ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ರಸ್ತೆ ಅಭಿವೃದ್ಧಿಯಾಗೇ ಅಪಘಾತ ಹೆಚ್ಚಿರುವುದು"; ಡಿಸಿಎಂ ಗೋವಿಂದ ಕಾರಜೋಳ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

Recommended Video

ಟ್ರಾಫಿಕ್ ದುಬಾರಿ ದಂಡದ ಬಗ್ಗೆ ಡಿ ಸಿ ಎಂ ಗೋವಿಂದ ಕಾರಜೋಳ ಹೇಳೋದೇನು ? | Oneindia Kannada

ಚಿತ್ರದುರ್ಗ, ಸೆಪ್ಟೆಂಬರ್ 11: "ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುತ್ತಿರುವುದಕ್ಕೆ ನನ್ನ ಬೆಂಬಲವಿಲ್ಲ. ಆದರೆ ರಸ್ತೆಗಳು ಸುರಕ್ಷಿತವಾಗಿಲ್ಲ ಎಂಬ ಮಾತನ್ನು ನಾನು ಒಪ್ಪುವುದಿಲ್ಲ" ಎಂದಿದ್ದಾರೆ ಡಿಸಿಎಂ ಗೋವಿಂದ ಕಾರಜೋಳ.

ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿಯಲ್ಲಿ ಮಾತನಾಡಿದ ಅವರು, "ಗುಜರಾತ್ ನಲ್ಲಿ ದಂಡದ ಮೊತ್ತ ವಿನಾಯಿತಿಯಂತೆ ಇಲ್ಲೂ ಅನ್ವಯಿಸಲು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ದುಬಾರಿ ದಂಡಕ್ಕೆ ನನ್ನ ಸಹಮತವೂ ಇಲ್ಲ, ನಾನೂ ವಿರೋಧಿಸುತ್ತೇನೆ" ಎಂದು ಹೇಳಿದ್ದಾರೆ.

ಡಿಕೆಶಿ ಬಂಧನದ ಬಗ್ಗೆ ನನ್ನ ಏನೂ ಕೇಳ್ಬೇಡಿ, ಕಾನೂನು ಪ್ರಕಾರ ಎಲ್ಲಾ ಆಗುತ್ತೆ: ಕಾರಜೋಳಡಿಕೆಶಿ ಬಂಧನದ ಬಗ್ಗೆ ನನ್ನ ಏನೂ ಕೇಳ್ಬೇಡಿ, ಕಾನೂನು ಪ್ರಕಾರ ಎಲ್ಲಾ ಆಗುತ್ತೆ: ಕಾರಜೋಳ

"ರಸ್ತೆಗಳನ್ನು ಸರಿಪಡಿಸಿದ ಮೇಲೆ ದಂಡ ವಿಧಿಸಿ ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ರಸ್ತೆಗಳು ಅಭಿವೃದ್ಧಿಯಾಗಿಯೇ ಅಪಘಾತಗಳು ಹೆಚ್ಚಿವೆ. ಹೆಚ್ಚು ವೇಗವಾಗಿ ವಾಹನ ಚಲಾಯಿಸುತ್ತಿರುವುದೇ ಅಪಘಾತಕ್ಕೆ ಕಾರಣವಾಗುತ್ತಿದೆ" ಎಂದು ತಿಳಿಸಿದ್ದಾರೆ.

DCM Govinda Karjol Reaction On New Traffic Fines

ಡಿಕೆಶಿ ವಿರುದ್ಧ ಹೇಳಿಕೆ; ಕ್ಷಮೆ ಕೇಳುವ ಮಾತೇ ಇಲ್ಲ ಎಂದ ಗೋವಿಂದ ಕಾರಜೋಳ ಡಿಕೆಶಿ ವಿರುದ್ಧ ಹೇಳಿಕೆ; ಕ್ಷಮೆ ಕೇಳುವ ಮಾತೇ ಇಲ್ಲ ಎಂದ ಗೋವಿಂದ ಕಾರಜೋಳ

ಇದೇ ಸಂದರ್ಭ ಡಿಕೆಶಿ ಪರ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದ ಪ್ರಶ್ನೆಗೆ, "ಈ ಪ್ರತಿಭಟನೆ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಡಿಕೆಶಿ ಮಗಳ ವಿಚಾರಣೆ ಬಗ್ಗೆಯೂ ನೋ ಕಮೆಂಟ್ಸ್. ಕಾನೂನು ತನ್ನ ಕೆಲಸ ತಾನು ಮಾಡಿಕೊಂಡು ಬರುತ್ತಿದೆ. ಬಿಜೆಪಿಗೂ ಮತ್ತು ಇಡಿಗೂ ಯಾವುದೇ ಸಂಬಂಧ. ಹಾಗಾಗಿ ಬಿಜೆಪಿ ಮತ್ತು ಇಡಿಗೆ ಸಂಬಂಧ ಕಲ್ಪಿಸುವುದು ತಪ್ಪು" ಎಂದು ಪ್ರತಿಕ್ರಿಯಿಸಿದ್ದಾರೆ.

English summary
"I do not support the high cost for traffic violations. But also i dont accept that roads are not safe for travel" said DCM Govind Karajola in chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X