ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದಲ್ಲಿದೆ ಲೈಂಗಿಕ ಅಲ್ಪಸಂಖ್ಯಾತರ ಡಾಬಾ

|
Google Oneindia Kannada News

hotel
ಚಿತ್ರದುರ್ಗ, ಡಿ. 16 : ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿಗೆ ಕರೆತರಬೇಕು ಎಂಬ ಮಾತು ಕೇಳಿಬರುತ್ತಲೇ ಇದೆ. ಆದರೆ, ಆ ಕುರಿತ ಯಾವುದೇ ಪ್ರಯತ್ನಗಳು ಸರ್ಕಾರದ ಕಡೆಯಿಂದ ಕ್ರಿಯಾಶೀಲವಾಗಿ ನಡೆಯತ್ತಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಒಟ್ಟಾಗಿ ಸೇರಿ ಡಾಬಾ ಆರಂಭಿಸಿದ್ದು, ಸರ್ಕಾರಕ್ಕೆ ತಕ್ಕ ಸಂದೇಶ ರವಾನಿಸಿದ್ದಾರೆ.

ಪುನಾ-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಆರಂಭಿಸಿರುವ ಸತಾರಾ ಡಾಬವಿದೆ. ಚಿತ್ರದುರ್ಗ ಜಿಲ್ಲೆಯ ತಿಪ್ಪಾರೆಡ್ಡಿ ಆಟೋ ನಗರ ಬಳಿ ಈ ಡಾಬಾವನ್ನು ಭಾವನಮ್ಮ ಎಂಬುವವರು ತೆರೆದಿದ್ದಾರೆ. ನಾಲ್ಕು ತಿಂಗಳ ಹಿಂದೆ ಆರಂಭವಾದ ಡಾಬಾದಲ್ಲಿ ಕೆಲಸಗಾರನ್ನಾಗಿ ಲೈಗಿಂಕ ಅಲ್ಪಸಂಖ್ಯಾತನ್ನೇ ನೇಮಿಸಿಕೊಳ್ಳಲಾಗಿದೆ.

ಭಾವನಮ್ಮ ಡಾಬಾ ಆರಂಭಿಸುವ ಮೂಲಕ ತಮ್ಮದೇ ಸಮುದಾಯದ ಲತಿಕಾ, ತಿಲಕಾ, ರಜಿಯಮ್ಮ ಮುಂತಾದವರಿಗೆ ಉದ್ಯೋಗ ನೀಡಿದ್ದಾರೆ. ಪ್ರತಿದಿನ ಡಾಬಾದಲ್ಲಿ 5000 ರೂ.ಗಳಿಂದ 10,000 ರೂ.ಗಳವರಗೆ ವ್ಯಾಪಾರವಾಗುತ್ತದೆ. ಪ್ರತಿ ಡಾಬಾಗಳಲ್ಲಿ ಸಿಗುವಂತೆ ರೊಟಿ, ಸಬ್ಜಿ ಮುಂತಾದ ತಿಂಡಿಗಳು ಇಲ್ಲಿ ದೊರೆಯುತ್ತದೆ.

ಸುಮಾರು ನಾಲ್ಕು ಲಕ್ಷ ರೂ.ಗಳಲ್ಲಿ ಈ ಡಾಬಾವನ್ನು ಆರಂಭಿಸಿದ್ದಾರೆ ಭಾವನಮ್ಮ, ಹೆದ್ದಾರಿಯಲ್ಲಿ ಸಾಗುವ ಲಾರಿ ಮತ್ತು ಇತರ ವಾಹನ ಚಾಲಕರು ಮೊದಮೊದಲು ಡಾಬಾಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಸದ್ಯ ಅವರು ಇತರ ಡಾಬಾಗಳಂತೆ ಸತಾರಾ ಡಾಬಾಕ್ಕೆ ಯಾವುದೇ ಮುಜುಗರವಿಲ್ಲದಂತೆ ಆಗಮಿಸುತ್ತಾರೆ.

ಮೊದಲಿನಿಂದಲೂ ಯಾವುದಾದದರೂ ಉದ್ಯೋಗ ಮಾಡಬೇಕು ಎನ್ನುವ ಛಲ ಹೊಂದಿದ್ದ ಭಾವನಮ್ಮ ತಮ್ಮ ಸಮುದಾಯದ ಕೆಲವರೊಂದಿಗೆ ಸೇರಿಕೊಂಡು ಈ ಡಾಬಾ ಆರಂಭಿಸಿದ್ದಾರೆ. ಸರ್ಕಾರ ನಮ್ಮ ಸಮುದಾಯದವರಿಗೆ ಇಂತಹ ಉದ್ಯೋಗ ಮಾಡಲು ಅಗತ್ಯ ಸೌಲಭ್ಯ ನೀಡಬೇಕು. ಬ್ಯಾಂಕ್ ಗಳು ಸಹ ಸಾಲ ಸೌಲಭ್ಯ ಒದಗಿಸಬೇಕು ಎಂದು ಭಾವನಮ್ಮ ಅಭಿಪ್ರಾಯಟ್ಟಿದ್ದಾರೆ.

ಜಿಲ್ಲಾಡಳಿತ ಲೈಂಗಿಕ ಅಲ್ಪಸಂಖ್ಯಾತರಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್, ವೋಟರ್ ಕಾರ್ಡ್ ಗಳನ್ನು ನೀಡುತ್ತಿದೆ. ಇದರಿಂದ ನಮ್ಮ ಸಮುದಾಯದವರಿಗೆ ಸಹಾಯಕವಾಗುತ್ತಿದೆ. ಇದರೊಂದಿಗೆ ಸರ್ಕಾರ ನಮ್ಮ ಸಮುದಾಯದ ಎಲ್ಲರಿಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಭಾವನಮ್ಮ ಮನವಿ ಮಾಡಿದ್ದಾರೆ.

English summary
An enterprising group of eunuchs is running a successful dhaba in Chitradurga 4 km Thippareddy Auto Nagar (Kyadigere) on the Pune-Bangalore National Highway. To open Satara Dhaba Bhavanamma, took the initiative to set up the dhaba about four months ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X