರಿಕೆ ಪತ್ರ'! | Oneindia Kannada

   ಸ್ವಾಮಿಯ ಮುಕ್ತಿ ಬಾವುಟವನ್ನು ಹರಾಜಿನಲ್ಲಿ 5 ಲಕ್ಷಕ್ಕೆ ಬೊಮ್ಮನಹಳ್ಳಿ ಬಾಬು ಪಡೆದುಕೊಂಡರು. ರಾಜ್ಯದ ವಿವಿಧ ಕಡೆ ನಡೆಯುವ ರಥೋತ್ಸವದ ಜಾತ್ರೆಗಳಲ್ಲಿ ಭಕ್ತರು ವಿಶಿಷ್ಟವಾಗಿ ಹರಕೆ ತಿರಿಸುತ್ತಿರುವುದು ಆಗಾಗ ಕಾಣಬಹುದಾಗಿದೆ. ಜಾತ್ರೆಯ ರಥೋತ್ಸವದಲ್ಲಿ ಬಾಳೆ ಹಣ್ಣು ಹಾಗೂ ಹತ್ತು ರೂಪಾಯಿ ನೋಟಿನ ಮೇಲೆ "ಜೈ ಆರ್‌ಸಿಬಿ' ಎಂದು ಬರೆದು ದೇವರಿಗೆ ಅರ್ಪಿಸಿರುವುದು ಜಾತ್ರೆಯ ವಿಶೇಷವಾಗಿತ್ತು ಎನ್ನಬಹುದು.

   English summary
   An incident occurred in Chitradurga district, Hiriyuru where a devotee dedicate to a Hiriyuru Therumalleshwara Rathotsava who wrote "Jai RCB" on a banana and a 10 rupee note.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X