ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಪಂಚಕ್ಕೆ ವೈರಸ್ ಗಂಡಾಂತರ‌ವಾಗಿದೆ: ಗೋವಿಂದ ಕಾರಜೋಳ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 13: "ಕೊರೊನಾ ವೈರಸ್ ನಿಂದ ಪ್ರಪಂಚ ಗಂಡಾಂತರದಲ್ಲಿದೆ. ದೇಶ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಆರ್ಥಿಕ ತೊಂದರೆ ಬಂದಿದೆ" ಎಂದಿದ್ದಾರೆ ಡಿಸಿಎಂ ಗೋವಿಂದ ಕಾರಜೋಳ.

ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಈಗ ಜನರ ಸ್ಥಿತಿ ಶೋಚನೀಯವಾಗಿದೆ. ಉದ್ಯೋಗ‌ ಸಮಸ್ಯೆ ಉದ್ಭವಿಸಿದೆ. ಇಷ್ಟೆಲ್ಲಾ ಆಗಿದ್ದರೂ ಅನೇಕ‌ ಕಡೆ ಜನ ಸಹಕರಿಸುತ್ತಿಲ್ಲ. ಕೊರೊನಾ ಸೋಂಕು ಹತೋಟಿಗೆ ಬರಲು ಜನರು ಸಹಕಾರ ನೀಡಬೇಕು.ರಾಜ್ಯದಲ್ಲಿ 200ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ ಏಳು ಸಾವು ನೋವು ಸಂಭವಿಸಿವೆ" ಎಂದು ಮಾಹಿತಿ ನೀಡಿದರು.

ದೆಹಲಿ ಮಸೀದಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು ಬಾಗಲಕೋಟೆಯ 19 ಜನದೆಹಲಿ ಮಸೀದಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು ಬಾಗಲಕೋಟೆಯ 19 ಜನ

ಈ ನಡುವೆ ಆರೋಗ್ಯ ಸಿಬ್ಬಂದಿ ಮೇಲೆ‌ ದೌರ್ಜನ್ಯ ನಡೆಯುವ ಪ್ರಕರಣಗಳೂ ನಡೆಯುತ್ತಿವೆ. ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರಿಗೆ ಒತ್ತಾಯ ಪೂರ್ವಕ ಸಂಬಳ ಕಡಿತದ ಚಿಂತನೆ ಇಲ್ಲ ಎಂದು ತಿಳಿಸಿದರು.

Coronavirus Becoming Tough In World Said DCM Govinda Karajola

ಇದೇ ಸಂದರ್ಭ ರೇಷನ್ ಕಾರ್ಡ್‌ ಇಲ್ಲದವರಿಗೆ ತಾತ್ಕಾಲಿಕ ಕಾರ್ಡ್ ನೀಡಿ ಪಡಿತರ‌ ವಿತರಣೆಗೆ ಸೂಚನೆ ನೀಡಿದರು.

English summary
"coronavirus becoming tough world wide. The situation becoming critical" said dcm govinda karajola in chitradurga
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X