ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದ ಜಮೀನಿನಲ್ಲಿ ಚಾಲಕ ರಹಿತ ಡ್ರೋನ್ ವಿಮಾನ ಪತನ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

Recommended Video

ವಿಮಾನ ಬಿದ್ದಿದ್ದು ನೋಡಿ ಗಾಬರಿಗೊಂಡ ರೈತ | Oneindia Kannada

ಚಿತ್ರದುರ್ಗ, ಸೆಪ್ಟೆಂಬರ್ 17: ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದ ಸಂದರ್ಭ ಡಿಆರ್ ಡಿಒ ಸಂಸ್ಥೆಯ ಚಾಲಕರಹಿತ ಡ್ರೋನ್ ತಪಸ್ ವಿಮಾನವು ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ಜೋಡಿಚಿಕ್ಕೇನಹಳ್ಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಪತನವಾಗಿದೆ.

ಕುದಾಪುರ ಬಳಿಯಿರುವ ಡಿಆರ್ ಡಿಒ ಸಂಸ್ಥೆ ಡ್ರೋನ್ ವಿಮಾನವನ್ನು ಪರೀಕ್ಷಾರ್ಥವಾಗಿ ಹಾರಾಟ ನಡೆಸುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ನೆಲಕ್ಕಪ್ಪಳಿಸಿರುವುದಾಗಿ ತಿಳಿದುಬಂದಿದೆ. ಮಂಗಳವಾರ ಬೆಳಿಗ್ಗೆ ಇಲ್ಲಿನ ಏರೋನಾಟಿಕಲ್‌ ಟೆಸ್ಟ್‌ ರೇಂಜ್‌ನಿಂದ ಹೊರಟ ಕೆಲವೇ ಸೆಕೆಂಡುಗಳಲ್ಲಿ ಆಕಾಶದಲ್ಲಿ ಡ್ರೋಣ್ ಮರೆಯಾಗಿದೆ. ನಂತರ ಚಳ್ಳಕೆರೆ ಸಮೀಪದ ಜೋಡಿಚಿಕ್ಕೇನಹಳ್ಳಿಯಲ್ಲಿ ಆನಂದಪ್ಪ ಎಂಬುವರ ಅಡಕೆ ತೋಟಕ್ಕೆ ಬಂದು ಅಪ್ಪಳಿಸಿದೆ.

ಹೆದ್ದಾರಿಗೆ ಬಂದು ಕಾರಿಗೆ ಡಿಕ್ಕಿ ಹೊಡೆದ ವಿಮಾನ, ಜನ ಕಂಗಾಲು!ಹೆದ್ದಾರಿಗೆ ಬಂದು ಕಾರಿಗೆ ಡಿಕ್ಕಿ ಹೊಡೆದ ವಿಮಾನ, ಜನ ಕಂಗಾಲು!

ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪತನಗೊಂಡ ವಿಮಾನ ನೋಡಲು ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ಸಂಬಂದಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

DRDO Drone Crashed On Farm In Challakere

ಮಾನವರಹಿತ ಯುದ್ಧ ವಿಮಾನಗಳ ಸಂಶೋಧನೆ ನಡೆಸುತ್ತಿರುವ ಡಿಆರ್ ಡಿಒ, ಚಳ್ಳಕೆರೆ ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ(ಎಟಿಆರ್) ಹೊರಾಂಗಣ ಪರೀಕ್ಷೆ ಮತ್ತು ಮೌಲ್ಯಮಾಪನ ಸೌಲಭ್ಯವನ್ನು ಮಾನವರಹಿತ ಮತ್ತು ಮಾನವಸಹಿತ ವಿಮಾನಗಳಿಗಾಗಿ ಪ್ರತ್ಯೇಕವಾಗಿ ಸ್ಥಾಪಿಸುತ್ತಿದೆ.

English summary
DRDO's driverless drone Rustum 2 crashed on the outskirts of Jodhichikenahalli village in Challakere Taluk of Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X