ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪಗೆ ದಲಿತ ಮುಖಂಡರ ಮುತ್ತಿಗೆ ಯತ್ನ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 1: ಡಾ.ಬಿ.ಆರ್ ಅಂಬೇಡ್ಕರ್ ಬಯಲು ರಂಗ ಮಂದಿರದ ಹೆಸರು ಬದಲಾಯಿಸಲು ಮುಂದಾಗಿದ್ದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರನ್ನು ದಲಿತ ಮುಖಂಡರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಹೊಳಲ್ಕೆರೆಯಲ್ಲಿ ಘಟನೆ ನಡೆದಿದೆ.

ಶಾಸಕರಿಗೆ ಮುತ್ತಿಗೆ ಹಾಕಲು ಬಂದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಂಬೇಡ್ಕರ್ ಬಯಲು ರಂಗ ಮಂದಿರದ ಹೆಸರನ್ನು ವಾಲ್ಮೀಕಿ ಆಡಿಟೋರಿಯಂ ಎಂದು ಮರು ನಾಮಕರಣ ಮಾಡಲು ತಾಲ್ಲೂಕು ಅಡಳಿತ ಮುಂದಾಗಿತ್ತು ಎಂದು ತಿಳಿದು ಬಂದಿದೆ.

ದಾವಣಗೆರೆಯಲ್ಲಿ ಜೆಸಿಬಿ ಬಳಸಿ ಕೊರೊನಾ ಸೋಂಕಿತೆಯ ಅಂತ್ಯಸಂಸ್ಕಾರದಾವಣಗೆರೆಯಲ್ಲಿ ಜೆಸಿಬಿ ಬಳಸಿ ಕೊರೊನಾ ಸೋಂಕಿತೆಯ ಅಂತ್ಯಸಂಸ್ಕಾರ

2016 ರಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಅವದಿಯಲ್ಲಿ ಮಂಜೂರಾಗಿದ್ದ ಕಾಮಗಾರಿಯು 312 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ಬಯಲು ರಂಗಮಂದಿರದ ಕಾಮಗಾರಿ ನಿರ್ಮಾಣವಾಗುತ್ತಿತ್ತು. ಅಧಿಕಾರಿಗಳ ನಿರ್ಧಾರಕ್ಕೆ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Dalit Leaders Tried To Siege On Holalkere MLA M Chandrappa

ವಾಲ್ಮೀಕಿ ಆಡಿಟೋರಿಯಂ ಹೆಸರಲ್ಲಿ ಹೆಚ್ಚುವರಿ ಅನುದಾನದಿಂದ ಅಭಿವೃದ್ಧಿ ಕೆಲಸ ಮಾಡಲು ಮುಂದಾದ ಹಿನ್ನೆಲೆ ಕಾಮಗಾರಿ ಸ್ಥಳಕ್ಕೆ ಮಾಜಿ ಸಚಿವ ಎಚ್.ಅಂಜನೇಯ ಮತ್ತು ಕಾಂಗ್ರೆಸ್ ಮುಖಂಡರು ಭೇಟಿ ನೀಡಿ, ಕಾಮಗಾರಿಗೆ ತೆಗೆಯಲಾಗಿದ್ದ ಗುಂಡಿಯನ್ನು ಮುಚ್ಚಿಸಿದ್ದಾರೆ.

English summary
A group of Dalit leaders tried to siege Holalkere MLA M Chandrappa, who had come forward to change the name of Dr BR Ambedkar Bayalu Rangamandira.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X