ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ: ಆಶ್ರಯ ನಿವೇಶನ ನೀಡುವಲ್ಲಿ ವಂಚನೆ ಆರೋಪ; ಕುಟುಂಬಸ್ಥರ ಧರಣಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಆಗಸ್ಟ್‌ 03: ಆಶ್ರಯ ನಿವೇಶನ ನೀಡುವಲ್ಲಿ ವಂಚನೆ ಮಾಡಲಾಗಿದೆಯೆಂದು ಅರ್ಹ ಫಲಾನುಭವಿ ಕುಟುಂಬವೊಂದು ಗ್ರಾಮ ಪಂಚಾಯಿತಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

Recommended Video

ರಾಮಮಂದಿರ ನಿರ್ಮಾಣಕ್ಕೆ ಮೋದಿ ಅಡಿಗಲ್ಲು | Oneindia Kannada

ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನಾ ಧರಣಿಯಲ್ಲಿ ಹಿರಿಯರು, ಮಕ್ಕಳು ಸೇರಿಕೊಂಡು ಮಳೆ ಗಾಳಿ ಲೆಕ್ಕಿಸದೆ ನ್ಯಾಯಕ್ಕಾಗಿ ಪ್ರತಿಭಟನೆ ಕೈಗೊಂಡಿದ್ದಾರೆ. ಪಂಚಾಯಿತಿ ಪಿಡಿಓ ಲಂಚ ಪಡೆದುಕೊಂಡು ಚಂದ್ರಮ್ಮ ಅವರ ನಿವೇಶನವನ್ನು ರತ್ನಮ್ಮ ಎಂಬುವವರಿಗೆ ಖಾತೆ ಮಾಡಿದ್ದಾರೆಂದು ಪಂಚಾಯಿತಿ ಪಿಡಿಓ ವಿರುದ್ಧ ಗಂಭೀರ ಆರೋಪವನ್ನು ಕುಟುಂಬದವರು ಮಾಡಿದ್ದಾರೆ. ಕಳೆದ ಐದು ದಿನಗಳಿಂದ ಗ್ರಾ.ಪಂ ಕಚೇರಿ ಆವರಣದಲ್ಲಿ ಚೆನ್ನಮ್ಮ ವಾಸ್ತವ್ಯ ಹೂಡಿದ್ದಾರೆ.

ಗ್ರಾ.ಪಂ ಪಿಡಿಒ ವಿರುದ್ಧ ಹಣಕಾಸು ಯೋಜನೆ ಅನುದಾನ ದುರುಪಯೋಗ ಆರೋಪಗ್ರಾ.ಪಂ ಪಿಡಿಒ ವಿರುದ್ಧ ಹಣಕಾಸು ಯೋಜನೆ ಅನುದಾನ ದುರುಪಯೋಗ ಆರೋಪ

Protest Infront Of Gram Panchayat Office Chitradurga Against Fraud In Ashraya Home

ಪ್ರತಿಭಟನಾಕಾರರು ಗ್ರಾಮ ಪಂಚಾಯ್ತಿ ಕಚೇರಿ ಮುಂಭಾಗ ಅಡುಗೆ ಮಾಡಿಕೊಂಡೇ ಪ್ರತಿಭಟನೆ ನಡೆಸುತ್ತಿದ್ದಾರೆ. ಕುಟುಂಬಸ್ಥರು ಅಹೋರಾತ್ರಿ ಮುಷ್ಕರ ನಡೆಸುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ.

English summary
A family protesting infront of gram panchayat office against fraud in providing ashraya home,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X