ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯನವರು ಇನ್ನೂ ಸಣ್ಣತನ ಬಿಟ್ಟಿಲ್ಲ: ಸಚಿವ ಈಶ್ವರಪ್ಪ

|
Google Oneindia Kannada News

ಚಿತ್ರದುರ್ಗ, ನವೆಂಬರ್ 06: ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದ್ದು, ತನಿಖೆಗೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿಯವರ ವಿಚಾರಣೆ ನಡೆಯುತ್ತಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲೂ ಅವರ ಮೇಲೆ ರೈಡ್ ಗಳು ಆಗಿದ್ದವು. ತಪ್ಪು ಮಾಡಿದವರ ತನಿಖೆ ನಡೆಸುವುದು ತಪ್ಪಾ? ಎಂದು ಪ್ರಶ್ನಿಸಿದ್ದಾರೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ.

ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಮಾತನಾಡಿದ ಅವರು, "ವಿನಯ್ ಕುಲಕರ್ಣಿ ವಿಚಾರಣೆ ಕುಇರತು ಕಾಂಗ್ರೆಸ್ ನವರು ಹಲವು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಉದ್ದೇಶವಿದೆ ಎನ್ನುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡುವುದು ಕಾಂಗ್ರೆಸ್ ನವರ ಹುಟ್ಟುಗುಣ. ಸಿದ್ದರಾಮಯ್ಯಗೆ ವಿರೋಧ ಪಕ್ಷ ನಾಯಕನಾಗಿರಲು ಯೋಗ್ಯತೆ ಇಲ್ಲ. ಅವರು ಅಯೋಗ್ಯರು. ರಾಜ್ಯದ ಜನತೆ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿದ್ದರು. ಆದರೂ ಅವರು ಸಣ್ಣತನ ಬಿಟ್ಟಿಲ್ಲ, ಸಿದ್ದರಾಮಯ್ಯರವರ ಯಾವ ಹೇಳಿಕೆಗೂ ಬೆಲೆಯಿಲ್ಲ" ಎಂದಿದ್ದಾರೆ.

 Congress Is Giving Unnecessary Statement On Government Said KS Eshwarappa

 "ಸಿಎಂ ಸ್ಥಾನ ಹೋದ ನಂತರ ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ''

Recommended Video

ಮುಗೀತಾ counting !! | All eyes on Pennsylvania as US election counting continues | Oneindia Kannada

"ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ" ಎಂದರು. ದೇಶದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ಮದುವೆಯಾಗಿ ನಂತರ ಹೆಣ್ಣು ಮಕ್ಕಳನ್ನು ಬೀದಿಗೆ ತಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲವ್ ಜಿಹಾದ್ ನಿಷೇಧ ಕಾಯ್ದೆ ತರಲು ಮುಂದಾಗಿದ್ದೇವೆ ಎಂದು ತಿಳಿಸಿದರು.

English summary
CBI is investigating the murder case of Yogesh Gowda and Vinay Kulkarni is under investigation. But congress is giving unnecessary statement on bjp government, said Rural Development Minister KS Eshwarappa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X