ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯೂರಿನಲ್ಲಿ ತ್ರಿವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದ ಹಸು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜನವರಿ 22: ಹಸುವೊಂದು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ಮಲ್ಲಪ್ಪನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ.

ಹಸು ಮತ್ತು ಕರುಗಳು ಆರೋಗ್ಯವಾಗಿವೆ. ಮಲ್ಲಪ್ಪನಹಳ್ಳಿ ಗ್ರಾಮದ ರಂಗಮ್ಮ ಹಾಗೂ ಮೂರ್ಕಣಪ್ಪ ಎನ್ನುವವರು ಸಾಕಿರುವ ಆಲ್ ಬ್ಲಾಕ್ ತಳಿಯ ಹಸು ಮಂಗಳವಾರ ಮೂರು ಎಚ್‍ಎಫ್ ಕರುಗಳಿಗೆ ಜನ್ಮ ನೀಡಿರುವುದು ಕುತೂಹಲ ಉಂಟು ಮಾಡಿದೆ. ನಿನ್ನೆ‌ ಮಧ್ಯಾಹ್ನ 2 ಗಂಟೆಗೆ ಜನಿಸಿರುವ ತ್ರಿವಳಿ ಕರುಗಳು ಎಲ್ಲರ ಗಮನ ಸೆಳೆದಿವೆ. ಮೂರು ಕರುಗಳು 5 ನಿಮಿಷಗಳ ಕಾಲಾವಧಿಯಲ್ಲಿ ಹುಟ್ಟಿವೆ. ಇವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಬರುತ್ತಿದ್ದಾರೆ.

ಈ ಹಸುವಿನ ಹೊಟ್ಟೆಯಲ್ಲಿದ್ದದ್ದು ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್!ಈ ಹಸುವಿನ ಹೊಟ್ಟೆಯಲ್ಲಿದ್ದದ್ದು ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್!

Cow Gave Birth To Three Female Calves In Hiriyur

ಹತ್ತು ವರ್ಷಗಳಿಂದ ಹಸುವನ್ನೇ ನಂಬಿ ಜೀವನ ನಡೆಸುತ್ತಿದ್ದ ಈ ಕುಟುಂಬಕ್ಕೆ ಮೂರು ಕರುಗಳಿಗೆ ಜನ್ಮ ನೀಡಿರುವ ಹಸು ಕಾಮಧೇನು ಆಗಿದೆ. ಸಾಮಾನ್ಯವಾಗಿ ಹಸುಗಳು ಒಂದು ಅಥವಾ ಎರಡು ಕರುಗಳಿಗೆ ಜನ್ಮ ನೀಡುತ್ತವೆ. ಆದರೆ ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿರುವುದು ಅಚ್ಚರಿ ಮೂಡಿಸಿದೆ. ಮೂರು ಕರುಗಳು ಆರೋಗ್ಯವಾಗಿವೆ ಎಂದು ಪಶು ವೈದ್ಯರು ದೃಢಪಡಿಸಿದ್ದಾರೆ. 50 ಸಾವಿರ ಹಸುಗಳಲ್ಲಿ ಒಂದಕ್ಕೆ ಈ ರೀತಿ ಆಗುತ್ತದೆ ಎಂದು ತಿಳಿಸಿದ್ದಾರೆ.

English summary
A rare incident in which a cow gave birth to three female calves took place in a village called Mallappanahalli in the Imangala hobali of Chitradurga district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X