ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಹೆಲಿಕಾಪ್ಟರ್ ನಿಂದ ಇಳಿಸಿದ(?) ಆ ನಿಗೂಢ ಬಾಕ್ಸ್ ನ ರಹಸ್ಯವೇನು?

|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 13: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 09 ರದು ಕರ್ನಾಟಕದ ಕೋಟೆ ನಾಡು ಚಿತ್ರದುರ್ಗಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿದ್ದ ಹೆಲಿಕಾಪ್ಟರ್ ನಿಂದ ಕೆಳಗಿಳಿಸಲಾಗಿದೆ ಎನ್ನಲಾದ ನಿಗೂಢ ಕಪ್ಪು ಪೆಟ್ಟಿಗೆಯೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಅಷ್ಟಕ್ಕೂ ಇದು ಅಂದಿನದೇ ವಿಡಿಯೋ ಹೌದೋ, ಅಲ್ಲವೋ ಎಂಬ ಬಗ್ಗೆ ಮತ್ತು ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಬೇಕಿದೆ. . ಆದರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಈ ಬಗ್ಗೆ ಈಗಾಗಲೇ ಟ್ವೀಟ್ ಮಾಡಿದ್ದು, ಈ ಬಾಕ್ಸ್ ನ ರಹಸ್ಯವನ್ನು ಚುನಾವಣಾ ಆಯೋಗ ಭೇದಿಸಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದಂಥ ರಿಮೋಟ್ ಕಂಟ್ರೋಲ್ ಸರ್ಕಾರ ಬೇಕೆ?: ಮೋದಿಕರ್ನಾಟಕದಂಥ ರಿಮೋಟ್ ಕಂಟ್ರೋಲ್ ಸರ್ಕಾರ ಬೇಕೆ?: ಮೋದಿ

ಈ ಬಾಕ್ಸ್ ಅನ್ನು ಇಬ್ಬರು ಲಗುಬಗೆಯಲ್ಲಿ ತೆಗೆದುಕೊಂಡು ಹೋಗುತ್ತಿರುವ ಮತ್ತು ನಂತರ ಅದನ್ನು ಬಿಳಿ ಬಣ್ಣದ ಇನ್ನೊವಾ ಕಾರಿಗೆ ತುಂಬಿ, ಕೂಡಲೇ ಆ ಕಾರು ಮರೆಯಾದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡೀಯೋ ಸಾಮಾಜಿಕ ಮಾಧ್ಯಗಳಲ್ಲಿ ತಲ್ಲಣ ಸೃಷ್ಟಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇದು ನಿಜಕ್ಕೂ ಮೋದಿ ಅವರ ಹೆಲಿಕಾಪ್ಟರ್ ನಿಂದಲೇ ಕೆಳಗಿಳಿಸಲಾಗದ ಪೆಟ್ಟಿಗೆಯಾ? ಹಾಗಿದ್ದರೆ ಅದರಲ್ಲಿ ಏನಿದೆ? ಆ ಪೆಟ್ಟಿಗೆಯಲ್ಲಿ ಏನೂ ಇಲ್ಲವೆಂದಾಗಿದ್ದರೆ ಅದನ್ನು ಅಷ್ಟು ಲಗುಬಗೆಯಿಂದ ತುಂಬಿ, ಕಾರಿನಲ್ಲಿ ಕಳಿಸುವ ಅಗತ್ಯವೇನಿತ್ತು? ಅಷ್ಟಕ್ಕೂ ಆ ಕಾರು ಯಾರಿಗೆ ಸೇರಿದ್ದು, ನಂತರ ಅದು ಎಲ್ಲಿ ಹೋಯಿತು? ಎಂಬಿತ್ಯಾದ ಪ್ರಶ್ನೆಗಳು ಈ ವಿಡಿಯೋ ಸುತ್ತ ಎದ್ದಿವೆ.

ಆ ಪೆಟ್ಟಿಗೆಯಲ್ಲಿ ಏನಿದೆ?

ಚಿತ್ರದುರ್ಗದಲ್ಲಿ 'ನಿನ್ನೆ' ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ನಿಂದ ಒಂದು ಕಪ್ಪು ಪೆಟ್ಟಿಗೆಯನ್ನು ಕೆಳಗಿಳಿಸಿ ನಂತರ ಅದನ್ನು ಇನ್ನೊವಾ ಕಾರಿನಲ್ಲಿ ತುಂಬಲಾಗಿದೆ. ಆ ಕಾರು ತಕ್ಷಣವೇ ಅಲಲಿಂದ ಮರೆಯಾಗಿದೆ. ಚುನಾವಣಾ ಆಯೋಗ ಆ ಪೆಟ್ಟಿಗೆಯಲ್ಲಿ ಏನಿತ್ತು ಮತ್ತು ಆ ವಾಹನ ಯಾರಿಗೆ ಸೇರಿದ್ದು ಎಂಬುದನ್ನು ಪರೀಕ್ಷಿಸಬೇಕು ಎಂದು ದೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ. (ಆದರೆ ದಿನೇಶ್ ಅವರು ಇಂದು ಮಾಡಿದ ಟ್ವೀಟ್ ನಲ್ಲಿ ನರೇಂದ್ರ ಮೋದಿ 'ನಿನ್ನೆ' ಚಿತ್ರದುರ್ಗಕ್ಕೆ ಬಂದಿದ್ದಾಗ ಎಂದು ಉಲ್ಲೇಖಿಸಲಾಗಿದ್ದು, ಮೋದಿ ಅವರಿ ಏಪ್ರಿಲ್ 9 ರಂದು ಚಿತ್ರದುರ್ಗದಲ್ಲಿದ್ದರು, ನಿನ್ನೆ ಅವರು ಕೊಪ್ಪಳದಲ್ಲಿ ಸಮಾವೇಶದಲ್ಲಿ ಬಾಗಿಯಾಗಿದ್ದರು!)

ಇದು ಭದ್ರತಾ ಶಿಷ್ಟಾಚಾರದಲ್ಲಿ ಬರುವುದಿಲ್ಲವೇ?

ಚಿತ್ರದುರ್ಗದಲ್ಲಿ ಮೋದಿಯವರ ಹೆಲಿಕಾಪ್ಟರ್ ನಿಂದ ಕಪ್ಪು ಪೆಟ್ಟಿಗೆಯೊಂದನ್ನು ಇಳಿಸಿ, ಅದನ್ನು ಇನ್ನೊವಾ ಕಾರಿನಲ್ಲಿ ತುಂಬಿ ಕಳಿಸಲಾಗಿದೆ. ಈಗಿರುವ ಪ್ರಶ್ನೆ: ಈ ಪೆಟ್ಟಿಗೆ ಏಕೆ ಭದ್ರತಾ ಶಿಷ್ಟಾಚಾರದ ಭಾಗವಾಗಿಲ್ಲ? ಅದು ಯಾರ ಕಾರು? ಎಂದು ಶ್ರೀವತ್ಸ ಎಂಬುವವರು ಟ್ವೀಟ್ ಮಾಡಿದ್ದಾರೆ.

ನಿಮ್ಮ ಖಾತೆಗೆ ಮೋದಿ ಹಣ ಹಾಕಿಲ್ಲ, ನಾವು ಹಾಕುತ್ತೇವೆ: ರಾಹುಲ್ LIVEನಿಮ್ಮ ಖಾತೆಗೆ ಮೋದಿ ಹಣ ಹಾಕಿಲ್ಲ, ನಾವು ಹಾಕುತ್ತೇವೆ: ರಾಹುಲ್ LIVE

ಮಾಧ್ಯಮ, ಚುನಾವಣಾ ಆಯೋಗ ಏನು ಮಾಡುತ್ತಿದೆ?

"ಆ ಪೆಟ್ಟಿಗೆಯಲ್ಲಿ ಏನಿತ್ತು? ಅದನ್ನು ಅವಸರದಲ್ಲಿ ತೆಗೆದುಕೊಂಡು ಹೋಗಿದ್ದೇಕೆ? ಆ ಖಾಸಗಿ ಇನ್ನೋವಾ ಕಾರ್ ನಲ್ಲಿ ತೆಗೆದುಕೊಂಡು ಹೋಗಿದ್ದೇಕೆ? ಇಲ್ಲಿ ಏನೋ ನಡೆಯುತ್ತಿದೆ ಎನ್ನಿಸುತ್ತಿದೆ. ಉತ್ತರ ಸಿಕ್ಕುತ್ತಿಲ್ಲ! ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸುತ್ತಾರಾ? ಆ ಪೆಟ್ಟಿಗೆಯಲ್ಲಿ ಏನಿತ್ತು ಎಂದು ಚುನಾವಣಾ ಆಯೋಗ ಪ್ರಶ್ನಿಸುತ್ತದಾ?"- ಶ್ರೀವತ್ಸ

ಅನುಮಾನಾಸ್ಪದ ಘಟನೆ ಸಲ್ಲ

ಪಾರದರ್ಶಕ ಮತ್ತು ಪ್ರಾಮಾಣಿಕ ಚುನಾವಣೆಗಾಗಿ ಇಂಥ ಅನುಮಾನಾಸ್ಪದ ನಡವಳಿಕೆ, ಘಟನೆ ಬಗ್ಗೆ ಕ್ರಮ ಕೈಗೊಳ್ಳಲೇಬೇಕು. ಮಾಧ್ಯಮಗಳು ಈ ಬಗ್ಗೆ ಪ್ರಶ್ನೆ ಕೇಳುವಂತೆ ಮನವಿ ಮಾಡುತ್ತೇನೆ- ಶ್ರೀವತ್ಸ

ದೇವೇಗೌಡರ ಮಾತು ನಂಬುತ್ತೀರಾ? ಕೊಪ್ಪಳದಲ್ಲಿ ಮೋದಿ ಪ್ರಶ್ನೆದೇವೇಗೌಡರ ಮಾತು ನಂಬುತ್ತೀರಾ? ಕೊಪ್ಪಳದಲ್ಲಿ ಮೋದಿ ಪ್ರಶ್ನೆ

English summary
KPCC president Dinesh Gundu Rao Tweeted, "A mysterious box was unloaded from PM Modi’s helicopter at Chitradurga yesterday and loaded into a private Innova which quickly sped away. The Election Commission should enquire into what was in the box and to whom the vehicle belonged"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X