ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಚಿತ್ರದುರ್ಗದಲ್ಲಿ ಚಾಲಕ ರಹಿತ ಯುದ್ಧ ವಿಮಾನದ ಹಾರಾಟ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 01; ಚಿತ್ರದುರ್ಗದ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಬಳಿ ಇರುವ ಡಿಆರ್‌ಡಿಒ ಅಟಾನಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ ಮೊಟ್ಟಮೊದಲ ಚಾಲಕ ರಹಿತ ವಿಮಾನದ ಯಶಸ್ವಿ ಹಾರಾಟ ನಡೆಸಿದೆ.

ಈ ಪರೀಕ್ಷಾ ಹಾರಾಟ ಶುಕ್ರವಾರ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಯಶಸ್ವಿಯಾಗಿ ನಡೆಸಲಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ತಿಳಿಸಿದೆ.

Breaking; ಕಲಬುರಗಿಯಲ್ಲಿ ಮೊದಲ ವೈಮಾನಿಕ ತರಬೇತಿ ಕೇಂದ್ರ ಆರಂಭ Breaking; ಕಲಬುರಗಿಯಲ್ಲಿ ಮೊದಲ ವೈಮಾನಿಕ ತರಬೇತಿ ಕೇಂದ್ರ ಆರಂಭ

"ಸಂಪೂರ್ಣ ಸ್ವಾಯತ್ತ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಚಾಲಕ ರಹಿತ ವಿಮಾನವು ಟೇಕ್-ಆಫ್, ವೇ ಪಾಯಿಂಟ್ ನ್ಯಾವಿಗೇಷನ್ ಮತ್ತು ಸರಳವಾದ ಟಚ್‌ಡೌನ್ ಒಳಗೊಂಡಂತೆ ಪರಿಪೂರ್ಣ ಹಾರಾಟ ನಡೆಸಿದೆ " ಎಂದು ತಿಳಿಸಿದೆ.

DRDO successfully Tests Maiden Flight of Unmanned Combat Ari craft in Chitrdurga

ಡಿಆರ್‌ಡಿಒ ಅಡಿಯಲ್ಲಿನ ಪ್ರಮುಖ ಸಂಶೋಧನಾ ಪ್ರಯೋಗಾಲಯವಾದ ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಮಾನವರಹಿತ ಯುದ್ಧ ವಿಮಾನವು ಸಣ್ಣ, ಟರ್ಬೋಫ್ಯಾನ್ ಎಂಜಿನ್‌ನಿಂದ ಚಾಲಿತವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಪೈಲಟ್‌ಗಳಿಗೆ ಭರ್ಜರಿ ಆಫರ್‌ ಕೊಟ್ಟ ಏರ್‌ ಇಂಡಿಯಾ ಪೈಲಟ್‌ಗಳಿಗೆ ಭರ್ಜರಿ ಆಫರ್‌ ಕೊಟ್ಟ ಏರ್‌ ಇಂಡಿಯಾ

ಈ ವಿಮಾನವು ಸ್ವಾವಲಂಬನೆಯ ಕಡೆಗೆ ತಂತ್ರಜ್ಞಾನಗಳನ್ನು ಸಾಬೀತುಪಡಿಸುವ ವಿಷಯದಲ್ಲಿ ಪ್ರಮುಖ ಮೈಲಿಗಲ್ಲಾಗಿದ್ದು, ಭವಿಷ್ಯದ ಮಾನವರಹಿತ ವಿಮಾನಗಳ ಅಭಿವೃದ್ಧಿಗೆ ನಿರ್ಣಾಯಕ ತಂತ್ರಜ್ಞಾನಗಳನ್ನು ಸಾಬೀತುಪಡಿಸುವ ವಿಷಯದಲ್ಲಿ ಈ ಹಾರಾಟವು ಪ್ರಮುಖ ಮೈಲಿಗಲ್ಲಾಗಿದೆ . ನಿರ್ಣಾಯಕ ಕಾರ್ಯತಂತ್ರದ ರಕ್ಷಣಾ ತಂತ್ರಜ್ಞಾನದಲ್ಲಿ ಮಾನವರಹಿತ ವೈಮಾನಿಕ ವಾಹನವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಡಿಆರ್ ಡಿಒ ಹೇಳಿದೆ.

ಕೇಂದ್ರ ರಕ್ಷಣಾ ಸಚಿವ ಅಭಿನಂದನೆ; ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಯತ್ತ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ವಿಮಾನ‌ ಯಶಸ್ವಿ ಹಾರಾಟ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

"ಚಿತ್ರದುರ್ಗದ DRDOದಲ್ಲಿ ಚಾಲಕರಹಿತ ವಿಮಾನ ಹಾರಾಟ ನಡೆಸಿದೆ. DRDOದ ಏರೊನೆಟಿಕಲ್ ಟೆಸ್ಟ್ ರೇಂಜ್ ನಲ್ಲಿ ಯಶಸ್ವಿ ಚೊಚ್ಚಲ ಹಾರಾಟ‌ ಹಾಗೂ ಸ್ವಾಯತ್ತ ವಿಮಾನಗಳ ಪ್ರಮುಖ ಸಾಧನೆಯಾಗಿದೆ. ಅಲ್ಲದೆ ಚಿತ್ರದುರ್ಗದ ಎಟಿಆರ್‌ನಿಂದ ಅಟಾನಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ನ ಯಶಸ್ವಿ ಚೊಚ್ಚಲ ಹಾರಾಟ ಸ್ವಾಯತ್ತ ವಿಮಾನಗಳ ಕಡೆಗೆ ಒಂದು ಪ್ರಮುಖ ಸಾಧನೆಯಾಗಿದೆ. ಇದು ನಿರ್ಣಾಯಕ ಮಿಲಿಟರಿ ವ್ಯವಸ್ಥೆಗಳ ವಿಷಯದಲ್ಲಿ ಆತ್ಮನಿರ್ಭರ್ ಭಾರತಕ್ಕೆ ದಾರಿ ಮಾಡಿಕೊಡುತ್ತದೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Recommended Video

ಬಂಗಾರದ ಮನುಷ್ಯನ ಗೋಲ್ಡನ್ ಹಾರ್ಟ್: Neeraj Chopra ವಿನಮ್ರತೆ ನೋಡಿ ನೆಟ್ಟಿಗರು ಫಿದಾ |*Sports |OneIndia Kannada

English summary
In a major success towards developing unmanned combat aircraft, the maiden flight of the Autonomous Flying Wing Technology Demonstrator was carried out successfully from the Aeronautical Test Range, Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X