ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ: ಚಿಕ್ಕಜಾಜೂರಿನಿಂದ ಗುಂತಕಲ್ಗೆ ಮೊದಲ ಬಾರಿಗೆ ವಿದ್ಯುತ್ ಚಾಲಿತ ರೈಲು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 26: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ರೈಲ್ವೆ ನಿಲ್ದಾಣದಿಂದ ಆಂಧ್ರಪ್ರದೇಶದ ಗುಂತಕಲ್ ವರೆಗೆ ಮೊಟ್ಟ ಮೊದಲ ಬಾರಿಗೆ ವಿದ್ಯುತ್ ಚಾಲಿತ ಪ್ಯಾಸೆಂಜರ್ ರೈಲು ಸೇವೆ ಆರಂಭಗೊಂಡಿದೆ.

ಚಿಕ್ಕಜಾಜೂರು ರೈಲ್ವೆ ನಿಲ್ದಾಣ ವ್ಯವಸ್ಥಾಪಕ ಜಯನಂದಮೂರ್ತಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಲೋಕೋ ಇನ್ಸ್ಪೆಕ್ಟರ್ ಏಡುಕುಂಡಲು ಅವರ ಪರಿವೀಕ್ಷಣೆ ನಂತರ ಚಾಲಕರಾದ ಅನಂತರಾವ್ ಮತ್ತು ಪ್ರಶಾಂತ್ ಕುಮಾರ್ ಅವರು ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭಿಸಿದ್ದಾರೆ.

ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ವೇಳಾಪಟ್ಟಿಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ವೇಳಾಪಟ್ಟಿ

07585 ಸಂಖ್ಯೆಯ ರೈಲಯ ಚಿಕ್ಕಜಾಜೂರು ರೈಲ್ವೆ ನಿಲ್ದಾಣದಿಂದ ಮಧ್ಯಾಹ್ನ 2.05 ಕ್ಕೆ ಸಂಚಾರ ಆರಂಭಿಸಲಿದ್ದು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ರಾಯದುರ್ಗ ನಂತರ ಬಳ್ಳಾರಿ ಮೂಲಕ ಸಂಜೆ 7.05 ಗಂಟೆಗೆ ಗುಂತಕಲ್ ತಲುಪುತ್ತದೆ. ಮರುದಿನ ಬೆಳಗ್ಗೆ 7.40 ಕ್ಕೆ ಗುಂತಕಲ್‌ನಿಂದ ಹೊರಟು 1.30 ಕ್ಕೆ ಚಿಕ್ಕಜಾಜೂರು ರೈಲ್ವೆ ನಿಲ್ದಾಣ ತಲುಪಲಿದೆ. ಈ ಸದುಪಯೋಗವನ್ನು ಸಾರ್ವಜನಿಕರು ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Electric Train Start services first time from Chikjajur to Guntakal

ಸ್ಥಗಿತಗೊಂಡಿದ್ದ ರೈಲು ಸಂಚಾರ

ಎರಡು ವರ್ಷಗಳ ಕಾಲ ಕಾಡಿದ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಈ ಹಿಂದೆ ಚಿಕ್ಕಜಾಜೂರಿನಿಂದ ಗುಂತಕಲ್‌ಗೆ ಇದ್ದ ಡಿಸೇಲ್ ಅಳವಡಿತ ರೈಲು ಸೇವೆ ಸ್ಥಗಿತಗೊಂಡಿತ್ತು. ಇದೀಗ ಅದೇ ಮಾರ್ಗವಾಗಿ ಚಿಕ್ಕಜಾಜೂರಿನಿಂದ ಗುಂತಕಲ್‌ಗೆ ವಿದ್ಯುತ್ ಚಾಲಿತ ರೈಲು ಮಾರ್ಗವಾಗಿ ಪರಿವರ್ತನೆಯಾಗಿ ಪ್ರತಿದಿನ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಲಾಗಿದೆ.

ಶೇ 80ರಷ್ಟು ರೈಲುಗಳ ವಿದ್ಯುದೀಕರಣ; ಕರ್ನಾಟಕದ ಸ್ಥಿತಿ ಏನು?ಶೇ 80ರಷ್ಟು ರೈಲುಗಳ ವಿದ್ಯುದೀಕರಣ; ಕರ್ನಾಟಕದ ಸ್ಥಿತಿ ಏನು?

ಶಾಲೆಗೆ ತೆರಳಲು ನಿತ್ಯ 8 ಕಿಮೀ ನಡೆಯುವ ವಿದ್ಯಾರ್ಥಿಗಳು

ಜಿಲ್ಲೆಯ ಧರ್ಮಪುರದ ಬಳಿಯ ಬೆನಕನಹಳ್ಳಿಗೆ ಬಸ್‌ ಸೌಕರ್ಯವಿಲ್ಲದಿರುವುದರಿಂದ ಆ ಗ್ರಾಮದ ವಿದ್ಯಾರ್ಥಿಗಳು ಬರೋಬ್ಬರಿ 8 ಕಿಮೀ ನಡೆದು ಧರ್ಮಪುರಕ್ಕೆ ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ಕಿರಿಯ ಪ್ರಾಥಮಿಕ ಶಾಲೆ ಮಾತ್ರ ಇರುವುದರಿಂದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ತೆರಳುವುದಕ್ಕೆ ಇಲ್ಲಿನ ವಿದ್ಯಾರ್ಥಿಗಳು ಕಿರಿದಾದ ರಸ್ತೆಯಲ್ಲೇ ಧರ್ಮಪುರಕ್ಕೆ ಬಂದು ಓದುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಇದೇ ಕಾರಣದಿಂದ ವಿದ್ಯಬ್ಯಾಸವನ್ನೇ ಮೊಟಕುಗೊಳಿಸುತ್ತಿದ್ದಾರೆ.

ಗ್ರಾಮದ ಜನತೆ ರಸ್ತೆ ಸೌಲಭ್ಯಕ್ಕಾಗಿ ಕಳೆದ 20 ವರ್ಷಗಳಿಂದಲೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಿದ್ದಾರೆ, ಆದರೆ ರಾಜಕಾರಣಿಗಳು ನೀಡಿರುವ ಆಶ್ವಾಸನೆ ಇಲ್ಲಿವರೆಗೆ ಈಡೇರಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Recommended Video

ಬಿ.ಜೆ.ಪಿ ಶಾಸಕ ಗಾಂಜಾ ಗಾಂಜ ಬಗ್ಗೆ ನೀಡಿದ ಹೇಳಿಕೆಗೆ ಪಕ್ಷವೇ ತಲೆ ತಗ್ಗಿಸಬೇಕಾಗಿದೆ | OneIndia Kannada

English summary
Chitradurga:Electric trian service first started from Chikjajaur to Guntakal after 2 year Covid break,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X