ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೋಂ ಐಸೋಲೇಷನ್‌ನಿಂದ ಕೋವಿಡ್ ಹೆಚ್ಚಳ; ಶ್ರೀರಾಮುಲು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ 25; "ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಲು ಹೋಂ ಐಸೋಲೇಷನ್ ಕಾರಣ" ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

Recommended Video

Corona ನಿಯಂತ್ರಣಕ್ಕೆ ಹೊಸ ಮಾರ್ಗ ಕಂಡುಹಿಡಿದ Sriramulu | Oneindia Kannada

ಮಂಗಳವಾರ ಚಿತ್ರದುರ್ಗದಲ್ಲಿ ಮಾತನಾಡಿ, "ಜಿಲ್ಲೆಯಲ್ಲಿ ಸೋಂಕಿತರಿಗೆ ಹೋಂ ಐಸೋಲೇಷನ್ ಬೇಡ ಎಂದು 22 ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ" ಎಂದರು.

ಕರ್ನಾಟಕ; ಗ್ರಾಮೀಣ ಭಾಗದಲ್ಲಿ ಹೋಂ ಐಸೋಲೇಷನ್‌ ಇಲ್ಲ ಕರ್ನಾಟಕ; ಗ್ರಾಮೀಣ ಭಾಗದಲ್ಲಿ ಹೋಂ ಐಸೋಲೇಷನ್‌ ಇಲ್ಲ

"ವೈಟ್ ಹಾಗೂ ಬ್ಲ್ಯಾಕ್ ಫಂಗಸ್ ಬಗ್ಗೆ ಯಾರೂ ಭಯ ಪಡುವುದುದ ಬೇಡ. ಇದಕ್ಕೆ ಕೇಂದ್ರ ಸರ್ಕಾರ ವ್ಯಾಕ್ಸಿನ್ ಕಳುಹಿಸಿದೆ. ಅದನ್ನು ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಕಳಿಸಬೇಕಾಗಿದೆ. ಇದರ ಜೊತೆಗೆ ಕೋವಿಡ್ ವ್ಯಾಕ್ಸಿನ್‌ಗಳು ಇನ್ನು ಹೆಚ್ಚು ಹೆಚ್ಚು ಬೇಕಾಗಿದೆ" ಎಂದು ತಿಳಿಸಿದರು.

ಲಸಿಕೆ ದುರ್ಬಲಗೊಳಿಸುವಂತೆ ಕೋವಿಡ್ ರೂಪಾಂತರವಾಗಿಲ್ಲ ಆದರೆ..WHO ಎಚ್ಚರಿಕೆಲಸಿಕೆ ದುರ್ಬಲಗೊಳಿಸುವಂತೆ ಕೋವಿಡ್ ರೂಪಾಂತರವಾಗಿಲ್ಲ ಆದರೆ..WHO ಎಚ್ಚರಿಕೆ

 Covid Cases Rise Due To Home Isolation Says Minister B Sriramulu

ಕೊರೊನಾ ವಿಚಾರದಲ್ಲಿ ವಿರೋಧ ಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, "ಕೋವಿಡ್ ವಿಚಾರದಲ್ಲಿ ಕೆಲವು ಪಕ್ಷಗಳು ರಾಜಕಾರಣ ಮಾಡುತ್ತಿವೆ. ಇದು ನೋವಿನ ಸಂಗತಿಯಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.

ನಕಲಿ ಕೋವಿಡ್ ನೆಗೆಟಿವ್‌ ವರದಿ ಕೊಡುತ್ತಿದ್ದ ಪತ್ರಕರ್ತನ ಬಂಧನ ನಕಲಿ ಕೋವಿಡ್ ನೆಗೆಟಿವ್‌ ವರದಿ ಕೊಡುತ್ತಿದ್ದ ಪತ್ರಕರ್ತನ ಬಂಧನ

"ಸಾವಿನ ಮನೆಯಲ್ಲಿ ರಾಜಕಾರಣ ಮಾಡುವಂತ ಕೆಲಸ ಆಗಬಾರದು. ಬದಲಿಗೆ ಸಾಂತ್ವನ ಹೇಳುವ ಕೆಲಸ ನಡೆಯಬೇಕಾಗಿದೆ. ವಿರೋಧ ಪಕ್ಷಗಳು ವ್ಯಾಕ್ಸಿನ್ ಹಾಗೂ ಸರ್ಕಾರ ಮಾಡುವ ಕೆಲಸಗಳ ಬಗ್ಗೆ ಟೀಕೆ ಮಾಡುತ್ತಾರೆ. ವಿರೋಧ ಪಕ್ಷಗಳ ಕೆಲಸವೇನು?, ಟೀಕೆ ಮಾಡಿಕೊಂಡು ರಾಜಕಾರಣ ಮಾಡೋದೆ ಕೆಲಸನಾ?" ಎಂದು ಪ್ರಶ್ನಿಸಿದರು.

"ಮುಖ್ಯ ಮಂತ್ರಿಗಳನ್ನು ಟೀಕೆ ಮಾಡುವುದು ಹೋರಾಟ ಎಂದುಕೊಂಡಿದ್ದಾರೆ. ಮಹಾ ಮಾರಿ ಸೋಂಕನ್ನು ಓಡಿಸಲು ಸಿಎಂ, ಸಚಿವರು ಹಾಗೂ ಜಿಲ್ಲಾಡಳಿತ ದಿನದ 24 ಗಂಟೆ ಜನರ ಜೀವ ಉಳಿಸುವ ಕೆಲಸ ಮಾಡುತ್ತಿದ್ದೇವೆ" ಎಂದು ಸಚಿವರು ಹೇಳಿದರು.

"ಜಿಲ್ಲೆಯ 19 ಹಳ್ಳಿಗಳಲ್ಲಿ ಕೂಡ ಸೋಂಕು ಹೆಚ್ಚಾಗಿದೆ. ಅಲ್ಲಿಯೂ ಕೂಡ ತಪಾಸಣೆ ಕಾರ್ಯ ನಡೆಯುತ್ತಿದ್ದು, ಜಿಲ್ಲಾಡಳಿತ ಹೆಚ್ಚು ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿದ್ದೇವೆ. ಇದರ ಜೊತೆಗೆ ಆಕ್ಸಿಜನ್ ಬೆಡ್ ವ್ಯವಸ್ಥೆ ಕೂಡ ಮಾಡಲಾಗಿದೆ" ಎಂದು ಸಚಿವರು ವಿವರಣೆ ನೀಡಿದರು.

English summary
Covid cases rise in rural areas due to home isolation said minister B. Sriramulu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X