ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಚಿತ್ರದುರ್ಗದ ಗ್ರಾಮವೊಂದರ ಜನರಿಗೆ ಕಾಗೆ ಕಾಟ!

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜನವರಿ 28; ಆ ಗ್ರಾಮದ ಜನರು ಕೆಲವು ದಿನಗಳಿಂದ ಮನೆಯಿಂದ ಹೊರಗೆ ಬಂದು ರಸ್ತೆಯಲ್ಲಿ ಓಡಾಡಲು ಭಯಭೀತರಾಗಿದ್ದಾರೆ. ಇನ್ನೂ ಮನೆಯ ಕಿಟಕಿ, ಬಾಗಿಲು ತೆರೆದಿಡಲು ಸಹ ಹೆದರುತ್ತಾರೆ. ಒಬ್ಬೊಬ್ಬರೇ ನಡೆದುಕೊಂಡು ಹೋಗುವುದು ಕೈ ಬಿಟ್ಟಿದ್ದಾರೆ. ಯಾರಾದರೂ ಒಂಟಿಯಾಗಿ ಓಡಾಡುವ ಧೈರ್ಯ ಮಾಡಿದರೆ ಕಾಗೆ ಬಂದು ತಲೆ ಮೇಲೆ ಕುಟುಕಿ ಹೋಗತ್ತದೆ.

ಅವು ಬಾನಂಗಳದಲ್ಲಿ ಹಾರಾಡುವ ಕಾಗೆ. ಆ ಕಾಗೆಯನ್ನು ಕಂಡರೆ ಗ್ರಾಮದ ಜನರು ಬೆಚ್ಚಿ ಬೀಳುತ್ತಿದ್ದಾರೆ. ಇದೇನಪ್ಪ ಒಂಟಿ ಕಾಗೆಗೆ ಜನ ಹೆದರೋದು ಅಂತೀರಾ?. ನೋಡಿ ಒಂಟಿಯಾಗಿ ಹಾರಾಡುವ ಕಾಗೆ ರಸ್ತೆಯಲ್ಲಿ ಗ್ರಾಮದ ಜನರು ಒಂಟಿಯಾಗಿ ಓಡಾಡುವವರನ್ನು ಕಂಡರೆ ತಲೆ ಮೇಲೆ ಕುಟುಕಿ ಹೋಗುತ್ತದೆ. ಹೌದು, ಇಂತಹ ವಿಚಿತ್ರ ಘಟನೆ ನಡೆಯುತ್ತಿರುವುದು ಚಿತ್ರದುರ್ಗ ಜಿಲ್ಲೆ, ಭರಮಸಾಗರ ಹೋಬಳಿಯ ಓಬಳಾಪುರ ಗ್ರಾಮದಲ್ಲಿ.

ಕಳೆದ 6 ತಿಂಗಳಿಂದ ಒಂಟಿ ಕಾಗೆಯೊಂದು ಗ್ರಾಮಸ್ಥರಿಗೆ ಕಾಟ ಕೊಡುತ್ತಿದೆ. ಕಾಗೆಯ ವಿಚಿತ್ರ ಕಾಟದಿಂದ ಗ್ರಾಮಸ್ಥರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಒಂಟಿ ಮನುಷ್ಯರಿಗೆ ಕುಟುಕೋ ಈ ಕಾಗೆಗೆ ಮನೆ ಕಿಟಕಿಯ ಗಾಜು, ಬೈಕ್ ಮಿರರ್, ಕಾರಿನ ಗ್ಲಾಸ್ ಕಂಡರೂ ಆಗುವುದಿಲ್ಲ. ಗಾಜುಗಳು ಕಣ್ಣಿಗೆ ಬಿದ್ದರೆ ಸಾಕಾಗೋವರೆಗೂ ಕುಟುಕುತ್ತಲೇ ಇರುತ್ತದೆ. ಕಾಗೆ ಕುಟುಕಿ ಕುಟುಕಿ ಕೆಲವರ ತಲೆ ಗಾಯ ಆಗಿವೆ ಎನ್ನುತ್ತಾರೆ ಗ್ರಾಮಸ್ಥರು.

 ಕರಾವಳಿ ಯುವಕನ ಕಾಗೆ ಬಿಸ್ನೆಸ್ ಗೆ ಬ್ರೇಕ್; ಕಾಗೆ ಈಗ ಕಾಡಿಗೆ... ಕರಾವಳಿ ಯುವಕನ ಕಾಗೆ ಬಿಸ್ನೆಸ್ ಗೆ ಬ್ರೇಕ್; ಕಾಗೆ ಈಗ ಕಾಡಿಗೆ...

Crow Attacking Villagers At Baramasagara Chitradurga

ಹೀಗೆ ಕಾಗೆಯೊಂದು ಇಷ್ಟು ಸಿಟ್ಟಿನಿಂದ ಗ್ರಾಮಸ್ಥರಿಗೆ ಕಾಟ ಕೊಡುತ್ತಿರುವುದಕ್ಕೆ ಗ್ರಾಮದ ಆಂಜನೇಯ ಸ್ವಾಮಿಯ ಶಾಪವೇ ಕಾರಣವಂತೆ. ಗ್ರಾಮದ ಆಂಜನೇಯ ಸ್ವಾಮಿ ದೇವಾಲಯ ಪಾಳು ಬಿದ್ದಿದ್ದು ಅದರ ಅಭಿವೃದ್ಧಿ ಕಾರ್ಯ, ಪ್ರಾಣ ಪ್ರತಿಷ್ಠಾಪನೆಗೆ ,10 ವರ್ಷದ ಹಿಂದೆ ಗ್ರಾಮಸ್ಥರು ಕೈ ಹಾಕಿದ್ದರು. ಆದರೆ, ಅದು ಅರ್ಧಕ್ಕೆ ನಿಂತಿದ್ದು, ಆಂಜನೇಯ ಸ್ವಾಮಿಯ ಶಾಪ ಹಾಕಿದ್ದಾರಂತೆ. ಹಾಗಾಗಿ ಶನಿ ಮಹಾತ್ಮ ಕಾಗೆ ರೂಪದಲ್ಲಿ ಕಾಟ ಕೊಡ್ತಿದ್ದಾನಂತೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 ಕಾಪು ಹುಡುಗನ ಫೇಮಸ್ 'ಕಾಗೆ ಬಿಸ್ನೆಸ್' ಕಾಪು ಹುಡುಗನ ಫೇಮಸ್ 'ಕಾಗೆ ಬಿಸ್ನೆಸ್'

ಒಟ್ಟಾರೆ ಕಳೆದ 6 ತಿಂಗಳಿಂದ ಕಾಗೆ ಕಾಟಕ್ಕೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಮರು ನಿರ್ಮಾಣ ಮತ್ತು ಪ್ರಾಣ ಪ್ರತಿಷ್ಠಾಪನೆ ಮಾಡಿದರೆ ಗ್ರಾಮಕ್ಕೆ ಒಳ್ಳೆಯದು ಆಗುತ್ತದೆ, ಇತ್ತ ಕಾಗೆಗೆ ಶಾಂತಿಯೂ ಆಗುತ್ತದೆ ಎನ್ನುವುದು ಹಿರಿಯರ ನಂಬಿಕೆಯಾಗಿದೆ.

English summary
Crow attacking on villagers at Obalapura of Baramasagara Chitradurga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X