ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯೂರು ಶಾಸಕ ಡಿ.ಸುಧಾಕರ್ ವಿರುದ್ಧ ಎಫ್ಐಆರ್

By ಹಿರಿಯೂರು ಪ್ರತಿನಿಧಿ
|
Google Oneindia Kannada News

ಹಿರಿಯೂರು, ಏಪ್ರಿಲ್ 02: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಶಾಸಕ ಡಿ.ಸುಧಾಕರ್ ವಿರುದ್ಧ ಅಬ್ಬಿನಹೊಳೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮಪುರದ ಜಾಮೀಯ ಮಸೀದಿಯಲ್ಲಿ ಭಾಷಣ ಮಾಡಿದ ಆರೋಪ ಹೊರೆಸಲಾಗಿದ್ದು, ದೂರು ದಾಖಲಾಗಿತ್ತು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಜವಗೊಂಡನಹಳ್ಳಿ ಹೋಬಳಿಯ ಕಿಲಾರದಹಳ್ಳಿ ಗೊಲ್ಲರಹಟ್ಟಿಯಲ್ಲಿ ಈಗ ಗ್ರಾಮ ವಾಸ್ತವ್ಯದ ಸಂಭ್ರಮದಲ್ಲಿ ಶಾಸಕ ಸುಧಾಕರ್ ಪಾಲ್ಗೊಂಡಿದ್ದರು ಇದಾದ ಬಳಿಕ ಜಾಮೀಯ ಮಸೀದಿಗೆ ತೆರಳಿದ್ದರು.

Elections 2018 : FIR filed against Hiriyuru MLA D Sudhkar

ಹಿರಿಯೂರಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಗೊಲ್ಲ ಸಮುದಾಯದ ಮೇಲೆ ಯಾವುದೇ ಕೇಸು ದಾಖಲಿಸಿಲ್ಲ. ಗೊಲ್ಲರಹಟ್ಟಿಗಳಿಗೆ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ.

ಬರದ ನಾಡಿನ ವೈವಿಧ್ಯಮಯ ಕ್ಷೇತ್ರ ಹಿರಿಯೂರುಬರದ ನಾಡಿನ ವೈವಿಧ್ಯಮಯ ಕ್ಷೇತ್ರ ಹಿರಿಯೂರು

ಅನುದಾನದಲ್ಲಿ ಹೆಚ್ಚು ಗೊಲ್ಲರಿಗೆ ಸೌಲಭ್ಯ ಕಲ್ಪಿಸಿದ್ದೇನೆ. ಈ ವರ್ಷದಲ್ಲಿ 70 ಗಂಗಾಕಲ್ಯಾಣ ಬೋರ್ ವೆಲ್ ಗಳನ್ನ ಕೊಡಲಾಗಿದೆ ಎಂದು ಹೇಳಿದ್ದರು.

Elections 2018 : FIR filed against Hiriyuru MLA D Sudhkar

ಇದೇ ರೀತಿ ಮಸೀದಿಯಲ್ಲಿ ಭಾಷಣ ಮಾಡಿದ್ದರು. ಚುನಾವಣಾ ನೀತಿ ಸಂಹಿತೆ ಪ್ರಕಾರ, ಶಾಲೆ, ಚರ್ಚ್, ದೇಗುಲ, ಮಸೀದಿ ಮುಂತಾದ ಧಾರ್ಮಿಕ ಕೇಂದ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸುವಂತಿಲ್ಲ. ಖಾಸಗಿ ಕಾರ್ಯಕ್ರಮವಾದರೂ ಆಯೋಗದ ಪೂರ್ವಾನುಮತಿ ಅಗತ್ಯ.

ಕ್ಷೇತ್ರ ಪರಿಚಯ : ತ್ರಿಕೋನ ಸ್ಪರ್ಧೆಯಲ್ಲಿ ಹಿರಿಯೂರು ಕ್ಷೇತ್ರ ಪರಿಚಯ : ತ್ರಿಕೋನ ಸ್ಪರ್ಧೆಯಲ್ಲಿ ಹಿರಿಯೂರು

ಕಾಂಗ್ರೆಸ್ ಅಲ್ಪಸಂಖ್ಯಾತರ ಪಕ್ಷವಾಗಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಜಾಮಿಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಸುಧಾಕರ್ ಅವರು ಕರೆ ನೀಡಿದ್ದರು.

ತಾಲೂಕಿನಲ್ಲಿ ಅಭಿವೃದ್ಧಿಯೇ ನನ್ನ ಮಂತ್ರ. ಕಳೆದ 10 ವರ್ಷಗಳಿಂದಲೂ ವಿರೋಧಿಗಳು ನನ್ನ ಬಗ್ಗೆ ಅನವಶ್ಯಕವಾಗಿ ಟೀಕೆ ಮಾಡುತ್ತಿದ್ದಾರೆ. 2008ರಲ್ಲಿ ಇದ್ದಂಥ ಚಿತ್ರಣ ಬದಲಾಗಿ ತಾಲೂಕಿನಲ್ಲಿ ಶಾಂತಿ, ಸೌಹರ್ದತೆ ವಾತಾವರಣ ಬೆಳೆದಿದೆ ಎಂದು ಹೇಳಿದರು.

English summary
Chitradurga district Hiriyuru taluk Abbinahole police have booked a case of election violation case against MLA D Sudhakar. FIR also filed against Hiriyuru MLA Sudhakar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X