ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2018ರಲ್ಲಿ ಇಸ್ರೋದಿಂದ ತಿಂಗಳಿಗೊಂದು ಉಪಗ್ರಹ ಉಡಾವಣೆ: ಕಿರಣ್ ಕುಮಾರ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜನವರಿ 24: ಈ ವರ್ಷದ ಮಾರ್ಚ್, ಏಪ್ರಿಲ್ ನಲ್ಲಿ ಚಂದ್ರಯಾನ-2 ಸೇರಿದಂತೆ 2018ರಲ್ಲಿ ಪ್ರತಿ ತಿಂಗಳಿಗೊಂದು ಉಪಗ್ರಹ ಉಡಾವಣೆ ಯೋಜನೆ ಇದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಚಿತ್ರದುರ್ಗದ ಭರಮಸಾಗರದ ಡಿ.ವಿ.ಎಸ್ ಶಾಲೆಯಲ್ಲಿ ಹೇಳಿದರು.

ಜಿಎಸ್ಎಲ್ ವಿ ಮಾರ್ಕ್ 2, ಮಾರ್ಕ್ 3, ಜಿ ಸ್ಯಾಟ್ 11 ಸೇರಿದಂತೆ ಚಂದ್ರಯಾನ-2 ಉಡಾವಣೆಗೆ ಸಿದ್ಧತೆಯಾಗಿದೆ. ಚಿತ್ರದುರ್ಗದ ಚಳ್ಳಕೆರೆ ಇಸ್ರೋ ಕೇಂದ್ರದಲ್ಲಿ ಚಂದ್ರಯಾನ-2ರ ಪರೀಕ್ಷಾರ್ಥ ಕೆಲಸಗಳು ನಡೆಯುತ್ತಿದ್ದು, ತಾಂತ್ರಿಕ ದೋಷಗಳು ಸರಿಪಡಿಸಿ ಮತ್ತೆ ಮತ್ತೆ ಪರಿಕ್ಷೆಗಳನ್ನು ನಡೆಸಲಾಗುತ್ತಿದೆ ಎಂದರು.

ಶತಕ ಬಾರಿಸಿದ ಇಸ್ರೋ, 100ನೇ ಉಪಗ್ರಹ ಯಶಸ್ವೀ ಉಡಾವಣೆಶತಕ ಬಾರಿಸಿದ ಇಸ್ರೋ, 100ನೇ ಉಪಗ್ರಹ ಯಶಸ್ವೀ ಉಡಾವಣೆ

ಮೊದಲ ಪ್ರಯತ್ನವಾಗಿ ಈ ಬಾರಿ ಚಂದ್ರನ ಅಂಗಳಕ್ಕೆ ಅಪ್ಪಳಿಸುವುದನ್ನು ತಡೆದು ನಿಧಾನಗತಿಯಲ್ಲಿ ಇಳಿಸುವ ಲ್ಯಾಂಡರ್, ಆರ್ಬಿಟರ್, ರೋವರ್ ಉಪಕರಣಗಳನ್ನು ಬಳಸಲಾಗುತ್ತಿದೆ. ಮಂಗಳ ಗ್ರಹದ ಕಕ್ಷೆಗೆ ಕಳುಹಿಸಿದ ಉಪಗ್ರಹ ಉತ್ತಮ ಕೆಲಸ ಮಾಡುತ್ತಿದ್ದು, ಎರಡು ವರ್ಷದಲ್ಲಿ ಸಂಶೋಧನೆಗೆ ಸಹಕಾರಿಯಾದ ಮಾಹಿತಿ ಕೊಡುತ್ತಿದೆ ಎಂದು ಹೇಳಿದರು.

Every month satellite will launch by ISRO in 2018: Kirankumar

ಮೂರನೇ ವರ್ಷದ ಮಾಹಿತಿಯೂ ಶೀಘ್ರವೇ ಸಿಗಲಿದೆ ಎಂದು ಡಿವಿಎಸ್ ಶಾಲಾ ಮಕ್ಕಳೊಂದಿಗೆ ಸಂವಾದದಲ್ಲಿ ಕಿರಣ್ ಕುಮಾರ್ ಹೇಳಿದರು.

English summary
Every month satellite will launch by ISRO in 2018, said by ISRO former chairman Kirankumar in a school function at Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X