India
 • search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ಸಿಎಸ್ಟಿ ಹಾಸ್ಟೆಲ್‌ಗೆ ಶಾಸಕಿ ಪೂರ್ಣಿಮಾ ಅಚ್ಚರಿ ಭೇಟಿ; ಕುಡಿದುಬಂದು ಸಿಕ್ಕಿಬಿದ್ದ ವಾರ್ಡನ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜೂ. 18: ಎಸ್ಸಿ ಎಸ್ಟಿ ಹಾಸ್ಟೆಲ್‌ಗೆ ತಡರಾತ್ರಿ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ದಿಢೀರ್ ಭೇಟಿ ನೀಡಿ, ಹಾಸ್ಟೆಲ್ ಸಿಬ್ಬಂದಿ ಮೇಲೆ ಪುಲ್ ಗರಂ ಆಗಿದ್ದಾರೆ.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಗ್ರಾಮದಲ್ಲಿರುವ ಎಸ್ಸಿ ಎಸ್ಟಿ ಹಾಸ್ಟೆಲ್‌ಗೆ ಶಾಸಕಿ ಕೆ ಪೂರ್ಣಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳ ಜೊತೆ ಮುಕ್ತವಾಗಿ ಬೆರೆತು ಅವರೊಂದಿಗೆ ಕೆಲಕಾಲ ಹಾಸ್ಟೆಲ್ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದರು.

ಕೋಟೆನಾಡು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಕೋಟೆನಾಡು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ವಿದ್ಯಾರ್ಥಿಗಳು

ಈ ವೇಳೆ ಹಾಸ್ಟೆಲ್ ಅವ್ಯವಸ್ಥೆ ಕಂಡಿದ್ದ ವಿದ್ಯಾರ್ಥಿಗಳು, ಸರಿಯಾಗಿ ಊಟ ಕೊಡುತ್ತಿಲ್ಲ, ತಿನ್ನಲು ಮೊಟ್ಟೆ ಕೊಡುತ್ತಿಲ್ಲ, ಊಟ ರುಚಿಯಾಗಿ ಇರುವುದಿಲ್ಲ, ಸಾಂಬಾರ್ ಖಾರ ಖಾರವಾಗಿರುತ್ತದೆ. ಊಟ ಮಾಡೋಕೆ ಆಗೋದಿಲ್ಲ. ರಾತ್ರಿ ವೇಳೆ ಇಲ್ಲಿ ಹಾಸ್ಟೆಲ್ ವಾರ್ಡನ್ ಆಗಲಿ, ಪ್ರಿನ್ಸಿಪಾಲ್ ಆಗಲಿ ಯಾರು ಇರುವುದಿಲ್ಲ, ನಮಗೆ ಗೇಮ್ ಆಡಲು ಕೇರಂ ಬೋರ್ಡ್, ಶಟಲ್, ಇತರೆ ಆಟದ ಸಾಮಾನುಗಳನ್ನು ಕೊಡುತ್ತಿಲ್ಲ, ಎಲ್ಲಾ ಮುರಿದು ಹಾಳು ಮಾಡ್ತಿರಾ ಅಂತ ಬೈತಾರೆ ಮಿಸ್. ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ಇನ್ನಾದರೂ ಹಾಸ್ಟೆಲ್‌ಗೆ ವೀಕ್ಷಣೆಗೆ ಬಂದರೆ ಇಲ್ಲಿ ಎಲ್ಲಾ ವ್ಯವಸ್ಥೆ ಉತ್ತಮವಾಗಿದೆ. ಅಡುಗೆ ಊಟ ಚೆನ್ನಾಗಿರುತ್ತದೆ ಎಂದು ಹೇಳಬೇಕು ಅಂತ ಸಿಬ್ಬಂದಿ ನಮಗೆ ಹೇಳಿಕೊಡುತ್ತಾರೆ, ಹಿಂದೊಮ್ಮೆ ಬಿಇಓ ಬಂದಾಗ ಸಮಸ್ಯೆ ಹೇಳೋಕೆ ಬಿಡಲಿಲ್ಲ ಎಂದು ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎಳೆಎಳೆಯಾಗಿ ಶಾಸಕರಿಗೆ ಬಿಚ್ಚಿಟ್ಟರು.

ಕುಡಿದು ಬಂದಿರುವ ವಾರ್ಡನ್ ಮೇಲೆ ಶಾಸಕಿ ಗರಂ

ಹಾಸ್ಟೆಲ್ ವಾರ್ಡನ್ ಕುಡಿದು ಬಂದಿರುವುದನ್ನು ಗಮನಿಸಿದ ಶಾಸಕರು ಆತ ವಾರ್ಡನ್ ಕುಡಿದು ಬಂದಿದ್ದಾನೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಾರ್ಡನ್ ಇಲ್ಲ ಮೇಡಂ, ಮಕ್ಕಳಿಗೆ ಊಟ ಕೊಡಲು ಹೋಗಿದ್ದೆ ಎಂದಾಗ "ಸುಮ್ನೆ ನಿಂತ್ಕಳಯ್ಯಾ ಕಥೆ ಹೇಳ್ಬೇಡ, ನಿನ್ ಕಣ್ಣು ಹೇಳುತ್ತದೆ, ಕಣ್ಣುಗಳು ಪುಲ್ ಕೆಂಪಾಗಿದಾವೆ. ಟಿಎಚ್ಓ ಕರೆದು ಕುಡಿದಿರುವುದು ಚೆಕ್ ಮಾಡಿಸಲಾ" ಎಂದು ಪ್ರಶ್ನೆ ಹಾಕಿದರು. "ನೀನು ಕುಡಿದಿಲ್ಲ ಎಂದಾದರೆ, ತಪ್ಪು ಮಾಡಿಲ್ಲ ಅದರೆ ನಾನು ನಿನಗೆ ಕ್ಷಮೆ ಕೇಳುವೆ" ಎಂದಾಗ ವಾರ್ಡನ್ ತಡವರಿಸುತ್ತಾ ನಿಂತರು.

Drunken Warden of SC ST Hostel Caught During Surpise Visit by Hiriyur MLA Poornima

ಹಾಸ್ಟೆಲ್ ನಿರ್ವಹಣೆ ಮಾಡದ ಮಹಿಳಾ ಸಿಬ್ಬಂದಿಗೆ ತರಾಟೆ

ಸರಿಯಾಗಿ ಹಾಸ್ಟೆಲ್ ನಿರ್ವಹಣೆ ಮಾಡದ ಮಹಿಳಾ ಸಿಬ್ಬಂದಿಗೆ ಶಾಸಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಜರಾತಿ ಬಗ್ಗೆ ಪ್ರಶ್ನಿಸಿದಾಗ ಸರಿಯಾಗಿ ಕರ್ತವ್ಯ ನಿರ್ವಹಿಸಿ ಎಂದರು. ಯಾರು ಹಾಜರಾತಿ ನೋಡಿಕೊಳ್ಳುವುದು ಹೇಳಿ ಎಂದರು. ತಪ್ಪಾಗಿರುವ ತಪ್ಪನ್ನು ತಿದ್ದಿಕೊಳ್ಳಿ ಎಂದು ಸಲಹೆ ನೀಡಿದರು. ಸ್ಥಳದಲ್ಲೇ ಸಂಬಂಧಪಟ್ಟ ಕ್ರೈಸಿಡಿ ಅಧಿಕಾರಿಗೆ ದೂರವಾಣಿ ಮೂಲಕ ಕರೆ ಮಾಡಿ, ನಾನು ವಿವಿ ಪುರ ಎಸ್ಸಿ ಎಸ್ಟಿ ಹಾಸ್ಟೆಲ್‌ಗೆ ಭೇಟಿ ನೀಡಲಾಗಿದೆ. ಇಲ್ಲಿ ಯಾರೂ ಇರಲಿಲ್ಲ ಇಲ್ಲಿನ ವ್ಯವಸ್ಥೆ ಸರಿಯಿಲ್ಲ. ನಾನು ಅಲ್ಲಿಗೆ ಹೋಗಿದ್ದೆ, ಮೀಟಿಂಗ್ ಇತ್ತು ಈಗೆ ಎಲ್ಲ ಸುಳ್ಳು ಹೇಳುತ್ತಾರೆ ಪ್ರಿನ್ಸಿಪಾಲ್ ಬದಲಾವಣೆ ಮಾಡಿ, ವಾರ್ಡನ್ ಅವರನ್ನು ಸಸ್ಪೆಂಡ್ ಮಾಡುವಂತೆ ಸೂಚಿಸಿದರು. ಈ ಹಾಸ್ಟೆಲ್ ನಲ್ಲಿ ತುಂಬಾ ಸಮಸ್ಯೆ ಇದೆ. ಮಕ್ಕಳು ಕಂಪ್ಲೆಂಟ್ಸ್ ಹೇಳಿದರೆ. ತುರ್ತಾಗಿ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಿ ಎಂದು ಮೇಲಾಧಿಕಾರಿಗೆ ಸೂಚಿಸಿದರು.

(ಒನ್ಇಂಡಿಯಾ ಸುದ್ದಿ)

   ಎಷ್ಟೇ ಪರ್ಫಾಮ್ ಮಾಡಿದ್ರು ಬಿಸಿಸಿಐ ಕಣ್ಣಿಗೆ ಬೀಳೋದು ಕಷ್ಟ | *Cricket | OneIndia Kannada
   English summary
   Hiriyur MLA K Poornima on Friday night made a surprise visit to a SC ST hostel at Vanivilaspura village of her constituency. She inquired students about the facilities. Meanwhile hostel warden had come drunken and got caught by MLA.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X