ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದಲ್ಲಿ ಸತತ ಮಳೆ, ಜಿಲ್ಲೆಯಲ್ಲಿ 34 ಮನೆಗಳಿಗೆ ಹಾನಿ

|
Google Oneindia Kannada News

ಚಿತ್ರದುರ್ಗ, ನವೆಂಬರ್18: ಚಿತ್ರದುರ್ಗ ಜಿಲ್ಲೆಯಲ್ಲಿ ನವೆಂಬರ್ 18ರಂದು ಬಿದ್ದ ಮಳೆಯ ವಿವರದನ್ವಯ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗದಲ್ಲಿ 11.2 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ 2.2 ಹಾಗೂ ತಾಳ್ಯ 2 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರು 8.8, ಬಬ್ಬೂರು 5, ಈಶ್ವರಗೆರೆ 3.2 ಹಾಗೂ ಸೂಗೂರಿನಲ್ಲಿ 3.4 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆಯಲ್ಲಿ 1.4 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆ 3, ನಾಯಕನಹಟ್ಟಿ 2.4 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಬಾಗೂರಿನಲ್ಲಿ 3 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 1 ಮಿ.ಮೀ ಮಳೆಯಾಗಿದೆ.

34 ಮನೆ ಹಾನಿ: ಜಿಲ್ಲೆಯಲ್ಲಿ ನವೆಂಬರ್ 18ರಂದು ಸುರಿದ ಮಳೆಗೆ ಜಿಲ್ಲೆಯಾದ್ಯಂತ 34 ಮನೆಗಳು ಹಾನಿಯಾಗಿವೆ. ತಾಲ್ಲೂಕುವಾರು ಮಳೆ ಹಾನಿ ವಿವರ ಇಂತಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 9 ಮನೆ ಹಾನಿ, ಚಳ್ಳಕೆರೆ ತಾಲ್ಲೂಕು-1 ಮನೆ ಹಾನಿ, ಹಿರಿಯೂರು ತಾಲ್ಲೂಕು-11 ಮನೆ ಹಾನಿ, ಹೊಳಲ್ಕೆರೆ ತಾಲ್ಲೂಕು-1 ಮನೆ ಹಾನಿ, ಹೊಸದುರ್ಗ ತಾಲ್ಲೂಕು-10 ಮನೆ ಹಾನಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 2 ಮನೆ ಹಾನಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 34 ಮನೆಗಳು ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Chitradurga Taluk Hobli level Rain record as on November 18, 2021

*****
ಡಿ.ಮರಿಕುಂಟೆಯಲ್ಲಿ 43 ಮಿ.ಮೀ ಮಳೆ

ಚಿತ್ರದುರ್ಗ ಜಿಲ್ಲೆಯಲ್ಲಿ ನವೆಂಬರ್ 17ರಂದು ಬಿದ್ದ ಮಳೆಯ ವಿವರದನ್ವಯ ಚಳ್ಳಕೆರೆ ತಾಲ್ಲೂಕಿನ ಡಿ.ಮರಿಕುಂಟೆಯಲ್ಲಿ 43.2 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆ 20, ಪರಶುರಾಂಪುರ 10.2, ನಾಯಕನಹಟ್ಟಿ 14.8, ತಳಕು 19.4 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮುರು 13, ರಾಯಾಪುರ 16.3, ಬಿ.ಜಿ.ಕೆರೆ 31.2 ಮಿ.ಮೀ, ರಾಂಪುರ 6.1 ಹಾಗೂ ದೇವಸಮುದ್ರದಲ್ಲಿ 5.4 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರು 36.4, ಬಬ್ಬೂರು 28, ಇಕ್ಕನೂರು 10.4, ಈಶ್ವರಗೆರೆ 8.8 ಹಾಗೂ ಸೂಗೂರಿನಲ್ಲಿ 35.2 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 6.4, ರಾಮಗಿರಿ 8.2, ಚಿಕ್ಕಜಾಜೂರು 8.2, ಬಿ.ದುರ್ಗ 12.2, ಹೆಚ್.ಡಿ.ಪುರ 3.2, ತಾಳ್ಯ 4.2 ಮಿ.ಮೀ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 8.4, ಬಾಗೂರು 20, ಮತ್ತೋಡು 22.4, ಶ್ರೀರಾಂಪುರ 30, ಮಾಡದಕೆರೆ 37 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 38.2, ಚಿತ್ರದುರ್ಗ-2ರಲ್ಲಿ 29.5, ಹಿರೇಗುಂಟನೂರು 1, ಭರಮಸಾಗರ 13, ಸಿರಿಗೆರೆ 7.6, ತುರುವನೂರು 18.2 ಹಾಗೂ ಐನಹಳ್ಳಿಯಲ್ಲಿ 19.8 ಮಿ.ಮೀ ಮಳೆಯಾಗಿದೆ. 41 ಮನೆ ಭಾಗಶಃ ಹಾನಿ: ಮಂಗಳವಾರ ಸುರಿದ ಮಳೆಗೆ ಚಿತ್ರದುರ್ಗ ಜಿಲ್ಲೆಯಾದ್ಯಂತ 41 ಮನೆ ಭಾಗಶಃ ಹಾನಿ, 40 ಕುರಿ ಹಾನಿ, 2 ಎಕರೆ ಭತ್ತ ಬೆಳೆ ಹಾಗೂ 2 ಎಕರೆ ರಾಗಿ ಬೆಳೆ ಹಾನಿಯಾಗಿದೆ.

Chitradurga Taluk Hobli level Rain record as on November 18, 2021

Recommended Video

600 ವರ್ಷಗಳ ನಂತರ ನಾಳೆ ಸಂಭವಿಸಲಿದೆ ಸುದೀರ್ಘ ಚಂದ್ರಗ್ರಹಣ | Oneindia Kannada

ತಾಲ್ಲೂಕುವಾರು ಮಳೆಹಾನಿ ವಿವರ ಇಂತಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 4 ಮನೆಗಳು ಭಾಗಶಃ ಹಾನಿಯಾಗಿವೆ. ಚಳ್ಳಕೆರೆ ತಾಲ್ಲೂಕಿನಲ್ಲಿ 7 ಮನೆ ಭಾಗಶಃ ಹಾನಿ, 7 ಕುರಿಗಳಿಗೆ ಸಿಡಿಲು ಬಡಿತವಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 14 ಮನೆ ಭಾಗಶಃ ಹಾನಿ ಹಾಗೂ ಎರಡು ಎಕರೆ ಭತ್ತ ಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 16 ಮನೆ ಭಾಗಶಃ ಹಾನಿ, 10 ಕುರಿಗಳು ನೀರಿನಲ್ಲಿ ಮುಳುಗಿವೆ. 23 ಕುರಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಎರಡು ಎಕರೆ ರಾಗಿ ಬೆಳೆ ಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕು ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಯಾವುದೇ ಮಳೆಹಾನಿ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

English summary
Heavy to moderate rainfall recorded in Chitradurga, Here is Taluk/Hobli level rainfall data recorded as on November 18
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X