ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಭಟನೆ ಮೂಲಕ ಕಾಂಗ್ರೆಸ್‌ನಿಂದ ಬೆದರಿಕೆ: ಬಿ.ಸಿ. ಪಾಟೀಲ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜೂ. 16: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಇಡಿಯವರು ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಪ್ರತಿಭಟನೆ ನಡೆಸುವ ಮೂಲಕ ಧಮ್ಕಿ ಹಾಕಿ ಬೆದರಿಕೆ ಒಡ್ಡುವುದು ಉದ್ಧಟತನ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದರು.

ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಮುಖಂಡರದ್ದು ಮೂರ್ಖತನದ ಪರಮಾವಧಿಯಾಗಿದ್ದು, ದೇಶದಲ್ಲಿ ಕಾನೂನಿಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು. ಇನ್ನು ಇಡಿ ಕೇಸ್ ದಾಖಲಿಸಿದ್ದು ಸುಬ್ರಹ್ಮಣ್ಯ ಸ್ವಾಮಿ, ಬಿಜೆಪಿ ಪಕ್ಷ ಅಲ್ಲ, ವಿಚಾರಣೆ ತಪ್ಪು ಅನ್ನೋದು ಕಾನೂನು, ಸಂವಿಧಾನ ವಿರೋಧಿ ಎಂದರು.

ಚಿತ್ರದುರ್ಗ; ಹಿರಿಯೂರಿನಲ್ಲಿ ಮಳೆ ಆರ್ಭಟ, ಜನರ ಪರದಾಟಚಿತ್ರದುರ್ಗ; ಹಿರಿಯೂರಿನಲ್ಲಿ ಮಳೆ ಆರ್ಭಟ, ಜನರ ಪರದಾಟ

ಇದೇ ವೇಳೆ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆ ಹಾಜರಾಗಿದ್ದಾರೆ.

 ಪ್ರತಿಭಟನೆಯಿಂದ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ತೊಂದರೆ

ಪ್ರತಿಭಟನೆಯಿಂದ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ತೊಂದರೆ

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿಚಾರಣೆ ನಡೆಯುತ್ತಿದೆ. ಕಾಂಗ್ರೆಸ್ಸಿಗರಿಗೆ ಯಾರು ಬುದ್ಧಿ ಹೇಳಬೇಕು ಅರ್ಥ ಆಗ್ತಿಲ್ಲ, ಕೊಲೆ, ದರೋಡೆ ಮಾಡಿದವರು ಗಲಾಟೆಕೋರರು, ಓಸಿಯವರು ಹೀಗೆ ವಿಚಾರಣೆ ಮಾಡಕೂಡದೆಂದರೆ ಕಾನೂನು ಸುವ್ಯವಸ್ಥೆ ಉಳಿಯುತ್ತದೆಯೇ ? ಎಂದು ಪ್ರಶ್ನೆ ಹಾಕುವ ಮೂಲಕ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು. ರಾಹುಲ್ ಗಾಂಧಿ ಒಂದು ವೇಳೆ ತಪ್ಪು ಮಾಡಿಲ್ಲ ಎಂಬುದಾದರೆ ರಕ್ಷಣೆ ಸಿಗುತ್ತದೆ. ಆದರೆ ಪ್ರತಿಭಟನೆ ಮೂಲಕ ಧಮ್ಕಿ ಹಾಕಿ ಬೆದರಿಕೆ ಒಡ್ಡುವುದು ಉದ್ಧಟತನ ಅಲ್ವಾ ಎಂದರು. ಪ್ರತಿಭಟನೆಯಿಂದ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇಡೀ ಬೆಂಗಳೂರು ಸಂಚಾರ‌ ಅಸ್ತವ್ಯಸ್ತ ಆಗಿ ಜನರಿಗೆ ತುಂಬಾ ತೊಂದರೆ ಉಂಟಾಗಿತ್ತು. ಜೈಲಿಗೆ ಹೋಗುವ ಕೆಲಸ ಮಾಡಿದ್ದರೆ ಜೈಲಿಗೆ ಹೋಗೇ ಹೋಗ್ತಾರೆ ಎಂದು ಕಾಂಗ್ರೆಸ್ ಪಕ್ಷದ ಪ್ರತಿಭಟನೆಗೆ ತಿರುಗೇಟು ನೀಡಿದರು.

ಹಿರಿಯೂರು: 94 ದಿನಗಳ ಧರಣಿ ವಾಪಸ್, ನೀರಿಗಾಗಿ ಹೋರಾಡುತ್ತಿದ್ದವರಿಗೆ ತಾತ್ಕಾಲಿಕ ಜಯಹಿರಿಯೂರು: 94 ದಿನಗಳ ಧರಣಿ ವಾಪಸ್, ನೀರಿಗಾಗಿ ಹೋರಾಡುತ್ತಿದ್ದವರಿಗೆ ತಾತ್ಕಾಲಿಕ ಜಯ

 ಯಾರದೋ ಹೇಳಿಕೆ ಮೇಲೆ ನಡೆಯುವ ಸಂಸ್ಥೆ ಅಲ್ಲ

ಯಾರದೋ ಹೇಳಿಕೆ ಮೇಲೆ ನಡೆಯುವ ಸಂಸ್ಥೆ ಅಲ್ಲ

ಇಡಿ ಸ್ವತಂತ್ರ ಸಂಸ್ಥೆಯಾಗಿದೆ. ಕೇಂದ್ರ ಮಂತ್ರಿ ಅಥವಾ ಇನ್ಯಾರೋ ಹೇಳಿಕೆ ಮೇಲೆ ನಡೆಯುವ ಸಂಸ್ಥೆ ಅಲ್ಲ ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಬ್ರಹ್ಮಣ್ಯ ಸ್ವಾಮಿ ನೇರವಾಗಿ ಬಿಜೆಪಿ ಪಕ್ಷದ ಮೇಲೆ ಕಾಮೆಂಟ್ ಮಾಡುತ್ತಾರೆ. ಪಕ್ಷಾತೀತವಾಗಿ ಅವರು ಏನೇನು ಮಾಡುತ್ತಾರೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಎಂದು ಹೇಳಿದರು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಬ್ಬರ ಮೇಲೆ ಕೇಸ್ ದಾಖಲಿಸಿದ್ದಾರೆ ಎಂಬುದು ಕಾಂಗ್ರೆಸ್ ನ ತಪ್ಪು ಕಲ್ಪನೆ ಎಂದರು. ಕಾಂಗ್ರೆಸ್ ಸರ್ಕಾರ ಇದ್ದಾಗ ಅಮಿತ್ ಷಾ ಅವರನ್ನು ವಿಚಾರಣೆ ನಡೆಸಿ ಜೈಲಿಗೆ ಕಳಿಸಿರಲಿಲ್ವಾ ಎಂದು ಪ್ರಶ್ನೆ ಹಾಕಿದರು.

 ರಾಹುಲ್ ವ್ಯಕ್ತಿಯಲ್ಲ, ಶಕ್ತಿ

ರಾಹುಲ್ ವ್ಯಕ್ತಿಯಲ್ಲ, ಶಕ್ತಿ

ರಾಹುಲ್ ಗಾಂಧಿ ಕೇವಲ ವ್ಯಕ್ತಿಯಲ್ಲ. ಅವರು ಶಕ್ತಿ ಅನ್ನುವುದನ್ನು ಬಿಜೆಪಿ ಸರಕಾರ ಸಾಬೀತು ಮಾಡಿದೆ. ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಸರಕಾರಕ್ಕೆ ಭಯವಿದೆ. ರಾಹುಲ್ ಗಾಂಧಿ ಹೆಸರಿಗೆ ಕಳಂಕ ತರಲು ನೋಡುತ್ತಿದ್ದಾರೆ ಅಂತಾ ಮಂಗಳೂರಿನಲ್ಲಿ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.

ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಯುಟಿ ಖಾದರ್,ದೇಶದ ಜನ ರಾಹುಲ್ ನಾಯಕತ್ವವನ್ನು ಒಪ್ಪುತ್ತಿದ್ದಾರೆಂಬ ಭಯದಲ್ಲಿ ಆವರ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಸುಳ್ಳು ಆರೋಪಗಳನ್ನು ಮಾಡಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ. ಹಿಂದೆ ರಾಜೀವ ಗಾಂಧಿ ಬಗ್ಗೆ ಬೋಫೋರ್ಸ್ ಹಗರಣ ನೆಪದಲ್ಲಿ ಕಿರುಕುಳ ನೀಡಲಾಗಿತ್ತು‌. ಬೋಫೋರ್ಸ್ ಕಾರಣದಿಂದ ಕಾರ್ಗಿಲ್ ನಲ್ಲಿ ಪಾಕಿಸ್ತಾನ ವಿರುದ್ಧ ಗೆಲ್ಲುವಂತಾಗಿತ್ತು. ರಾಜೀವ್ ಗಾಂಧಿಯನ್ನು ತನಿಖೆಯ ಬಳಿಕ ಆರೋಪ ಮುಕ್ತರಾಗಿದ್ದಾರೆ. ರಾಹುಲ್ ಗಾಂಧಿ ಕೇವಲ ವ್ಯಕ್ತಿಯಲ್ಲ. ಅವರು ಶಕ್ತಿ ಅನ್ನುವುದನ್ನು ಬಿಜೆಪಿ ಸರಕಾರ ಸಾಬೀತು‌ ಮಾಡಿದೆ. ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಸರಕಾರಕ್ಕೆ ಭಯವಿದೆ ಅಂತಾ ಯುಟಿ ಖಾದರ್ ಹೇಳಿದ್ದಾರೆ.

 ರಾಹುಲ್ ವ್ಯಕ್ತಿತ್ವಕ್ಕೆ ಕಳಂಕ ತರುವ ಕೆಲಸ

ರಾಹುಲ್ ವ್ಯಕ್ತಿತ್ವಕ್ಕೆ ಕಳಂಕ ತರುವ ಕೆಲಸ

ರಾಹುಲ್ ಗಾಂಧಿಯವರ ಭದ್ಧತೆ, ವಾಕ್ ಚಾತುರ್ಯ, ವಿಷಯ ಜ್ಞಾನದ ಬಗ್ಗೆ ಬಿಜೆಪಿಗೆ ಭಯ ಇದೆ. ಆದರೆ ಜನ ಸತ್ಯದ ವಿಚಾರವನ್ನು ಅರಿತುಕೊಳ್ಳುತ್ತಾರೆ. ದೂರದರ್ಶಿತ್ವದ ನಾಯಕತ್ವವನ್ನು ಜನ ಒಪ್ಪುತ್ತಾರೆ. ಬಿಜೆಪಿ ರಾಹುಲ್ ವ್ಯಕ್ತಿತ್ವಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ ಇದು ಜಾಸ್ತಿ ದಿನ ನಡೆಯೋದಿಲ್ಲ. ಜನ ಸತ್ಯವನ್ನು ಅರಿತುಕೊಳ್ಳುತ್ತಾರೆ .ರಾಜಕೀಯ ಪ್ರೇರಿತ ಸುಳ್ಳು ಅರೋಪ, ಇಲ್ಲಸಲ್ಲದ ಆರೋಪಗಳ ಬಗ್ಗೆ ಜನ ತಿಳಿದುಕೊಳ್ಳುತ್ತಾರೆ. ಇಂದು ಪಾಕಿಸ್ತಾನ ಗಡಿಯಿಂದ 250 ಕಿಲೋ ಆರ್ ಡಿಎಕ್ಸ್ ತಂದಿಟ್ಟರೂ ಸರ್ಕಾರಕ್ಕೆ ತಿಳಿಯೋದಿಲ್ಲ. ಇವತ್ತು ಚುನಾವಣೆ ಕಾಲದಲ್ಲಿ ನಾಯಕರ ಮೇಲೆ ಟಾರ್ಗೆಟ್ ಪಾಲಿಟಿಕ್ಸ್ ನಡೆಯುತ್ತಿದೆ. ಎಫ್ ಐ ಆರ್ ಇಲ್ಲದೆ ರಾಜಕೀಯ ನಾಯಕರನ್ನು ಚುನಾವಣೆ ಸಂದರ್ಭದಲ್ಲಿ ಕಿರುಕುಳ ನೀಡುತ್ತಿರುವುದು ಸರಿಯಲ್ಲ. ಬಿಜೆಪಿ ಸರಕಾರದಲ್ಲಿ ಪತ್ರಕರ್ತರು ಸೇರಿದಂತೆ ಯಾರು ಕೂಡ ನೆಮ್ಮದಿ ಇಲ್ಲದಂತಾಗಿದ್ದಾರೆ ಅಂತಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಹೇಳಿದ್ದಾರೆ.

 ಚುನಾವಣೆ ಸಮೀಪ ಬರುತ್ತಿದ್ದಂತೆ ರಾಹುಲ್‌ ಗಾಂಧಿ ಕಾಣುತ್ತಾರೆ

ಚುನಾವಣೆ ಸಮೀಪ ಬರುತ್ತಿದ್ದಂತೆ ರಾಹುಲ್‌ ಗಾಂಧಿ ಕಾಣುತ್ತಾರೆ

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಮತ್ತೆ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆ ಹಾಜರಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪವನ್ನು ಎದುರಿಸುತ್ತಿದ್ದಾರೆ. ಸೋನಿಯಾ ಗಾಂಧಿಗೂ ಇಡಿ ಸಮನ್ಸ್ ನೀಡಿದ್ದು, ಕೊರೋನಾ ಕಾರಣದಿಂದಾಗಿ ಅವರು ವಿಚಾರಣೆಗೆ ಗೈರಾಗಿದ್ದಾರೆ. ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ಕಾರ್ಯಕರ್ತರು ದೇಶದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಯಾವ ಕಾನೂನಿನಡಿ ಜಾರಿ ನಿರ್ದೇಶನಾಲಯದವರು ಬಂಧನ ಮಾಡುತ್ತಾರೆ ಎಂಬುದು ಮೊದಲು ತಿಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.

ಚುನಾವಣೆ ಸಮೀಪ ಬರುತ್ತಿದ್ದಂತೆ ಇವರಿಗೆ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಎದ್ದು ಕಾಣುತ್ತಾರೆ. ಕೇವಲ ಮಾನಸಿಕ ಹಿಂಸೆ ನೀಡಲು ಈ ವಿಚಾರಣೆ ಎಂಬ ನಾಟಕ ಮುಂದುವರಿದಿದೆ. ಎಲ್ಲೆಡೆ ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

(ಒನ್ಇಂಡಿಯಾ ಸುದ್ದಿ)

Recommended Video

HD Kumaraswamy ಅವರು ಹಿಂದಿ ಹೇರಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ | Oneindia Kannada

English summary
Minister BC Patil lashed out against Congress for protesting against ED enquiry to Rahul Gandhi. He alleged that Congress is threatening the govt through protests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X