ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಯಂ ಕ್ವಾರಂಟೈನ್ ಗೆ ಒಳಗಾದ ಚಿತ್ರದುರ್ಗದ ಯೋಧ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 10: ರಾಜ್ಯ ಮತ್ತು ದೇಶದಲ್ಲಿ ಕೊರೊನಾ ವೈರಸ್ ಮಹಾಮಾರಿ ರೋಗವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆದರೂ ಜನರು ದಿನನಿತ್ಯ ಜೀವನದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.

ಸರ್ಕಾರ ಮತ್ತು ಕೊರೊನಾ ವಾರಿಯರ್ಸ್ ಗಳು ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಸಂದರ್ಭದಲ್ಲಿ, ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದ ಜನರು ಸ್ವಯಂ ಆಗಿ ಕೊರೊನಾ ಟೆಸ್ಟ್ ಹಾಗೂ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ.

ಚಿತ್ರದುರ್ಗದಲ್ಲಿ ಶತಕದತ್ತ ಕೊರೊನಾ ವೈರಸ್ ಪ್ರಕರಣಚಿತ್ರದುರ್ಗದಲ್ಲಿ ಶತಕದತ್ತ ಕೊರೊನಾ ವೈರಸ್ ಪ್ರಕರಣ

ಇಂತಹ ಸನ್ನಿವೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಯೋಧರೊಬ್ಬರು ಜಮೀನಿನಲ್ಲಿ ಶೆಡ್ ಹಾಕಿಕೊಂಡು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

Chitradurga Soldier Who Is A Self-Inflicted Quarantine

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಖಂಡೇನಹಳ್ಳಿ ಗ್ರಾಮದ ಯೋಧ ಯೋಗೀಶ್ ರಜೆ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ್ದಾನೆ. 19 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಯೋಧ್ ಯೋಗೀಶ್ ಜುಲೈ 5 ರಂದು ಸ್ವಗ್ರಾಮಕ್ಕೆ ಆಗಮಿಸಿ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದು, ಉತ್ತರ ಪ್ರದೇಶದ ಝಾನ್ಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ.

ಚಿತ್ರದುರ್ಗ: ಚಿತ್ರದುರ್ಗ: "96 ವಯಸ್ಸಿನ ನಾನೇ ಕೊರೊನಾ ವೈರಸ್ ಗೆದ್ದು ಬಂದಿದ್ದೇನೆ, ಇನ್ನು...''

ವೈದ್ಯರು ಜಮೀನಿಗೆ ಭೇಟಿ ನೀಡಿ ಕೋವಿಡ್ ತಪಾಸಣೆ ನಡೆಸಿದ್ದಾರೆ. ತನ್ನಿಂದ ಗ್ರಾಮದ ಯಾರಿಗೂ ಸಮಸ್ಯೆ ಆಗಬಾರದೆಂದು ಸ್ವಯಂ ಕ್ವಾರಂಟೈನ್ ಗೆ ಯೋಧ ಒಳಗಾಗಿದ್ದಾನೆ.

English summary
A Soldier of Hiriyuru taluk in Chitradurga district has been self-quarantine for control of coronavirus spreading.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X